ಸೆನ್ಸಾರ್ ಆಗಿದ್ದರೂ, 'ಕುರುಕ್ಷೇತ್ರ' ದರ್ಶನ ಸದ್ಯಕ್ಕಿಲ್ಲ.!

ಸ್ಯಾಂಡಲ್ ವುಡ್ ನಲ್ಲಿ ಸದ್ಯ ಬಹುನಿರೀಕ್ಷೆ ಹುಟ್ಟಿಸಿರುವ ಚಿತ್ರಗಳ ಪೈಕಿ 'ಕುರುಕ್ಷೇತ್ರ' ಕೂಡ ಒಂದು. ಎಲ್ಲವೂ ಪ್ಲಾನ್ ಪ್ರಕಾರ ನಡೆದಿದ್ದರೆ, ಇಷ್ಟೊತ್ತಿಗೆ 'ಕುರುಕ್ಷೇತ್ರ' ಬಿಡುಗಡೆ ಆಗಿರಬೇಕಿತ್ತು. ಆದ್ರೆ, ಕಾರಣಾಂತರಗಳಿಂದ ಚಿತ್ರದ ರಿಲೀಸ್ ಡೇಟ್ ಮುಂದಕ್ಕೆ ಹೋಗುತ್ತಲೇ ಇದೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ 'ಕುರುಕ್ಷೇತ್ರ'ದ ಸೆನ್ಸಾರ್ ಪ್ರಕ್ರಿಯೆ ಪೂರ್ಣಗೊಂಡಿದೆ. 185 ನಿಮಿಷಗಳು.. ಅಂದ್ರೆ ಮೂರು ಗಂಟೆ ಐದು ನಿಮಿಷದ ಅವಧಿ ಹೊಂದಿರುವ 'ಕುರುಕ್ಷೇತ್ರ' ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ U/A ಸರ್ಟಿಫಿಕೇಟ್ ಸಿಕ್ಕಿದೆ.

ಸೆನ್ಸಾರ್ ಮುಗಿದ್ಮೇಲೆ, ಚಿತ್ರ ಬಿಡುಗಡೆ ಸರಾಗವಾದ ಹಾಗೆ ತಾನೇ ಲೆಕ್ಕ. ಸೆನ್ಸಾರ್ ಆಗಿರೋದ್ರಿಂದ, 'ಕುರುಕ್ಷೇತ್ರ' ಚಿತ್ರ ಇನ್ನು ಕೆಲವೇ ದಿನಗಳಲ್ಲಿ ತೆರೆಗೆ ಬರಬಹುದು ಅಂತ ನೀವೆಲ್ಲಾ ಊಹಿಸಬಹುದು. ಆದ್ರೆ, 'ಕುರುಕ್ಷೇತ್ರ' ದರ್ಶನ ಭಾಗ್ಯ ಸದ್ಯಕ್ಕಿಲ್ಲ.

Darshan starrer Kurukshetra is likely to get released in April 2019

ಮೂಲಗಳ ಪ್ರಕಾರ, 'ಕುರುಕ್ಷೇತ್ರ' ಚಿತ್ರ 2019 ರ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರಲಿದೆ. 'ಕುರುಕ್ಷೇತ್ರ' ಚಿತ್ರದ 3D ಕಾರ್ಯ ಬಹುತೇಕ ಪೂರ್ಣಗೊಂಡಿದೆ. ಹೀಗಿದ್ದರೂ, ರಿಲೀಸ್ ತಡವಾಗುತ್ತಿರುವುದು ಯಾಕೆ ಎಂಬ ಪ್ರಶ್ನೆಗೆ ಉತ್ತರ ಲಭ್ಯವಾಗಿಲ್ಲ.

ಅಂದ್ಹಾಗೆ, 'ಕುರುಕ್ಷೇತ್ರ' ಚಿತ್ರದಲ್ಲಿ ದರ್ಶನ್ ಜೊತೆಗೆ ರವಿಚಂದ್ರನ್, ಅಂಬರೀಶ್, ಅರ್ಜುನ್ ಸರ್ಜಾ, ಭಾರತಿ ವಿಷ್ಣುವರ್ಧನ್ ಸೇರಿದಂತೆ ದೊಡ್ಡ ಕಲಾವಿದರ ದಂಡೇ ಇದೆ. ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ 'ಕುರುಕ್ಷೇತ್ರ'ವನ್ನ ಕಣ್ತುಂಬಿಕೊಳ್ಳಬೇಕು ಅಂದ್ರೆ ನೀವು ಇನ್ನೂ ಕೊಂಚ ದಿನ ಕಾಯಬೇಕು.

More from Filmibeat

English summary
Challenging Star Darshan starrer Kurukshetra is likely to get released in April 2019.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X