»   » ಅಭಿಮಾನಿಗಳ ಅಭಿಮಾನ ಕಂಡು ಮನದಾಳ ತೆರೆದಿಟ್ಟ ದರ್ಶನ್

ಅಭಿಮಾನಿಗಳ ಅಭಿಮಾನ ಕಂಡು ಮನದಾಳ ತೆರೆದಿಟ್ಟ ದರ್ಶನ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ಇರುವ 'ತೂಗುದೀಪ ನಿಲಯ'ದಲ್ಲಿ ನಿನ್ನೆ (ಫೆಬ್ರವರಿ 16) ಅಕ್ಷರಶಃ ಹಬ್ಬದ ವಾತಾವರಣ. ನೆಚ್ಚಿನ 'ದಾಸ'ನಿಗೆ ಶುಭ ಹಾರೈಸೋಕೆ ಅಭಿಮಾನಿಗಳ ದಂಡು ದರ್ಶನ್ ಮನೆ ಮುಂದೆ ಜಮಾಯಿಸಿತ್ತು.

ಇಡೀ ದಿನವನ್ನು ಅಭಿಮಾನಿಗಳಿಗಾಗಿಯೇ ದರ್ಶನ್ ಮೀಸಲಿಟ್ಟಿದ್ದರು. ಫ್ಯಾನ್ಸ್ ತಂದಿದ್ದ ಕೇಕ್ ಗಳನ್ನೆಲ್ಲ ಕತ್ತರಿಸಿ ಸಂತಸ ಪಟ್ಟ ದರ್ಶನ್ ಟ್ವಿಟ್ಟರ್ ನಲ್ಲಿ ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದಾರೆ.

ಅನಂತ ವಂದನೆ ಸಲ್ಲಿಸಿದ ದರ್ಶನ್

ಹುಟ್ಟುಹಬ್ಬದ ದಿನ ಶುಭ ಕೋರಿದ ಎಲ್ಲರಿಗೂ ದರ್ಶನ್ ಅನಂತಾನಂತ ಧನ್ಯವಾದ ಸಲ್ಲಿಸಿರುವುದು ಹೀಗೆ....

[ದರ್ಶನ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ಕೊಟ್ಟ ಸ್ಪೆಷಲ್ ಉಡುಗೊರೆ ಇದು]

ಪೊಲೀಸರಿಗೂ ಧನ್ಯವಾದ

ಅಭಿಮಾನಿಗಳ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದಿರುವ ದರ್ಶನ್, ಎಲ್ಲರನ್ನೂ ನಿಯಂತ್ರಿಸಲು ಪೊಲೀಸರು ಪಟ್ಟ ಶ್ರಮಕ್ಕೂ ತಲೆಬಾಗಿದ್ದಾರೆ.

ಸದಾ ಚಿರಋಣಿ..

ಅಭಿಮಾನಿಗಳ ಅಭಿಮಾನ ಕಂಡು ಮೂಕವಿಸ್ಮಿತರಾಗಿರುವ ದರ್ಶನ್ ಟ್ವಿಟ್ಟರ್ ಮೂಲಕ ತಮ್ಮ ಮನದಾಳ ತೆರೆದಿಟ್ಟಿದ್ದಾರೆ.

ಹೆಮ್ಮೆಯ ದರ್ಶನ್

ಅಭಿಮಾನಿಗಳು ತಮ್ಮ ಹುಟ್ಟುಹಬ್ಬ ಆಚರಿಸುತ್ತಾರೋ, ಇಲ್ಲವೋ ಗೊತ್ತಿಲ್ಲ. ಆದ್ರೆ, ನೆಚ್ಚಿನ ನಟ ದರ್ಶನ್ ಹುಟ್ಟುಹಬ್ಬವನ್ನ ಮಾತ್ರ ಎಲ್ಲರೂ ಆಚರಿಸುತ್ತಾರೆ. ಇದರ ಬಗ್ಗೆ ದರ್ಶನ್ ಗೆ ಹೆಮ್ಮೆ ಇದೆ.

ಮದರ್ ಇಂಡಿಯಾಗೆ ಧನ್ಯವಾದ

ದರ್ಶನ್ ಹುಟ್ಟುಹಬ್ಬಕ್ಕಾಗಿ ಟ್ವಿಟ್ಟರ್ ಮೂಲಕ ಶುಭ ಕೋರಿದ ಸುಮಲತಾ ಅಂಬರೀಶ್ ಹಾಗೂ ಕಾರುಣ್ಯ ರಾಮ್ ರವರಿಗೂ ದರ್ಶನ್ ಧನ್ಯವಾದ ತಿಳಿಸಿದ್ದಾರೆ.

English summary
Challenging Star Darshan has taken his twitter account to thank all his fans, friends for birthday wishes.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada