Don't Miss!
- Sports
ಸೂರ್ಯಕುಮಾರ್ ಯಾದವ್ ಸಾಮರ್ಥ್ಯ, ಭವಿಷ್ಯದ ಬಗ್ಗೆ ಆಶಿಶ್ ನೆಹ್ರಾ ನೀಡಿದ ಸಲಹೆ ಏನು?
- Finance
ಉದ್ಯೋಗವಿಲ್ಲದ ಯುವಕರಿಗೆ ಈ ರಾಜ್ಯದಲ್ಲಿ ನಿರುದ್ಯೋಗ ಭತ್ಯೆ
- News
iNCOVACC vaccine: ಮೂಗಿನ ಮೂಲಕ ನೀಡುವ ಇನ್ಕೊವ್ಯಾಕ್ ಕೊರೊನಾ ಲಸಿಕೆ ಬಿಡುಗಡೆ
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Technology
Samsung Galaxy: ಕೇವಲ 44 ರೂ. ಗಳ ಇಎಮ್ಐನಲ್ಲಿ ಖರೀದಿಸಿ ಗ್ಯಾಲಕ್ಸಿ A14 5G ಫೋನ್!
- Lifestyle
ಬೀಟ್ರೂಟ್ ಹೀಗೆ ಬಳಸಿದರೆ ಮುಖದ ಅಂದ ಹೆಚ್ಚುವುದು
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ದರ್ಶನ್ ನಟನೆಯ 'ಕ್ರಾಂತಿ' ರಿಲೀಸ್‌ಗೆ ಮುಹೂರ್ತ ಫಿಕ್ಸ್!
'ರಾಬರ್ಟ್' ಸಿನಿಮಾದ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈಗೆತ್ತಿಕೊಂಡಿರುವ ಹೊಸ ಸಿನಿಮಾ 'ಕ್ರಾಂತಿ'. ಈಗಾಗಲೇ ಚಿತ್ರದ ಫಸ್ಟ್ ಲುಕ್ ಮತ್ತು ಟೀಸರ್ ಕೂಡ ರಿಲೀಸ್ ಆಗಿದೆ. ಚಿತ್ರದಲ್ಲಿ ದರ್ಶನ್ ಯಾವ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವುದು ಟೀಸರ್‌ನಲ್ಲಿ ರಿವೀಲ್ ಆಗಿದೆ.
ಇದು ದರ್ಶನ್ ಅವರ 55ನೇ ಸಿನಿಮಾ ಎನ್ನುವುದು ವಿಶೇಷ. ಈಗಾಗಲೇ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಹುಟ್ಟು ಹಾಕಿದೆ. ದರ್ಶನ್ ಈ ಚಿತ್ರದಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಕೊಳ್ಳುತ್ತಿದ್ದಾರೆ. ಟೀಸರ್‌ನಲ್ಲಿ ಸೂಟು, ಬೂಟು ತೊಟ್ಟು ಮಿಂಚಿದ್ದಾರೆ.
ನಟ
ದರ್ಶನ್+
ಡೈರೆಕ್ಟರ್
ಸೂರಿ=
ಪ್ಯಾನ್
ಇಂಡಿಯಾ
ಮೂವಿ!
ಈ ಚಿತ್ರದ ಮೂಲಕ ದರ್ಶನ್‌ರನ್ನು ಕಣ್ತುಂಬಿಕೊಳ್ಳಲು ಅವರ ಅಭಿಮಾನಿಗಳು ಕಾಯುತ್ತಾ ಇದ್ದಾರೆ. ಅಷ್ಟಕ್ಕೂ ಕ್ರಾಂತಿ ಚಿತ್ರಕ್ಕಾಗಿ ಇನ್ನು ಹೆಚ್ಚು ದಿನಗಳು ಕಾಯಬೇಕಾಗಿಲ್ಲ. ಇದೆ ವರ್ಷಾಂತ್ಯದಲ್ಲಿ ಕ್ರಾಂತಿ ಅಬ್ಬರ ಶುರುವಾಗಲಿದೆ.

