»   » ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಕ್ಸ್ ಪ್ಯಾಕ್ ಕಸರತ್ತು?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿಕ್ಸ್ ಪ್ಯಾಕ್ ಕಸರತ್ತು?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ 'ಐರಾವತ' ಚಿತ್ರದ ಶೂಟಿಂಗ್ ಆಮೆ ವೇಗದಲ್ಲಿ ಸಾಗುತ್ತಿದೆ ಎಂಬ ಮಾತುಗಳು ಗಾಂಧಿನಗರದಿಂದ ಪದೇಪದೇ ಕೇಳಿಬರುತ್ತಿವೆ. ಆದರೆ ಯಾಕೆ ತಡವಾಗುತ್ತಿದೆ ಎಂಬುದಕ್ಕೆ ನಿರ್ದಿಷ್ಟ ಕಾರಣಗಳಿಲ್ಲದಿದ್ದರೂ ಚಿತ್ರವನ್ನಂತೂ ಅದ್ದೂರಿಯಾಗಿ ತರುತ್ತಿರುವುದಕ್ಕೆ ಸಾಕಷ್ಟು ನಿದರ್ಶನಗಳು ಸಿಗುತ್ತವೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮತ್ತೊಂದು ಅದ್ದೂರಿ ಚಿತ್ರ 'ಐರಾವತ'. ಎಪಿ ಅರ್ಜುನ್ ಆಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಚಿತ್ರಕ್ಕಾಗಿ ದರ್ಶನ್ ದೇಹವನ್ನು ಎರ್ರಾಬಿರ್ರಿ ದಂಡಿಸಿದ್ದಾರೆ. [ಅರ್ಜುನ್, ದರ್ಶನ್ ಇಬ್ಬರಿಗೂ ಚಾಲೆಂಜ್ 'ಐರಾವತ']


darshan-to-flaunt-six-pack-abs

ತಮ್ಮ ಐರಾವತ ಚಿತ್ರದ ಪಾತ್ರಕ್ಕಾಗಿ ದರ್ಶನ್ ಮೈ ಹುರಿಗಟ್ಟಿಸುತ್ತಿದ್ದು ಹೊಸ ಲುಕ್ ನಲ್ಲಿ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದ್ದಾರೆ. ಒಂದು ವಾರ ಕಾಲ ಕಸರತ್ತು ಮಾಡಿ ತಮ್ಮ ದೇಹವನ್ನು ಹುರಿಗಟ್ಟಿಸಿದ್ದಾರೆ ದರ್ಶನ್. [ಅಂಬರೀಶ ಚಿತ್ರ ವಿಮರ್ಶೆ]


ಖ್ಯಾತ ನಟ ಪ್ರಕಾಶ್ ರೈ ಸಹ ಚಿತ್ರದಲ್ಲಿದ್ದು ದರ್ಶನ್ ಜೊತೆಗಿನ ಮುಖಾಮುಖಿ ಸನ್ನಿವೇಶಕ್ಕಾಗಿ ಈ ಎಲ್ಲಾ ಕಸರತ್ತು ಎನ್ನಲಾಗಿದೆ. ತಮ್ಮ ಪಾತ್ರಕ್ಕಾಗಿ ದರ್ಶನ್ ಡಯಟ್ ಸಹ ಮಾಡಿದ್ದು ಸಾಕಷ್ಟು ಮುಂಜಾಗ್ರತೆಗಳನ್ನು ತೆಗೆದುಕೊಂಡಿದ್ದಾರೆ.


darshan-to-flaunt-six-pack-abs

ಇದೇ ಮೊದಲ ಬಾರಿಗೆ ದರ್ಶನ್ ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿದರೂ ಅಚ್ಚರಿಯಿಲ್ಲ. ಒಂದು ವೇಳೆ ಸಿಕ್ಸ್ ಪ್ಯಾಕ್ ನಲ್ಲಿ ದರ್ಶನ್ ಕಾಣಿಸಿದರೆ ಅಭಿಮಾನಿಗಳಿಗೆ ಅದಕ್ಕಿಂತಲೂ ಖುಷಿಯ ಸಂಗತಿ ಇನ್ನೊಂದಿರಲಿಕ್ಕಿಲ್ಲ. (ಏಜೆನ್ಸೀಸ್)

English summary
If reports are to be believed, Challenging Star Darshan sport six-pack abs for his upcoming movie 'Airawata'. Darshan toned his for new look in the movie. The movie is being directed by AP Arjun and produced by Sandesh Nagaraj.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada