For Quick Alerts
  ALLOW NOTIFICATIONS  
  For Daily Alerts

  'ರಾಬರ್ಟ್' ಪ್ರಿ ರಿಲೀಸ್ ಕಾರ್ಯಕ್ರಮ: ಉತ್ತರ ಕರ್ನಾಟಕ ಜನರ ಮುಂದೆ ಚಪ್ಪಲಿ ಬಿಟ್ಟು ಮಾತನಾಡಿದ್ದೇಕೆ ದರ್ಶನ್?

  |

  ಚಾಲೆಂಜಿಂಗ್ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ನೆರವೇರಿದೆ. ಅಪಾರ ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿ ಸಾಗರ ನೋಡಿ ರಾಬರ್ಟ್ ತಂಡ ಮೂಕವಿಸ್ಮಿತವಾಗಿದೆ.

  ಉ.ಕರ್ನಾಟಕದ ಜನ ಮಾಡಿದ ಸಹಾಯ ನೆನಪಿಸಿಕೊಂಡ ಡಿ ಬಾಸ್ | Roberrt Pre Release Event Hubli | Filmibeat Kannada

  ದರ್ಶನ್ ಮಾತಿಗಾಗಿ ಸುಮಾರು ಗಂಟೆಗಳಿಂದ ಕಾದುಕುಳಿತಿದ್ದ ಅಭಿಮಾನಿಗಳಿಗೆ ಕೊನೆಗೂ ಆ ಕ್ಷಣ ಬಂದೆ ಬಿಡ್ತು. ಕಾರ್ಯಕ್ರಮದ ಕೊನೆಯಲ್ಲಿ ಡಿ ಬಾಸ್ ವೇದಿಕೆ ಮೇಲೆ ಬರುತ್ತಿದ್ದಂತೆ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ದರ್ಶನ್ ಏನು ಮಾತನಾಡಲಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿತ್ತು. ವಿಶೇಷ ಎಂದರೆ ವೇದಿಕೆ ಏರಿ ಮೈಕ್ ಮುಂದೆ ಬರುತ್ತಿದ್ದಂತೆ ಚಪ್ಪಲಿ ಬಿಟ್ಟು ಮಾತನಾಡಲು ಪ್ರಾರಂಭಿಸಿದರು. ಉತ್ತರ ಕರ್ನಾಟಕ ಮಂದಿ ಮುಂದೆ ಚಪ್ಪಲಿ ಬಿಟ್ಟು ಮಾತನಾಡಿದ್ದು ಯಾಕೆ ಎಂದು ಅದೇ ಸಮಯದಲ್ಲಿ ವಿವರಿಸಿದರು.

  ತಲೆ ಮೇಲೆ ಸೆರಗು ಹಾಕಿ ಚಪ್ಪಲಿ ಬಿಟ್ಟು ಕೈ ಮುಗಿಯುತ್ತಿದ್ದರು

  ತಲೆ ಮೇಲೆ ಸೆರಗು ಹಾಕಿ ಚಪ್ಪಲಿ ಬಿಟ್ಟು ಕೈ ಮುಗಿಯುತ್ತಿದ್ದರು

  ಯಾವ ಕಾರ್ಯಕ್ರಮದಲ್ಲೂ ಚಪ್ಪಲಿ ಬಿಟ್ಟು ಮಾತನಾಡಲ್ಲ. ಆದರೆ ಉತ್ತರ ಕರ್ನಾಟಕಕ್ಕೆ ಬಂದು ಚಪ್ಪಲಿ ಬಿಟ್ಟು ಮಾತನಾಡಿದ್ರೆ ನಮಗೂ ಸ್ವಲ್ಪ ಮರ್ಯಾದೆ ಇರುತ್ತೆ. ನಾವು ಸಂಗೊಳ್ಳಿ ರಾಯಣ್ಣ ಸಿನಿಮಾ ಸಮಯದಲ್ಲಿ ವಿಜಯ ಯಾತ್ರೆ ಮಾಡಿದ್ವಿ. ಎಲ್ಲಾ ಕಡೆ ಬೆಂಬಲ ಕೊಟ್ರು, ಸಿನಿಮಾನ ಒಂದು ವರ್ಷ ಓಡಿಸಿದ್ರು. ವಿಜಯ ಯಾತ್ರೆ ಹೋದಾಗ ಪ್ರತಿ ಹಳ್ಳಿಗೂ ಹೋಗಬೇಕಾದ್ರೆ ಪ್ರತಿ ಹೆಣ್ಣುಮಕ್ಕಳು, ತಲೆ ಮೇಲೆ ಸೆರಗು, ಹಾಕಿ ಚಪ್ಪಲಿ ಬಿಟ್ಟು ಕೈಮುಗಿಯುತ್ತಿದ್ದರು.

