For Quick Alerts
  ALLOW NOTIFICATIONS  
  For Daily Alerts

  ಕ್ರಿಸ್‌ಮಸ್‌ಗೆ 'ರಾಬರ್ಟ್' ದರ್ಶನ್ ಶುಭಾಶಯ

  |

  ನಟ ದರ್ಶನ್ ಅವರು ಕ್ರಿಸ್‌ಮಸ್ ಹಬ್ಬದಂದು ಎಲ್ಲ ಕ್ರೈಸ್ತ ಬಾಂಧವರಿಗೆ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

  ಟ್ವಿಟ್ಟರ್‌ನಲ್ಲಿ ಶುಭಾಶಯ ಕೋರಿರುವ ದರ್ಶನ್, 'ಗೆಳೆತನದ ಮಹತ್ವ ಸಾರುವ, ಬಾಂಧವ್ಯವನ್ನು ವೃದ್ಧಿಸುವ, ಖುಷಿಯನ್ನು ಹಂಚುವ ಈ ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಎಲ್ಲಾ ಕ್ರೈಸ್ತ ಬಾಂಧವರಿಗೆ ಹಾರ್ಧಿಕ ಶುಭಾಶಯಗಳು. ಎಲ್ಲರ ಮನೆ ಮನಗಳಲ್ಲಿ ಶಾಂತಿ- ನೆಮ್ಮದಿ ನೆಲಸಲಿ ಎಂದು ಆಶಿಸುತ್ತೇನೆ.' ಎಂದಿದ್ದಾರೆ. ಶುಭಾಶಯದ ಜೊತೆಗೆ ರಾಬರ್ಟ್ ಸಿನಿಮಾದ ತಮ್ಮದೇ ಚಿತ್ರಗಳನ್ನು ಹಂಚಿಕೊಂಡಿದ್ದಾರೆ ದರ್ಶನ್.

  ದರ್ಶನ್ ಅಭಿನಯದ ಮುಂದಿನ ಸಿನಿಮಾ ರಾಬರ್ಟ್‌ ಕಡೆಯಿಂದ ಕ್ರಿಸ್‌ಮಸ್‌ಗೆ ಉಡುಗೊರೆ ನೀಡಲಾಗುತ್ತಿದೆ. ವಿಶೇಷ ರಾಬರ್ಟ್‌ ಮರ್ಚಂಡೈಸ್ ಗಳನ್ನು ಇಂದು ಬಿಡುಗಡೆ ಮಾಡಲಾಗುತ್ತಿದ್ದು, ರಾಬರ್ಟ್‌ ಫೋಟೊಗಳು, ದರ್ಶನ್ ಹೆಸರುಳ್ಳ ವಿಶೇಷ ಉಡುಗೊರೆಗಳನ್ನು ನೀಡಲಾಗುತ್ತಿದೆ. ಈ ಉಡುಗೊರೆಗಳನ್ನು ಆನ್‌ಲೈನ್‌ನಲ್ಲಿ ಖರೀದಿ ಸಹ ಮಾಡಬಹುದಾಗಿದೆ.

  ದರ್ಶನ್ ಅಭಿನಯದ ಮುಂಬರುವ ಸಿನಿಮಾ 'ರಾಬರ್ಟ್‌' ನಲ್ಲಿ ದರ್ಶನ್ ಕ್ರೈಸ್ತ ಧರ್ಮೀಯನ ಪಾತ್ರ ಮಾಡಿದ್ದಾರೆ ಎನ್ನಲಾಗುತ್ತಿದೆ. ರಾಬರ್ಟ್ ಸಿನಿಮಾದ ಪೋಸ್ಟರ್‌ಗಳಲ್ಲಿ ಇದು ಗೊತ್ತಾಗುತ್ತಿದೆ. ಸಿನಿಮಾದಲ್ಲಿ ವಿನೋದ್ ಪ್ರಭಾಕರ್ ಸಹ ಇದ್ದು, ಗೆಳೆತನದ ಕತೆ ಸಾರುವ ಸಿನಿಮಾ ಇದಾಗಿರಲಿದೆ.

  ರಾಬರ್ಟ್ ಸಿನಿಮಾವನ್ನು ತರುಣ್ ಸುಧೀರ್ ನಿರ್ದೇಶಿಸಿದ್ದು, ಉಮಾಪತಿ ಶ್ರೀನಿವಾಸ್ ನಿರ್ಮಿಸಿದ್ದಾರೆ. ಸಿನಿಮಾದಲ್ಲಿ ಆಶಾ ಭಟ್ ನಾಯಕಿಯಾಗಿದ್ದು, ದೇವರಾಜ್, ರವಿಶಂಕರ್, ಜಗಪತಿ ಬಾಬು ಇನ್ನೂ ಹಲವರು ಪ್ರತಿಭಾವಂತ ನಟರ ದಂಡೇ ಇದೆ.

  ಗಾಜನೂರಿಗೆ ಭೇಟಿ ನೀಡಿ ಅಪ್ಪನನ್ನು ನೆನಪು ಮಾಡಿಕೊಂಡ ಪುನೀತ್ ರಾಜಕುಮಾರ್ | Filmibeat Kannada

  ದರ್ಶನ್ ಮಾತ್ರವಲ್ಲದೆ ಇನ್ನೂ ಕೆಲವು ನಟ-ನಟಿಯರು ಕ್ರಿಸ್‌ಮಸ್ ಹಬ್ಬಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯ ಕೋರಿದ್ದಾರೆ.

  English summary
  Actor Darshan Thugudeep wished Marry Christmas in twitter. He posted his photos from the movie Roberrt along with the tweet.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X