For Quick Alerts
ALLOW NOTIFICATIONS  
For Daily Alerts

  ಸ್ನೇಹಿತರಿಗಾಗಿ ಓಡೋಡಿ ಬಂದ ದಾಸ ದರ್ಶನ್

  By ಶಶಿಕರ ಪಾತೂರು
  |
  ಸ್ನೇಹಿತರಿಗಾಗಿ ಓಡೋಡಿ ಬಂದ ದರ್ಶನ್ ಹ್ಯಾಟ್ರಿಕ್.! |FILMIBEAT KANNADA

  ಸಾಮಾನ್ಯವಾಗಿ ದರ್ಶನ್ ಸಿನಿಮಾಗಳಂತೆ ಅವರ ಸಾರ್ವಜನಿಕ ದರ್ಶನವೂ ಅಪರೂಪ. ವರ್ಷಕ್ಕೊಂದು ಚಿತ್ರ ಮಾಡುವಾಗ ಅದಕ್ಕೊಂದು ಪತ್ರಿಕಾಗೋಷ್ಠಿ ಮಾಡಿದರೆ ಹೆಚ್ಚು. ಹಾಗೆಯೇ ಇತರ ಸಮಾರಂಭಗಳಲ್ಲಿ ಕಾಣಿಸಿಕೊಳ್ಳದಂತ ಸ್ವಭಾವವೂ ಅವರಿಗಿದೆ. ಹಾಗಿದ್ದರೂ ಸತತ ಮೂರು ದಿನಗಳಲ್ಲಿ ಮೂರು ಬಾರಿ ಮಾಧ್ಯಮದ ಮುಂದೆ ಹಾಜರಾಗಿದ್ದಾರೆ ದರ್ಶನ್.

  ದರ್ಶನ್ ಚಿತ್ರರಂಗದಲ್ಲಿ ಯಾರದ್ದಾದರೂ ಮಾತುಗಳನ್ನು ಕೇಳುತ್ತಾರೆ ಎಂದು ಇದ್ದರೆ ಅದು ಅಂಬರೀಷ್ ಅವರ ಮಾತುಗಳಾಗಿದ್ದವು. ಆದರೆ ಈಗ ಅವರು ಇಲ್ಲ; ಆದರೆ ಅವರನ್ನು ಮಾತಿನಿಂದ ಕಟ್ಟಿಹಾಕುವಂಥವರು ಈಗ ಇದ್ದರೆ ಅದು ಅವರ ಸ್ನೇಹಿತರು. ಹಾಗಾಗಿ ಅವರು ಅಂಥ ಸ್ನೇಹಿತರಿಗಾಗಿಯೇ ಇಲ್ಲದ ಸಮಯದಲ್ಲಿ ಕೂಡ ಬಿಡುವು ಮಾಡಿಕೊಂಡು ಚಿತ್ರ ಮುಹೂರ್ತಗಳತ್ತ ಹೋಗಿ ಶುಭ ಕೋರಿದ್ದಾರೆ.

  ಹುಡುಗರ ಜೊತೆ 'ಯಜಮಾನ'ನ ಭರ್ಜರಿ ಕುಣಿತ

  'ಎಲ್ಲಿದ್ದೆ ಇಲ್ಲಿ ತನಕ' ಚಿತ್ರದ ಮುಹೂರ್ತಕ್ಕೆ ಬಂಡಿಕಾಳಮ್ಮ ದೇವಸ್ಥಾನಕ್ಕೆ ದರ್ಶನ್ ಆಗಮಿಸಿ ಶುಭಕೋರಲು ಕಾರಣವಾಗಿದ್ದು ಅವರ ಆತ್ಮಸಖ ಸೃಜನ್ ಲೋಕೇಶ್. ಅದೇ ರೀತಿ ಮಂಗಳವಾರ ಸಂಜೆ ನಡೆದ ಶ್ಯಾಡೋ' ಚಿತ್ರದ ಟೀಸರ್ ಲಾಂಚ್ ಮಾಡಲು ದರ್ಶನ್ ಓಡೋಡಿ ಬರುವಂತೆ ಮಾಡಿದ್ದು ಮತ್ತೋರ್ವ ಸ್ನೇಹಿತ ವಿನೋದ್ ಪ್ರಭಾಕರ್!

  ದರ್ಶನ್-ಸುದೀಪ್ 'ಮದಕರಿ'ಗೂ ಮೊದಲೇ ಸೆಟ್ಟೇರಲಿದೆ 'ಬಿಚ್ಚುಗತ್ತಿ'

  ಹೌದು, ತಮ್ಮ ಎಲ್ಲ ಚಿತ್ರಗಳಿಗೂ ಅವರ ಬೆಂಬಲ ಬೇಕು ಎನ್ನುವುದನ್ನು ಬಾಯ್ಬಿಟ್ಟು ಹೇಳುವ ಸ್ನೇಹಿತರಿವರು. ಅದನ್ನು ಒಪ್ಪಿಕೊಂಡು ಆಗಮಿಸುವ ಕರ್ಣ ಈ ದರ್ಶನ್. ಜೊತೆಗೆ ಈ ಸ್ನೇಹಿತರಿಬ್ಬರ ತಂದೆಯಂದಿರು ಕೂಡ ತಮ್ಮ ತಂದೆಯ ಕಾಲಘಟ್ಟದಲ್ಲೇ ಜೊತೆಯಾಗಿದ್ದವರು ಎಂಬ ಅಭಿಮಾನ ದರ್ಶನ್ ಒಳಗಿದೆ. ಆದರೆ ಈ ಎರಡು ಕಾರ್ಯಕ್ರಮಗಳ ನಡುವೆ ದರ್ಶನ್ ಉಪಸ್ಥಿತರಿದ್ದ 'ಬಿಚ್ಚುಗತ್ತಿ' ಮುಹೂರ್ತದ ಕಾರಣ ಸ್ವಲ್ಪ ವಿಭಿನ್ನ ಎಂದೇ ಹೇಳಬಹುದು.

  ಹುಡುಗರ ಜೊತೆ 'ಯಜಮಾನ'ನ ಭರ್ಜರಿ ಕುಣಿತ

  'ಮದಕರಿನಾಯಕ'ನ ಹಾರೈಕೆ
  'ಬಿಚ್ಚುಗತ್ತಿ' ಚಿತ್ರದಲ್ಲಿ ಕೂಡ ದರ್ಶನ್ ತಂದೆಯ ತಲೆಮಾರಿನ ಕಲಾವಿದ ಡಿಂಗ್ರಿನಾಗರಾಜ್ ಅವರ ಪುತ್ರ ನಾಯಕರಾಗಿರುವುದು ವಿಶೇಷ. ಆದರೆ ಅಲ್ಲಿಗೆ ದರ್ಶನ್ ಆಗಮಿಸಲು ಚಿತ್ರದ ನಾಯಕ ರಾಜವರ್ಧನ ಮಾತ್ರ ಕಾರಣವಲ್ಲ ಎನ್ನುವುದು ಅಷ್ಟೇ ಸತ್ಯ. ಅದಕ್ಕೆ ಕಾರಣೀಭೂತರಾಗಿದ್ದು ಕಾದಂಬರಿಕಾರ ಬಿ.ಎಲ್ ವೇಣು. ಬಿಚ್ಚುಗತ್ತಿ ಚಿತ್ರಕ್ಕೆ ಆಧಾರವಾಗಿರುವ 'ಬಿಚ್ಚುಗತ್ತಿ ಭರಮಣ್ಣ ನಾಯಕ' ಎಂಬ ಕಾದಂಬರಿಯನ್ನು ಬರೆದವರು ಬಿಎಲ್ ವೇಣು ಅವರು.

  ಇದೇ ವೇಣು ಅವರು ರಚಿಸಿರುವ ಮದಕರಿನಾಯಕನ ಕಾದಂಬರಿಯನ್ನು ಆಧರಿಸಿದ ಚಿತ್ರದಲ್ಲೇ ದರ್ಶನ್ ಮುಂದೆ ಮದಕರಿನಾಯಕರಾಗಿ ನಟಿಸಲಿದ್ದಾರೆ. ಆದರೆ ಅಷ್ಟೇನೂ ಪುಸ್ತಕಗಳನ್ನು ಓದುವ ಹವ್ಯಾಸ ಇರಿಸಿಕೊಳ್ಳದ ವ್ಯಕ್ತಿ ದರ್ಶನ್. ಚಿತ್ರಕತೆ ಸಿದ್ಧವಾಗುವ ಮುನ್ನ ಕಾದಂಬರಿ ಓದಲೇಬೇಕು ಎಂದು ತೀರ್ಮಾನಿಸಿಬಿಟ್ಟಿದ್ದರು. ಅದಕ್ಕಾಗಿ ಅವರು ಅವಲಂಬಿಸಿಕೊಂಡಿದ್ದು ಮಾತ್ರ ತಮಗೆ ಪ್ರಥಮ ಬಾರಿಗೆ ರಂಗಭೂಮಿಯ ರಂಗುಹಚ್ಚಿದ ಮಂಡ್ಯ ರಮೇಶ್ ಅವರನ್ನು. ಅವರನ್ನು ಕರೆಸಿ ಈ ಕಾದಂಬರಿ ಓದು; ನಾನು ಕೇಳ್ತಾ ಇರ್ತೀನಿ ಎನ್ನುತ್ತಿದ್ದರಂತೆ. ಮಂಡ್ಯ ರಮೇಶ್ ಏನು ಗೆಳೆಯನಿಗಾಗಿ ಅಷ್ಟು ಮಾಡದಿರುತ್ತಾರ? ಓದಿದ್ದಾರೆ.

  ಇದೀಗ ಪಾತ್ರವನ್ನು ಮೈದುಂಬಿಕೊಂಡಿರುವ ದರ್ಶನ್ ಅದರ ಕರ್ತೃ ಬಿಎಲ್ ವೇಣು ಅವರಿಗೆ ಫ್ಯಾನಾಗಿದ್ದಾರೆ. ಅವರದೇ ಮತ್ತೊಂದು ಐತಿಹಾಸಿಕ ಕಾದಂಬರಿಯ ಮುಹೂರ್ತಕ್ಕೆ ಹೋಗದೆ ಇರಲು ಅವರಿಗೆ ಸಾಧ್ಯವಾಗಲಿಲ್ಲ.‌ ಒಟ್ಟಿನಲ್ಲಿ ಅಪರೂಪಕ್ಕೆ ಮಾಧ್ಯಮಗಳ ಮುಙದೆ ಬರುವ ದರ್ಶನ್ ಇದೀಗ ಮಾಧ್ಯಮಗಳ ಮೂಲಕವೇ ಸತತ ಮೂರು ದಿನಗಳು ಕೂಡ ಅಭಿಮಾನಿಗಳ ಎದುರು ಹಾಜರಾಗಿದ್ದಾರೆ. ಅವರ ಸ್ನೇಹ ಚಿತ್ರರಂಗ ತುಂಬ ಹಬ್ಬಲಿ.

  English summary
  Kannada actor darshan has supports to Srujan lokesh, vinod prabhakar movies.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more