Just In
Don't Miss!
- Automobiles
ಇದೇ ತಿಂಗಳಾಂತ್ಯಕ್ಕೆ ಬಿಡುಗಡೆಯಾಗಲಿರುವ ಟಾಪ್ 5 ಕಾರುಗಳಿವು..
- Lifestyle
ಜ. 16ರಿಂದ ಭಾರತದಲ್ಲಿ ಕೋವಿಡ್ 19 ಲಸಿಕೆ: ಇದರ ಕುರಿತ ಪ್ರಮುಖ 10 ಮಾಹಿತಿ
- News
ಐತಿಹಾಸಿಕ ಕೊರೊನಾ ಲಸಿಕಾ ಅಭಿಯಾನಕ್ಕೆ ಮೋದಿ ಚಾಲನೆ
- Sports
ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ ತಂದೆ ಹಿಮಾಂಶು ಪಾಂಡ್ಯ ನಿಧನ
- Education
ECIL Recruitment 2021: ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ವಾಕ್ ಇನ್ ಇಂಟರ್ವ್ಯೂ
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 15ರ ಚಿನ್ನ, ಬೆಳ್ಳಿ ದರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಏಪ್ರಿಲ್‌ನಲ್ಲಿ ಯುವರತ್ನ, ಅದೇ ತಿಂಗಳು ಮತ್ತೊಂದು ಬಿಗ್ ಸಿನಿಮಾ ತೆರೆಗೆ?
2021ನೇ ವರ್ಷದಲ್ಲಿ ಸ್ಟಾರ್ ನಟರ ಚಿತ್ರಗಳು ಒಂದೊಂದೆ ಬಿಡುಗಡೆಯಾಗಲಿದೆ. ಯಾವ ಸಿನಿಮಾ ಮೊದಲು ಬರುತ್ತೆ, ಯಾವ ಸಿನಿಮಾ ಆಮೇಲೆ ಬರುತ್ತೆ ಎನ್ನುವುದರ ಬಗ್ಗೆ ಸದ್ಯಕ್ಕೆ ಸ್ಪಷ್ಟತೆ ಇಲ್ಲ. ಹೊಸ ವರ್ಷದ ಪ್ರಯುಕ್ತ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ಯುವರತ್ನ ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದೆ.
ಏಪ್ರಿಲ್ 1 ರಂದು ಯುವರತ್ನ ಸಿನಿಮಾ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ ಎಂದು ಅಧಿಕೃತವಾಗಿ ಪ್ರಕಟಿಸಿದೆ. ಯುವರತ್ನ ಎಂಟ್ರಿಗೆ ಮುಹೂರ್ತ ಫಿಕ್ಸ್ ಆಗಿದೆ. ಆದರೆ, ಸುದೀಪ್ ಅವರ 'ಕೋಟಿಗೊಬ್ಬ-3', ದರ್ಶನ್ ಅವರ 'ರಾಬರ್ಟ್', ಧ್ರುವ ಸರ್ಜಾ ನಟನೆಯ 'ಪೊಗರು', ದುನಿಯಾ ವಿಜಯ್ ನಿರ್ದೇಶನದ 'ಸಲಗ' ಚಿತ್ರಗಳ ರಿಲೀಸ್ ದಿನಾಂಕದ ಮೇಲೆ ಹೆಚ್ಚಿನ ಕುತೂಹಲ ಹುಟ್ಟಿಕೊಂಡಿದೆ. ಈ ಮಧ್ಯೆ ಯುವರತ್ನ ರಿಲೀಸ್ ತಿಂಗಳಲ್ಲೇ ಮತ್ತೊಂದು ದೊಡ್ಡ ಸಿನಿಮಾ ಬರುವ ಬಗ್ಗೆ ಚರ್ಚೆಯಾಗುತ್ತಿದೆ. ಮುಂದೆ ಓದಿ...

ರಾಬರ್ಟ್ ಎಂಟ್ರಿ ಯಾವಾಗ?
2020ರ ಏಪ್ರಿಲ್ ತಿಂಗಳಲ್ಲಿ ದರ್ಶನ್ ನಟನೆಯ ರಾಬರ್ಟ್ ಸಿನಿಮಾ ತೆರೆಗೆ ಬರಬೇಕಿತ್ತು. ಲಾಕ್‌ಡೌನ್‌ನಿಂದ ಬರಲಿಲ್ಲ. ಈಗ ಚಿತ್ರಮಂದಿರದಲ್ಲಿ ನೂರರಷ್ಟು ಪ್ರೇಕ್ಷಕರಿಗೆ ಅವಕಾಶ ಕೊಡೋವರೆಗೂ ರಾಬರ್ಟ್ ಬರಲ್ಲ ಎಂದ ದೃಢ ನಿರ್ಧಾರ ಮಾಡಿದಂತಿದೆ. ಇದನ್ನು ನಿರ್ಮಾಪಕ ಹಾಗೂ ದರ್ಶನ್ ಅವರ ಸಹ ಹಲವು ಸಲ ಹೇಳಿದ್ದಾರೆ. ರಾಬರ್ಟ್ ಎಂಟ್ರಿ ದಿನಾಂಕ ಪ್ರೇಕ್ಷಕರ ಪಾಲಿಗೆ ಸದ್ಯಕ್ಕೆ ಗೊಂದಲವಾಗಿಯೇ ಉಳಿದುಕೊಂಡಿದೆ.
ಬಿಗ್ ಅನೌನ್ಸ್ ಮೆಂಟ್: ಪುನೀತ್ ರಾಜ್ ಕುಮಾರ್ 'ಯುವರತ್ನ' ಸಿನಿಮಾದ ಬಿಡುಗಡೆ ದಿನಾಂಕ ಘೋಷಣೆ

ಏಪ್ರಿಲ್ ತಿಂಗಳಲ್ಲೇ ತೆರೆಗೆ?
ಕೊರೊನಾ ಭೀತಿ, ಸರ್ಕಾರದ ನಿಲುವಿನ ಬಗ್ಗೆ ಕಾದು ನೋಡುತ್ತಿರುವ ರಾಬರ್ಟ್ ಸಿನಿಮಾ ಏಪ್ರಿಲ್ ತಿಂಗಳಲ್ಲೇ ತೆರೆಗೆ ಬರುವ ಲೆಕ್ಕಾಚಾರದಲ್ಲಿ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಏಪ್ರಿಲ್ ತಿಂಗಳು ಎಂದು ಫಿಕ್ಸ್ ಆಗಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಆದರೆ, ಈ ಬಗ್ಗೆಯೂ ಅಧಿಕೃತ ಅಥವಾ ಖಚಿತ ಮಾಹಿತಿ ಇಲ್ಲ.

ಪೊಗರು ಮೊದಲು ಬರಬಹುದು!
ಧ್ರುವ ಸರ್ಜಾ ನಟನೆಯ ಪೊಗರು ಸಿನಿಮಾ ಕನ್ನಡ, ತೆಲುಗು ಹಾಗೂ ತಮಿಳಿನಲ್ಲಿ ಬಿಡುಗಡೆಯಾಗಲಿದೆ. ಹೈದರಾಬಾದ್, ಚೆನ್ನೈಗೆ ಹೋಗಿಬಂದಿರುವ ಚಿತ್ರತಂಡ ಬಿಡುಗಡೆ ಕುರಿತು ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಸದ್ಯದ ಲೆಕ್ಕಾಚಾರ ನೋಡಿದ್ರೆ ಪೊಗರು ಸಿನಿಮಾ ಜನವರಿ ಅಂತ್ಯಕ್ಕೆ ಅಥವಾ ಫೆಬ್ರವರಿ ತಿಂಗಳಲ್ಲಿ ಬರುವ ನಿರೀಕ್ಷೆ ಇದೆ.
2021ರಲ್ಲಿ ಧೂಳೆಬ್ಬಿಸಲು ಸಿದ್ಧವಾಗಿದೆ ಬಹುನಿರೀಕ್ಷೆಯ ಚಿತ್ರಗಳು

ಕೋಟಿಗೊಬ್ಬ-ಸಲಗ ಸದ್ಯಕ್ಕೆ ಸೈಲೆಂಟ್!
ಸುದೀಪ್ ನಟನೆಯ ಕೋಟಿಗೊಬ್ಬ 3 ಸಿನಿಮಾ ಕುರಿತು ಯಾವುದೇ ಅಪ್‌ಡೇಟ್ ಇಲ್ಲ. ಚಿತ್ರತಂಡವೂ ಯಾವುದೇ ಮಾಹಿತಿ ನೀಡಿಲ್ಲ. ಸಲಗ ಸಿನಿಮಾನೂ ಬಿಡುಗಡೆಗೆ ಸಜ್ಜಾಗಿದೆ. ಥಿಯೇಟರ್‌ಗಳ ಪರಿಸ್ಥಿತಿಗೆ ಬಗ್ಗೆ ಕಾದುನೋಡುತ್ತಿದೆ. ಈ ಹಿಂದೆ ಸಲಗ ನಿರ್ಮಾಪಕ ಕೆಪಿ ಶ್ರೀಕಾಂತ್ ಮಾತನಾಡಿದ್ದ ಸಂದರ್ಭದಲ್ಲಿ 'ಥಿಯೇಟರ್‌ಗಳು ಪೂರ್ಣ ಪ್ರಮಾಣದಲ್ಲಿ ಅವಕಾಶ ಸಿಗುವವರೆಗೂ ಸಲಗ ಬರಲ್ಲ' ಎಂದಿದ್ದರು.