For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್' ಚಿತ್ರೀಕರಣ ಮುಕ್ತಾಯ: ಏಪ್ರಿಲ್ ಗೆ ಬರುವುದು ಪಕ್ಕಾ ಎಂದ ಡಿ ಬಾಸ್

  |

  ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ರಾಬರ್ಟ್ ಸಿನಿಮಾ ರಿಲೀಸ್ ಗೆ ತಯಾರಿ ನಡೆಸುತ್ತಿದೆ. ಕೊರೊನಾ ವೈರಸ್ ಕಾರಣ ವಿದೇಶಿ ಚಿತ್ರೀಕರಣ ರದ್ದು ಮಾಡಿ ಭಾರತದಲ್ಲೇ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿದ್ದ ಸಿನಿಮಾತಂಡ ಈಗ ಚಿತ್ರೀಕರಣ ಮುಗಿಸಿದೆ.

  ರಾಬರ್ಟ್ ರಿಲೀಸ್ ಡೇಟ್ ಫಿಕ್ಸ್ | Darshan | Roberrt | FILMIBEAT KANNADA

  ಚಿತ್ರದ ಹಾಡಿನ ಚಿತ್ರೀಕರಣವನ್ನು ವಿದೇಶದಲ್ಲಿ ಮಾಡಬೇಕೆಂದು ರಾಬರ್ಟ್ ತಂಡ ನಿರ್ಧರಿಸಿತ್ತು. ಆದರೀಗ ಭಾರತದಲ್ಲಿಯೇ ಚಿತ್ರೀಕರಣ ಮಾಡಿ ಮುಗಿಸಿದೆ. ಈ ಬಗ್ಗೆ ಡಿ ಬಾಸ್ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಶೂಟಿಂಗ್ ಮುಗಿಸಿ ಚಿತ್ರತಂಡದ ಜೊತೆ ಫೋಟೋ ಹೊಂಚಿಕೊಂಡಿದ್ದಾರೆ.

  ಚಿತ್ರೀಕರಣ ಮುಗಿಸಿದ ರಾಬರ್ಟ್

  ಚಿತ್ರೀಕರಣ ಮುಗಿಸಿದ ರಾಬರ್ಟ್

  ಬಹು ನಿರೀಕ್ಷೆಯ ರಾಬರ್ಟ್ ಸಿನಿಮಾ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದೆ. ಈ ಸಂತಸವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ ದರ್ಶನ್. ಗುಜರಾತ್ ನ ಕಚ್ ನಲ್ಲಿ ಚಿತ್ರೀಕರಣ ರಾಬರ್ಟ್ ಸಿನಿಮಾದ ಮೋಸ್ಟ್ ಎಕ್ಸ್ ಪೆಕ್ಟೆಡ್ ಹಾಡನ್ನು ಸೆರೆಹಿಡಿದಿದ್ದಾರೆ. ವಿದೇಶಿ ಲೊಕೇಶನ್ ಹಾಗೆಯೆ ಕಚ್ ನಲ್ಲಿ ಜಾಗ ಸಿಕ್ಕ ಕಾರಣ ಭಾರತದಲ್ಲೇ ಚಿತ್ರೀಕರಣ ಮಾಡಿ ಮುಗಿಸಿದೆ ಚಿತ್ರತಂಡ.

  ದರ್ಶನ್ ಹೇಳಿದ್ದೇನು?

  "ಚಿತ್ರೀಕರಣ ಮುಕ್ತಾಯ ವಾಗಿದೆ. ಏಪ್ರಿಲ್ ನಲ್ಲಿ ನಿಮ್ಮ ಮುಂದೆ ಬರಲು ನಾವ್ ರೆಡಿ. ನಿಮ್ಮ ದಾಸ ದರ್ಶನ್" ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಇಡೀ ತಂಡದ ಜೊತೆ ಇರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ದರ್ಶನ್ ಫಾರ್ಮಲ್ ಲುಕ್ ನಲ್ಲಿ ಮಿಂಚಿದ್ದಾರೆ. ಬ್ಯಾಗ್ರೌಂಡ್ ನಲ್ಲಿ LOVE ಎಂದು ಬರೆದಿರುವ ಅಕ್ಷರಗಳು ಕಾಣಿುತ್ತಿದೆ.