ಭರದಿಂದ ಸಾಗಿದ 'ಕ್ರಾಂತಿ' ಕೆಲಸಗಳು!
'ಕ್ರಾಂತಿ' ಚಿತ್ರ ಬಹುತೇಕ ಶೂಟಿಂಗ್ ಮುಕ್ತಾಯವಾಗಿದೆ. ಇನ್ನೇನಿದ್ದರೂ ಸಿನಿಮಾದ ಪ್ಯಾಚ್ ವರ್ಕ್ ಮಾತ್ರ ಬಾಕಿ ಇದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ಸಿನಿಮಾ ತಂಡ ನಿರತವಾಗಿದೆ. ಜೊತೆಗೆ ಆದಷ್ಟು ಬೇಗ ಸಿನಿಮಾ ರಿಲೀಸ್ ಮಾಡುವ ಪ್ಲ್ಯಾನ್ ಕೂಡ ಹಾಕಿಕೊಂಡಿದೆ. ಹಾಗಾಗಿ ಪೋಸ್ಟ್ ಪ್ರೊಡಕ್ಷನ್ ಹಂತದ ಕೆಲಸಗಳು ವೇಗವಾಗಿ ಸಾಗುತ್ತಿವೆ.
ಯಾವತ್ತೋ
'ಮುತ್ತಪ್ಪ
ರೈ'
ಆಗ್ಬೇಕಿತ್ತು
ನಟ
'ದರ್ಶನ್'!

ನವೆಂಬರ್‌ನಲ್ಲಿ ಕ್ರಾಂತಿ ರಿಲೀಸ್!
ಇನ್ನು ನಟ ದರ್ಶನ್ 'ರಾಬರ್ಟ್' ಬಳಿಕ ಕೊಂಚ ಗ್ಯಾಪ್ ತೆಗೆದುಕೊಂಡಿದ್ದರು. ಕೊರೊನಾ ಕಾರಣಕ್ಕೆ 'ಕ್ರಾಂತಿ' ಕೂಡ ತಡವಾಗಿ ಶುರುವಾಗಿದೆ. ಆದರೆ ಇನ್ನು ಹೆಚ್ಚು ದಿನ ಕ್ರಾಂತಿಗಾಗಿ ಕಾಯಬೇಕಾಗಿಲ್ಲ. ಯಾಕೆಂದರೆ ಸಿನಿಮಾ ಇದೇ ವರ್ಷ ನವೆಂಬರ್‌ನಲ್ಲಿ ತೆರೆ ಕಾಣಲಿದೆ. ಈ ಬಗ್ಗೆ ಸದ್ಯಲ್ಲೇ ಚಿತ್ರತಂಡ ಅಧಿಕೃತ ಮಾಹಿತಿ ನೀಡಲಿದ್ದು, ಟ್ರೈಲರ್ ಕೂಡ ರಿಲೀಸ್ ಆಗಲಿದೆ.

ಸರ್ಕಾರಿ ಶಾಲೆ 'ಕ್ರಾಂತಿ'!
'ಕ್ರಾಂತಿ' ಸಿನಿಮಾ ಯಾವ ವಿಚಾರದ ಬಗ್ಗೆ ಇರಲಿದೆ, ಯಾವುದಕ್ಕಾಗಿ 'ಕ್ರಾಂತಿ' ಆಗುತ್ತಿದೆ ಎನ್ನುವ ವಿಚಾರ ಹೊರ ಬಿದ್ದಿದೆ. ಈ ಚಿತ್ರದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸುವ ಹೋರಾಟ ಇದೆ. ಅವನತಿಯತ್ತ ಸಾಗುತ್ತಾ ಇರುವ ಸರ್ಕಾರಿ ಶಾಲೆಗಳನ್ನು ಉಳಿಸುವುದು ಹೇಗೆ ಮತ್ತು ಸರ್ಕಾರಿ ಶಾಲೆಗಳು ಅವನತಿ ಹೊಂದಿದರೆ ಏನೆಲ್ಲಾ ಆಗುತ್ತದೆ ಎನ್ನುವ ಬಗ್ಗೆ 'ಕ್ರಾಂತಿ' ಹೇಳಲಿದೆ.
'ಕ್ರಾಂತಿ'
ಕಥೆ
ಏನು?
'ದರ್ಶನ್'
ಪಾತ್ರ
ಏನು?
ಇಲ್ಲಿದೆ
ಉತ್ತರ!

'ಕ್ರಾಂತಿ'ಯಲ್ಲಿ ದರ್ಶನ್ ಪಾತ್ರ ಏನು?
ಸರ್ಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ನಟ ದರ್ಶನ್ ಪಾತ್ರ ಹೋರಾಡುತ್ತೆ. ಚಿತ್ರದಲ್ಲಿ ಎನ್‌ಆರ್‌ಐ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ. ದರ್ಶನ್ ಇಲ್ಲಿ ತನಕ ಹಲವಾರು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಕತೆಯಲ್ಲಿ ಹೇಗೆ ಕಾಣಿಸಿಕೊಳ್ಳುತ್ತಾರೆ ಎನ್ನುವ ಬಗ್ಗೆ ಕುತೂಹಲ ಮೂಡಿದೆ.