»   » ಚಿನ್ನ ಚಿನ್ನ ಅಂತಿದ್ದಾರೆ ಕಣಣ್ಣೋ ಸುದೀಪ್, ದರ್ಶನ್

ಚಿನ್ನ ಚಿನ್ನ ಅಂತಿದ್ದಾರೆ ಕಣಣ್ಣೋ ಸುದೀಪ್, ದರ್ಶನ್

Posted By: ಜೀವನರಸಿಕ
Subscribe to Filmibeat Kannada

ಹೌದು ಸೂಪರ್ ಸ್ಟಾರ್ ಗಳಾದ ಕಿಚ್ಚ ಸುದೀಪ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಈ ಇಬ್ಬರೂ ಸ್ಟಾರ್ ಗಳು ಚಿನ್ನ ಚಿನ್ನ ಅಂತಿದ್ದಾರೆ. ಯಾಕೆ ಚಿನ್ನ ಅಂತಾರೆ? ಅವ್ರು ಕೇಳ್ತಿರೋದೇನಾದ್ರೂ 24 ಕ್ಯಾರೆಟ್ ಗೋಲ್ಡಾ ಅಂದ್ರೆ ಖಂಡಿತ ಅಲ್ಲ. ಮತ್ತೆ ಹಾಲ್ ಮಾರ್ಕ್, 22 ಕ್ಯಾರೆಟ್ ಅಂತಾರಲ್ಲ ಅದಿರಬಹುದಾ ಅಂತ ನೀವಂದುಕೊಂಡ್ರೆ... ನೋ.

ಸ್ಯಾಂಡಲ್ ವುಡ್ ನಲ್ಲಿ ಎಲ್ಲೆಲ್ಲೂ ಚಿನ್ನ ಅನ್ನೋ ಪದ ಚಾಲ್ತಿಯಲ್ಲಿದೆ. ಇದನ್ನ ಶುರುಮಾಡಿದ್ದೇ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂತಿದೆ ಗಾಂಧಿನಗರ. ಯಾರನ್ನಾದ್ರೂ ಪ್ರೀತಿಯಿಂದ ಮಾತನಾಡಿಸೋವಾಗ ಮಗ, ಮಚ್ಚ, ಗೆಳೆಯ, ಬ್ರದರ್, ಡ್ಯೂಡ್ ಅಂತ ಕರೀತಿದ್ದ ಕಾಲದಲ್ಲಿ ಈ ಸ್ಟಾರ್ ಗಳು ಮಾತ್ರ ಚಿನ್ನ ಅಂತ ಕರೀತಾರೆ. [ಆಪ್ತಮಿತ್ರ ಸುದೀಪ್ ಎದುರಿಗೆ ದರ್ಶನ್ ಬರಲ್ಲ!] ಯಾಕೆ?

Darshan, Sudeep move in the same circles

ಅವರ ಆತ್ಮೀಯ ಗೆಳೆಯರ ಜೊತೆ ಮಗ, ಮಚ್ಚ ಅಂತ ಮಾತ್ನಾಡಿದ್ರೆ ಸೆಟ್ ಬಾಯ್ ಗಳು, ದೂರದ ಗೆಳೆಯರು, ಅಪರಿಚಿತರು, ಹೀಗೆ ಎಲ್ಲರಿಗೂ ಇವ್ರು ಪ್ರೀತಿಯಿಂದ ಕರೆಯೋದು ಚಿನ್ನ ಅಂತಾನೆ. ಇವ್ರೆಲ್ಲ ಚಿನ್ನ ಅಂತ ಕರೆಯೋದನ್ನ ಫಾಲೋ ಮಾಡ್ತಿರೋ ಗಾಂಧಿನಗರದವ್ರು ತಮ್ಮ ಸ್ನೇಹಿತರನ್ನೆಲ್ಲ, ಸಿಕ್ಕವರನ್ನೆಲ್ಲಾ ಏನ್ ಚಿನ್ನ, ಹೇಗಿದ್ದೀಯಾ ಚಿನ್ನ ಅಂತ ಮಾತ್ನಾಡಿಸೋದು ಕಾಮನ್ ಆಗ್ತಿದೆ.

ಡ್ಯೂಡ್, ಬ್ರದರ್, ಬ್ರೋ ಅಂತೆಲ್ಲ ನಮ್ಮದಲ್ಲದ ಭಾಷೆಯಲ್ಲಿ ಅಸಹ್ಯವಾಗಿ ಕರೆಯೋದಕ್ಕಿಂತ ಚಿನ್ನ ಚೆನ್ನಾಗಿದೆಯಲ್ವಾ. ಆದ್ರೆ ಈ ಚಿನ್ನ ಕಿಚ್ಚ ದಚ್ಚುಗೆ ಎಲ್ಲಿಂದ ಸಿಕ್ತು ಅಂತ ಅವ್ರೇ ಹೇಳ್ಬೇಕು. ಚಿನಿವಾರಪೇಟೆಯಲ್ಲಿ ಚಿನ್ನಕ್ಕೆ ಎಷ್ಟು ಬೆಲೆಯಿದೆಯೋ ಸ್ಯಾಂಡಲ್ ವುಡ್ ಪೇಟೆಯಲ್ಲೂ ಅಷ್ಟೇ ಮೌಲ್ಯವಿದೆ.

English summary
Sandalwood's two big stars Challelnging Star Darshan and Kichcha Sudeep move in the same circles. Both are speak the same language by calling everyone in the industry "Chinna, Chinna".

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada