For Quick Alerts
  ALLOW NOTIFICATIONS  
  For Daily Alerts

  ಡಿ ಬಾಸ್ ಅಭಿಮಾನಿಗಳಿಗೆ ಸಂತಸದ ಸುದ್ದಿ: ವಿಶೇಷ ದಿನದಂದು ಬರ್ತಿದೆ 'ರಾಬರ್ಟ್' ಟೀಸರ್

  |
  Robert : Robert teaser to be released on this special day | DARSHAN | ROBERT | FILMIBEAT KANNADA

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರದ ಟೀಸರ್ ರಿಲೀಸ್ ಗೆ ದಿನಾಂಕ ನಿಗದಿಯಾಗಿದೆ. ರಾಬರ್ಟ್ ಟೀಸರ್ ಆಗಿ ಅಭಿಮಾನಿಗಳು ಅನೇಕ ತಿಂಗಳಿಂದ ಉಸಿರುಬಿಗಿ ಹಿಡಿದು ಕಾಯುತ್ತಿದ್ದರು. ಈಗಾಗಲೆ ಫಸ್ಟ್ ಮತ್ತು ಸೆಕೆಂಡ್ ಲುಕ್ ಮೂಲಕ ಅಭಿಮಾನಿಗಳ ಹಾರ್ಟ್ ಬೀಟ್ ಹೆಚ್ಚಿರುವ ರಾಬರ್ಟ್ ಈಗ ಟೀಸರ್ ಮೂಲಕ ಬರ್ತಿದೆ.

  ಹೌದು, ಇದೆ ತಿಂಗಳು ವಿಶೇಷ ದಿನದಂದು ಅಂದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದ ದಿನವೆ ಬಹು ನಿರೀಕ್ಷೆಯ ಚಿತ್ರದ ಟೀಸರ್ ಅನ್ನು ಗಿಫ್ಟ್ ಆಗಿ ನೀಡಲು ಚಿತ್ರತಂಡ ನಿರ್ಧರಿಸಿದೆ. ಅಂದ್ಹಾಗೆ ರಾಬರ್ಟ್ ತರುಣ್ ಸುಧೀರ್ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಚಿತ್ರದ ಟೀಸರ್ ರಿಲೀಸ್ ಬಗ್ಗೆ ತರುಣ್ ಸುಧೀರ್ ಟ್ವೀಟ್ ಮಾಡಿ ಅಪ್ ಡೇಟ್ ಮಾಡಿದ್ದಾರೆ.

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆನೇ ಚಾಲೆಂಜ್ ಮಾಡಿದ ರಣ್ವೀರ್ ಸಿಂಗ್ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆನೇ ಚಾಲೆಂಜ್ ಮಾಡಿದ ರಣ್ವೀರ್ ಸಿಂಗ್

  16ರ ಮಧ್ಯರಾತ್ರಿ ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ. ತರುಣ್ ಸುಧೀರ್ ಅಪ್ ಡೇಟ್ ನೀಡುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ಈಗಾಗಲೆ ಸಾಮಾಜಿಕ ಜಾಲತಾಣದಲ್ಲಿ ರಾಬರ್ಟ್ ಹಬ್ಬ ಮಾಡುತ್ತಿದ್ದಾರೆ. ದರ್ಶನ್ ಹುಟ್ಟುಹಬ್ಬವನ್ನು ಸುಲ್ತಾನ್ ಸಂಭ್ರಮ, ಬಾಸ್ ಪರ್ವ ಎನ್ನುವ ಹೆಸರಿನಲ್ಲಿ ಆಚರಿಸಲು ಅಭಿಮಾನಿಗಳು ನಿರ್ಧರಿಸಿದ್ದಾರೆ. ಹುಟ್ಟುಹಬ್ಬದ ಸಂಭ್ರಮದ ಜೊತೆಗೆ ರಾಬರ್ಟ್ ಟೀಸರ್ ಅನ್ನು ನೋಡಿ ಕಣ್ತುಂಬಿಕೊಳ್ಳಬಹುದು.

  ಚಿತ್ರದಿಂದ ಬಂದ ಮೊದಲ ಲುಕ್ ರಾಬರ್ಟ್ ಅವತಾರದಲ್ಲಿ ಇತ್ತು. ಎರಡನೆ ಲುಕ್ ನಲ್ಲಿ ದರ್ಶನ್ ಆಂಜನೇಯ ಅವತಾರವೆತ್ತಿದ್ದರು. ಮೂರನೆ ಲುಕ್ ಮುಸ್ಲಿಂ ಸಂಪ್ರದಾಯದ ಹಾಗೆ ಇರಬಹುದು ಎಂದು ಅನೇಕರು ನಿರೀಕ್ಷೆ ಮಾಡಿದ್ದಾರೆ. ಚಿತ್ರದಲ್ಲಿ ದರ್ಶನ್ ಮೂರು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಲಾಗುತ್ತಿದೆ. ಹಾಗಾಗಿ ಸದ್ಯ ರಿಲೀಸ್ ಆಗುತ್ತಿರುವ ಟೀಸರ್ ನಲ್ಲಿ ಮೂರು ಶೇಡ್ ರಿವೀಲ್ ಆಗುವ ಸಾಧ್ಯತೆ ಇದೆ.

  English summary
  Kannada Actor Darshan starrer most expected Robert film teaser release date announced. Robert teaser will release on February 16th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X