  ಏಪ್ರಿಲ್ ಗೆ ಬರುವುದು ಪಕ್ಕಾ

  ಏಪ್ರಿಲ್ ಗೆ ಬರುವುದು ಪಕ್ಕಾ

  ರಾಬರ್ಟ್ ಹಾಡಿನ ಚಿತ್ರೀಕರಣ ರದ್ದಾಗಿದ್ದ ಕಾರಣ ರಾಬರ್ಟ್ ಏಪ್ರಿಲ್ ತಿಂಗಳಿಗೆ ರಿಲೀಸ್ ಆಗುವುದು ಅನುಮಾನ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಜೊತೆಗೆ ಕೊರೊನಾ ವೈರಸ್ ಕಾರಣ ಚಿತ್ರ ರಿಲೀಸ್ ಡೇಟ್ ಅನ್ನು ಮುಂದಕ್ಕೆ ಹಾಕುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿತ್ತು. ಆದರೀಗ ಸಿನಿಮಾ ಏಪ್ರಿಲ್ ಗೆ ಬರುವುದು ಪಕ್ಕಾ ಎಂದು ದರ್ಶನ್ ಅವರೆ ರಿವೀಲ್ ಮಾಡಿದ್ದಾರೆ.

  ಮಾರ್ಚ್ ನಲ್ಲಿ ಆಡಿಯೋ ರಿಲೀಸ್

  ಮಾರ್ಚ್ ನಲ್ಲಿ ಆಡಿಯೋ ರಿಲೀಸ್

  ರಾಬರ್ಟ್ ಸಿನಿಮಾದ ಆಡಿಯೋ ಯಾವಾಗ ಬರುತ್ತೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದರು. ಆದರೆ ಚಿತ್ರದ ಆಡಿಯೋ ಇದೇ ತಿಂಗಳು ಮಾರ್ಚ್ 21ಕ್ಕೆ ತೆರೆಗೆ ಬರುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಚಿತ್ರತಂಡ ಯಾವುದೆ ಅಧಿಕೃತ ಮಾಹಿತಿ ನೀಡಿಲ್ಲ.

  ಕಲಬುರಗಿಯಲ್ಲಿ ಆಡಿಯೋ ರಿಲೀಸ್

  ಕಲಬುರಗಿಯಲ್ಲಿ ಆಡಿಯೋ ರಿಲೀಸ್

  ರಾಬರ್ಟ್ ಸಿನಿಮಾದ ಆಡಿಯೋವನ್ನು ಕಲಬುರಗಿಯಲ್ಲಿ ನಡೆಸಲು ಚಿತ್ರತಂಡ ಪ್ಲಾನ್ ಮಾಡಿದೆಯಂತೆ. ಕಲಬುರಗಿಯಲ್ಲಿ ಚಿತ್ರದ ಆಡಿಯೋ ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದೆ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಆದರೆ ಈ ಬಗ್ಗೆ ಚಿತ್ರತಂಡ ಎಲ್ಲಿಯೊ ಹಂಚಿಕೊಂಡಿಲ್ಲ. ಅದ್ದೂರಿಯಾಗಿ ಚಿತ್ರದ ಆಡಿಯೋವನ್ನು ತೆರೆಗೆ ತರಲು ಪ್ಲಾನ್ ರಾಬರ್ಟ್ ಟೀಂ ನಿರ್ಧರಿಸಿದೆ.

  English summary
  Darshan starrer Roberrt film Shooting completed. Roberrt will release on April.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X