  ನಾವು ಚಪ್ಪಲಿ ಬಿಟ್ಟು ನಿಮಗೆ ಚಪ್ಪಲಿ ಹಾಕಬೇಕು

  ನಾವು ಚಪ್ಪಲಿ ಬಿಟ್ಟು ನಿಮಗೆ ಚಪ್ಪಲಿ ಹಾಕಬೇಕು

  ಅವತ್ತು ಅಂದುಕೊಂಡೆ, ಇದಕ್ಕೆ ನಾವು ಲಾಯಕ್ ಇದಿವಾ ಅಂತ. ನಿಜವಾಗ್ಲು ಲಾಯಕ್ ಇಲ್ಲ ಸ್ವಾಮಿ. ಇವತ್ತು ನಾವು ಚಪ್ಪಲಿ ಬಿಟ್ಟು ನಿಮ್ಮ ಪಾದಗಳಿಗೆ ನಾವು ಚಪ್ಪಲಿ ಹಾಕಬೇಕು ಅಷ್ಟೆ. ಉತ್ತರ ಕರ್ನಾಟಕ ಜನ ನಮಗೆ ಕೊಡುವ ಗೌರವ, ಕಲಾವಿದರಿಗೆ ತೋರಿಸುವ ಪ್ರೀತಿ ಅಷ್ಟಿದೆ.

  ಸಿನಿಮಾ ಇಲ್ಲದಿದ್ದಾಗ ತಂದೆ ಉತ್ತರ ಕರ್ನಾಟಕದಲ್ಲಿ ನಾಟಕ ಮಾಡಿದ್ದಾರೆ

  ಸಿನಿಮಾ ಇಲ್ಲದಿದ್ದಾಗ ತಂದೆ ಉತ್ತರ ಕರ್ನಾಟಕದಲ್ಲಿ ನಾಟಕ ಮಾಡಿದ್ದಾರೆ

  'ನಮ್ಮ ಅಪ್ಪನಿಗೆ ಒಂದು ವರ್ಷ ಕೆಲಸ ಇರಲಿಲ್ಲ.ಆಗ ಏನು ಮಾಡಬೇಕು ಅಂತ ಯೋಚಿಸಿದ್ರು ಸಹ ಏನು ಆಗಿಲ್ಲ. ದಿವ್ಯ ದರ್ಶನ್ ಕಲಾವೃಂದ ಎನ್ನುವ ನಾಟಕ ಕಂಪನಿ ಇತ್ತು. ಸಿನಿಮಾದವರು ಅಂತ ಕರಿತಿಲ್ಲ, ನಾಟಕ ಮಾಡೋಣ ಎಂದು ಉತ್ತರ ಕರ್ನಾಟಕ ಕಡೆ ಹೊರಟರು.' ಎಂದು ತಂದೆ ಕಾಲದಿಂದನೂ ಉತ್ತರ ಕರ್ನಾಟಕ ಮಂದಿ ತೋರಿಸಿದ ಪ್ರೀತಿಗೆ ದರ್ಶನ್ ಧನ್ಯವಾದ ಹೇಳಿದ್ದರು.

  ಮೈಸೂರಿನ ಮನೆ ಕಟ್ಟಿಸಿದ್ದು ಉತ್ತರ ಕರ್ನಾಟಕ ಜನರ ದುಡ್ಡಿನಿಂದ

  ಮೈಸೂರಿನ ಮನೆ ಕಟ್ಟಿಸಿದ್ದು ಉತ್ತರ ಕರ್ನಾಟಕ ಜನರ ದುಡ್ಡಿನಿಂದ

  ನಾಟಕ ಮಾಡುವಾಗ ಉತ್ತರ ಕರ್ನಾಟಕ ಜನರು 5, 2.50, 10 ರೂ. ನೀಡಿದ್ದಾರೆ. ಸುಮಾರು 6 ತಿಂಗಳು ದುಡಿದ್ದಾರೆ. 6 ತಿಂಗಳು ದುಡಿದ ದುಡ್ಡಿಲ್ಲಿ ಮೈಸೂರು ಮನೆ ಕಟ್ಟಿದ್ದೇವೆ. ಮೈಸೂರು ಮನೆ ಉತ್ತರ ಕರ್ನಾಟಕ ಜನ ಕೊಟ್ಟ ಮನೆ. ಆದ್ದರಿಂದ ಇಡೀ ಉತ್ತರ ಕರ್ನಾಟಕಕ್ಕೆ ಧನ್ಯವಾದ ಹೇಳುತ್ತೇನೆ.' ಎಂದು ದರ್ಶನ್ ಉತ್ತರ ಕರ್ನಾಟಕ ಮಂದಿಯ ಮೇಲೆ ಪ್ರೀತಿಯ ಮಳೆಗರೆದಿದ್ದಾರೆ.

  English summary
  Challenging star Darshan talk about love of Uttara Karnataka people in Roberrt pre release event in Hubli.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X