For Quick Alerts
  ALLOW NOTIFICATIONS  
  For Daily Alerts

  ರಾಕ್ ಲೈನ್ ವೆಂಕಟೇಶ್ ಪಾಲಾದ ಕುರುಕ್ಷೇತ್ರ ವಿತರಣೆ ಹಕ್ಕು

  |
  Kurukshetra Kannada Movie: ಸ್ಯಾಂಡಲ್ ವುಡ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ ಕುರುಕ್ಷೇತ್ರ' ಸಿನಿಮಾ

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ಮುನಿರತ್ನ ನಿರ್ಮಾಣದ, ನಾಗಣ್ಣ ನಿರ್ದೇಶನದ 'ಕುರುಕ್ಷೇತ್ರ' ಸಿನಿಮಾ ಸದ್ಯ ಸ್ಯಾಂಡಲ್ ವುಡ್ ನಲ್ಲಿ ಸಖತ್ ಸದ್ದು ಮಾಡುತ್ತಿದೆ. ಈಗಾಗಲೆ ಚಿತ್ರದ ಆಡಿಯೋ ರಿಲೀಸ್ ಗೆ ಡೇಟ್ ಫಿಕ್ಸ್ ಆಗಿದ್ದು, ಭರ್ಜರಿ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತಿದೆ ಚಿತ್ರತಂಡ.

  ಇದರ ನಡುವೆ ಈಗ ಚಿತ್ರದ ವಿತರಣೆ ಹಕ್ಕು ಮಾರಾಟವಾಗಿದೆ ಎನ್ನುವ ಸುದ್ದಿ ಹೊರಬಿದ್ದಿದೆ. 'ಕುರುಕ್ಷೇತ್ರ' ಕನ್ನಡ ಮಾತ್ರವಲ್ಲದೆ 5 ಭಾಷೆಯಲ್ಲಿ ಏಕಕಾಲಕ್ಕೆ ತೆರೆಗೆ ಬರುತ್ತಿದೆ. ದೊಡ್ಡ ಮಟ್ಟದಲ್ಲಿ ದೇಶದಾದ್ಯಂತ ತೆರೆಗೆ ಬರುತ್ತಿರುವ 'ಕುರುಕ್ಷೇತ್ರ' ಚಿತ್ರದ ವಿತರಣೆಯ ಹಕ್ಕು ಖ್ಯಾತ ನಿರ್ಮಾಪಕ ಮತ್ತು ವಿತರಕ ರಾಕ್ ಲೈನ್ ವೆಂಕಟೇಶ್ ಪಾಲಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

  ಅಂದ್ಹಾಗೆ ಕೇವಲ ಕನ್ನಡ ಮಾತ್ರವಲ್ಲದೆ ಐದು ಭಾಷೆಯ ವಿತರಣೆಯ ಜವಾಬ್ದಾರಿಯನ್ನು ವೆಂಕಟೇಶ್ ಅವರೆ ಹೊತ್ತುಕೊಂಡಿರುವುದು ವಿಶೇಷ. ಕನ್ನಡ ಸೇರಿದಂತೆ ಕುರುಕ್ಷೇತ್ರ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲೂ ತೆರೆಗೆ ಬರುತ್ತಿದೆ. ಈ ಎಲ್ಲಾ ಭಾಷೆಯಲ್ಲು ರಾಕ್ ಲೈನ್ ವಿತರಣೆ ಮಾಡುತ್ತಿದ್ದಾರೆ.

  ದೇಶದಾದ್ಯಂತ 'ಕುರುಕ್ಷೇತ್ರ' ಎಷ್ಟು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಲಿದೆ ಎನ್ನುವ ಮಾಹಿತಿ ಸಧ್ಯದಲ್ಲೇ ಹೊರಬೀಳಿದೆ. ಆದ್ರೆ ದೊಡ್ಡ ಮಟ್ಟಕ್ಕೆ 'ಕುರುಕ್ಷೇತ್ರ' ರಿಲೀಸ್ ಆಗಲಿದೆ. ಅಂದ್ಹಾಗೆ ಸುದೀಪ್ ಅಭಿನಯದ 'ಪೈಲ್ವಾನ್' ಸಿನಿಮಾ 2,500ಕ್ಕು ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ. 'ಪೈಲ್ವಾನ್' ಕೂಡ 8 ಭಾಷೆಯಲ್ಲಿ ತೆರೆಗೆ ಬರುತ್ತಿರುವುದು ವಿಶೇಷ.

  ಇನ್ನು 'ಕುರುಕ್ಷೇತ್ರ' ದೊಡ್ಡ ತಾರಾ ಬಳಗವಿರುವ ಸಿನಿಮಾ. ರೆಬಲ್ ಸ್ಟಾರ್ ಅಂಬರೀಶ್, ವಿ ರವಿಚಂದ್ರನ್, ಅರ್ಜುನ್ ಸರ್ಜ, ಶ್ರೀನಾಥ್, ಶಶಿಕುಮಾರ್, ನಿಖಿಲ್ ಕುಮಾರ್, ನಟಿಯರಾದ ಮೇಘನಾ ರಾಜ್, ಸ್ನೇಹಾ, ಹರಿಪ್ರಿಯಾ ಸೇರದಂತೆ ದೊಡ್ಡ ಕಲಾವಿದರ ದಂಡೆ ಚಿತ್ರದಲ್ಲಿದೆ.

  English summary
  Kannada actor Darshan starrer 'Kurukshetra' film will be distribute by Rockline Venkatesh in worldwide. The film will be out in Kannada and simultaneously in 5 language.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X