For Quick Alerts
  ALLOW NOTIFICATIONS  
  For Daily Alerts

  ಅಂಬಿ ಅಂತ್ಯಕ್ರಿಯೆಗೆ ವಿದೇಶದಿಂದ ಬರ್ತಾರಾ 'ಯಜಮಾನ'.?

  By Abhimani
  |

  ಕಲಿಯುಗ ಕರ್ಣ, ಮಂಡ್ಯದ ಗಂಡು ರೆಬೆಲ್ ಸ್ಟಾರ್ ಅವರ ನಿಧನ ಇಡೀ ಚಿತ್ರರಂಗಕ್ಕೆ ಹಾಗೂ ಕರ್ನಾಟಕಕ್ಕೆ ತುಂಬಲಾರದ ನಷ್ಟವಾಗಿದೆ. ಅಂಬಿಯ ಅಗಲಿಕೆಯಿಂದ ಇಡೀ ಅಭಿಮಾನಿ ಬಳಗ ಶೋಕ ಸಾಗರದಲ್ಲಿ ಮುಳುಗಿದೆ. ಈಗಾಗಲೇ ಪಾರ್ಥಿವ ಶರೀರ ಕಂಠೀರವ ಸ್ಟೇಡಿಯಂಗೆ ತಲುಪಿದ್ದು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

  ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ಅಂಬರೀಶ್ ಅವರ ಅಂತ್ಯ ಸಂಸ್ಕಾರವನ್ನ ನಡೆಸಲು ಸರ್ಕಾರ ಹಾಗೂ ಕುಟುಂಬ ತೀರ್ಮಾನ ಮಾಡಿದೆ. ಈಗಾಗಲೇ ಯಶ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಸೇರಿದಂತೆ ಬಹುತೇಕ ಗಣ್ಯರು ಅಂಬಿಯ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.

  ಡಾ.ರಾಜ್ ಸ್ಮಾರಕ ಪಕ್ಕದಲ್ಲಿ ಅಂಬರೀಶ್ ಅಂತ್ಯಕ್ರಿಯೆ ನಡೆಸಲು ತೀರ್ಮಾನ

  ಈ ಮಧ್ಯೆ ಅಂಬರೀಶ್ ಅವರ ಆಪ್ತ, ಅಂಬಿಯ ಕುಟುಂಬದ ಸದಸ್ಯನಂತಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಲ್ಲಿದ್ದಾರೆ, ಯಾವಾಗ ಬರ್ತಾರೆ ಎಂಬ ಸಣ್ಣದೊಂದು ಕುತೂಹಲ ಕಾಡುತ್ತಿದೆ. ಇದಕ್ಕೆ ಸ್ವತಃ ದಾಸ ದರ್ಶನ್ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ....

  ಸ್ಟೀಡನ್ ಚಿತ್ರೀಕರಣದಲ್ಲಿ ದಾಸ

  ಸ್ಟೀಡನ್ ಚಿತ್ರೀಕರಣದಲ್ಲಿ ದಾಸ

  'ಯಜಮಾನ' ಚಿತ್ರದ ಚಿತ್ರೀಕರಣ ಸಂಬಂಧ ಕಳೆದ ಎರಡು ದಿನಗಳ ಹಿಂದೆಯಷ್ಟೇ ದರ್ಶನ್, ರಶ್ಮಿಕಾ ಮಂದಣ್ಣ ಸೇರಿದಂತೆ ಇಡೀ ಚಿತ್ರತಂಡ ಸ್ಟೀಡನ್ ಗೆ ಹೋಗಿದ್ದರು. ಆದ್ರೆ, ಅಂಬಿಯ ನಿಧನದ ಸುದ್ದಿ ಇಡೀ 'ಯಜಮಾನ' ತಂಡಕ್ಕೆ ಶಾಕ್ ನೀಡಿದೆ.

  ಮಂಡ್ಯದ ಗಂಡು, ಕರುನಾಡ ಕರ್ಣ, ಸ್ಯಾಂಡಲ್ ವುಡ್ ನ ಜಲೀಲ ಅಂಬರೀಶ್ ಇನ್ನಿಲ್ಲ.!

  ಶೂಟಿಂಗ್ ರದ್ದು ಮಾಡಿದ 'ಯಜಮಾನ'

  ಶೂಟಿಂಗ್ ರದ್ದು ಮಾಡಿದ 'ಯಜಮಾನ'

  ಅಂಬರೀಶ್ ಅವರ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆ ದರ್ಶನ್ ಹಾಗೂ ಯಜಮಾನ ತಂಡ, ಚಿತ್ರೀಕರಣವನ್ನ ಸ್ಥಗಿತಗೊಳಿಸಿ ಬೆಂಗಳೂರಿನತ್ತ ಪ್ರಯಾಣ ಬೆಳಸಿದೆ. ಈ ವಿಷ್ಯವನ್ನ ಸ್ವತಃ ದರ್ಶನ್ ಅವರೇ ಟ್ವೀಟ್ ಮಾಡಿ ತಿಳಿಸಿದ್ದಾರೆ.

  ರೆಬೆಲ್ ಸ್ಟಾರ್ ಅಂಬರೀಶ್ ನಿಧನಕ್ಕೆ ಸಿಎಂ ಕುಮಾರಸ್ವಾಮಿ ಕಣ್ಣೀರು

  ಅಂಬಿಗೆ ಮಗನಂತಿದ್ದ ದರ್ಶನ್

  ಅಂಬಿಗೆ ಮಗನಂತಿದ್ದ ದರ್ಶನ್

  ಅಂಬರೀಶ್ ಅವರಂದ್ರೆ ದರ್ಶನ್ ಅವರಿಗೆ ಬಹಳ ಗೌರವ. ದಾಸ ಅವರನ್ನ ತಂದೆಯಂತೆ ಕಾಣುತ್ತಿದ್ದರು. ದರ್ಶನ್ ಅವರ ಜೊತೆ ಸದಾ ಬೆಂಬಲವಾಗಿ ನಿಲ್ಲುತ್ತಿದ್ದ ಅಂಬಿ, ಅವರ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅಂಬಿ ಮಾತಿಗೆ ದರ್ಶನ್ ಎಂದಿಗೂ ಇಲ್ಲ ಎಂದಿಲ್ಲ.

  ಮಂಡ್ಯ ಅಪಘಾತ ನೋಡಿ ಜೀವ ಬಿಟ್ಟರಾ ಅಂಬರೀಶಣ್ಣಾ.?

  ಸೋಮವಾರದ ಅಂತ್ಯಕ್ರಿಯೆ

  ಸೋಮವಾರದ ಅಂತ್ಯಕ್ರಿಯೆ

  ಶನಿವಾರ ರಾತ್ರಿ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಿಧನರಾದ ಅಂಬರೀಶ್ ಅವರ ಪಾರ್ಥಿವ ಶರೀರವನ್ನ, ಕಂಠೀರವ ಸ್ಟೇಡಿಯಂನಲ್ಲಿ ಇಡೀ ದಿನ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತೆ. ಸೋಮವಾರ ಕಂಠೀರವ ಸ್ಟುಡಿಯೋದಲ್ಲಿ ಡಾ ರಾಜ್ ಸ್ಮಾರಕದ ಪಕ್ಕದಲ್ಲೇ ಅಂತ್ಯಕ್ರಿಯೆ ನಡೆಸಲಾಗುತ್ತೆ.

  English summary
  Kannada actor challenging star darshan condolences over Kannada Actor, Former Minister Ambareesh death.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X