»   » ಜನವರಿ 29 ರಂದು 'ವಿರಾಟ್' ದರ್ಶನ ಗ್ಯಾರೆಂಟಿ!

ಜನವರಿ 29 ರಂದು 'ವಿರಾಟ್' ದರ್ಶನ ಗ್ಯಾರೆಂಟಿ!

Posted By:
Subscribe to Filmibeat Kannada

ಎರಡ್ಮೂರು ವರ್ಷಗಳಿಂದ ರೆಡಿ ಆಗುತ್ತಲೇ ಇದ್ದ 'ವಿರಾಟ್' ಚಿತ್ರಕ್ಕೆ ಕಡೆಗೂ ಬಿಡುಗಡೆ ಭಾಗ್ಯ ದೊರಕಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ವಿರಾಟ್' ಸಿನಿಮಾ ಜನವರಿ 29 ರಂದು ಬಿಡುಗಡೆ ಆಗಲಿದೆ.

ಬಾಕಿ ಇದ್ದ ಒಂದು ಹಾಡಿನ ಚಿತ್ರೀಕರಣ ಮೊನ್ನೆಯಷ್ಟೇ ಮುಗಿದದ್ದು, ಅಂದೇ ಸೆನ್ಸಾರ್ ಕೂಡ ಆಗಿದೆ. ಸೆನ್ಸಾರ್ ಮಂಡಳಿಯಿಂದ ಕ್ಲೀನ್ ಚಿಟ್ ಪಡೆದಿರುವ 'ವಿರಾಟ್' ಸಿನಿಮಾ ಈ ತಿಂಗಳಾಂತ್ಯಕ್ಕೆ ನಿಮ್ಮ ಮುಂದೆ ಬರಲಿದೆ. [ಅಬ್ಬಾ! ಕೊನೆಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆದ್ದೇ ಬಿಟ್ರು]


viraat

ದರ್ಶನ್ ಜೊತೆ ಚೈತ್ರ ಚಂದ್ರನಾಥ್, ಇಶಾ ಚಾವ್ಲಾ ಮತ್ತು ವಿದಿಶಾ ಶ್ರೀವಾತ್ಸವ್ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಎಚ್.ವಾಸು ಚಿತ್ರದ ನಿರ್ದೇಶಕ. [ದರ್ಶನ್ ತುಂಬಾ ಒಳ್ಳೆ ಹುಡುಗ ಅಂತ ಊರೆಲ್ಲಾ ಹೇಳ್ತಾರೆ]


ಕ್ಲಾಸ್ ಮತ್ತು ಮಾಸ್ ಆಡಿಯನ್ಸ್ ಗಾಗಿ ರೆಡಿಯಾಗಿರುವ 'ವಿರಾಟ್'ಗೆ ಗ್ರ್ಯಾಂಡ್ ಎಂಟ್ರಿ ನೀಡುವುದಕ್ಕೆ ನೀವು ರೆಡಿನಾ..

English summary
Kannada Actor Darshan starrer 'Viraat' is all set to release on January 29th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada