»   » ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಡ್ಡದಿಂದ ಇದೀಗ ಬಂದ ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಡ್ಡದಿಂದ ಇದೀಗ ಬಂದ ಸುದ್ದಿ

Posted By:
Subscribe to Filmibeat Kannada

'ಜಗ್ಗುದಾದಾ' ಸಿನಿಮಾ ಮುಗಿದ ಮೇಲೆ 'ಚಕ್ರವರ್ತಿ' ಚಿತ್ರದ ಶೂಟಿಂಗ್ ನಲ್ಲಿ ನಿಮ್ಮೆಲ್ಲರ ಪ್ರೀತಿಯ ದಾಸ ದರ್ಶನ್ ತೊಡಗಿದ್ದಾರೆ. ಸದ್ಯ ಮಲೇಶಿಯಾದಲ್ಲಿ 'ಚಕ್ರವರ್ತಿ' ಚಿತ್ರೀಕರಣ ನಡೆಯುತ್ತಿದೆ.

ಈ ವರ್ಷಾಂತ್ಯ, ತಪ್ಪಿದರೆ ಮುಂದಿನ ವರ್ಷದ ಆರಂಭದಲ್ಲಿ 'ಚಕ್ರವರ್ತಿ' ಬಿಡುಗಡೆ ಆಗುವ ಸಾಧ್ಯತೆ ಇದೆ. 'ಚಕ್ರವರ್ತಿ' ಬಳಿಕ ದರ್ಶನ್ ಯಾವ ಚಿತ್ರ ಕೈಗೆತ್ತಿಕೊಳ್ಳುತ್ತಾರೆ? ಈ ಪ್ರಶ್ನೆಗೆ ಉತ್ತರ ಇಲ್ಲಿದೆ. ಮುಂದೆ ಓದಿ.....

'ಮಿಲನ' ಪ್ರಕಾಶ್ ನಿರ್ದೇಶನದ ಚಿತ್ರದಲ್ಲಿ ದರ್ಶನ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಡ್ಡದಿಂದ ಇದೀಗ ಬಂದಿರುವ ಸುದ್ದಿ ಅಂದ್ರೆ ಇದೇ. 'ಮಿಲನ' ಖ್ಯಾತಿಯ ಪ್ರಕಾಶ್ ನಿರ್ದೇಶನದ ಚಿತ್ರದಲ್ಲಿ ನಟಿಸಲು ದರ್ಶನ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. [ದರ್ಶನ್ ನಾಟ್ ರೀಚಬಲ್ ಆಗಿದ್ರೆ..ಟೆನ್ಷನ್ ಮಾಡ್ಕೊಬೇಡಿ, ಯಾಕಂದ್ರೆ..]

ಲಾಂಗು-ಮಚ್ಚು ನಿರೀಕ್ಷೆ ಮಾಡಬೇಡಿ.!

ಪ್ರಕಾಶ್ ಹಾಗೂ ದರ್ಶನ್ ಕಾಂಬಿನೇಷನ್ ನಲ್ಲಿ ಮೂಡಿ ಬರುವ ಚಿತ್ರದಲ್ಲಿ ಲಾಂಗು-ಮಚ್ಚು-ರಕ್ತಪಾತ ನಿರೀಕ್ಷೆ ಮಾಡಬೇಡಿ. ಇದು ಅಪ್ಪಟ ಫ್ಯಾಮಿಲಿ ಎಂಟರ್ ಟೇನ್ಮೆಂಟ್ ಸಿನಿಮಾ ಆಗಿರಲಿದೆ ಎನ್ನುತ್ತಾರೆ ನಿರ್ದೇಶಕ ಪ್ರಕಾಶ್. [ಫೋಟೋ ನೋಡಿ: ಮಲೇಶಿಯಾದಲ್ಲಿ 'ಚಕ್ರವರ್ತಿ' ದರ್ಶನ್ ಚಕ್ರಾಧಿಪತ್ಯ]

ಹೇಳಿ ಕೇಳಿ ಇದು ಪ್ರಕಾಶ್ ನಿರ್ದೇಶನದ ಸಿನಿಮಾ

'ಖುಷಿ', 'ರಿಶಿ', 'ಶ್ರೀ', 'ಮಿಲನ', 'ವಂಶಿ', 'ಗೋಕುಲ', 'ಸಿದ್ದಾರ್ಥ'...ಹೀಗೆ ಪ್ರಕಾಶ್ ನಿರ್ದೇಶನದ ಎಲ್ಲಾ ಚಿತ್ರಗಳಲ್ಲಿ 'ಫ್ಯಾಮಿಲಿ ಡ್ರಾಮಾ'ಗೆ ಹೆಚ್ಚು ಪ್ರಾಮುಖ್ಯತೆ ಕೊಡಲಾಗಿತ್ತು. ಅದರಂತೆ, ದರ್ಶನ್ ಗೂ 'ಕ್ಲಾಸ್' ಇಮೇಜ್ ನೀಡುವ ತವಕದಲ್ಲಿದ್ದಾರೆ ಪ್ರಕಾಶ್.

ಶೀರ್ಷಿಕೆ ಏನು.?

ಮೊಟ್ಟಮೊದಲ ಬಾರಿಗೆ ದರ್ಶನ್-ಪ್ರಕಾಶ್ ಒಂದಾಗುತ್ತಿರುವ ಚಿತ್ರಕ್ಕಿನ್ನೂ ಶೀರ್ಷಿಕೆ ಫೈನಲ್ ಆಗಿಲ್ಲ.

ಶೂಟಿಂಗ್ ಶುರು ಯಾವಾಗ?

'ಚಕ್ರವರ್ತಿ' ಚಿತ್ರದ ಚಿತ್ರೀಕರಣ ಇನ್ನೊಂದು ತಿಂಗಳಲ್ಲಿ ಪೂರ್ಣವಾಗುತ್ತೆ. ಅದು ಮುಗಿದ ಕೂಡಲೆ, ಅಂದ್ರೆ ನವೆಂಬರ್ ನಲ್ಲಿ ಹೊಸ ಸಿನಿಮಾ ಸೆಟ್ಟೇರಲಿದೆ.

ನಿರ್ಮಾಪಕರು ಯಾರು?

ಈ ಹಿಂದೆ 'ಮಿಲನ' ಹಾಗೂ 'ಶ್ರೀ' ಚಿತ್ರಗಳನ್ನ ನಿರ್ಮಿಸಿದ್ದ ಪ್ರಕಾಶ್ ರವರ ಸಂಬಂಧಿ ದುಶ್ಯಂತ್ ಈ ಚಿತ್ರಕ್ಕೂ ಬಂಡವಾಳ ಹಾಕಲಿದ್ದಾರೆ.

ಬಾಕಿ ತಾರಾಗಣ

ಪ್ರಕಾಶ್ ನಿರ್ದೇಶನದ ಚಿತ್ರದಲ್ಲಿ ದರ್ಶನ್ ಹೀರೋ ಅನ್ನೋದು ಬಿಟ್ಟರೆ ಬಾಕಿ ಇನ್ನೇನೂ ಕನ್ ಫರ್ಮ್ ಆಗಿಲ್ಲ. ಆದ ತಕ್ಷಣ ನಾವೇ ನಿಮಗೆ ಅಪ್ ಡೇಟ್ ನೀಡ್ತೀವಿ.

English summary
Challenging Star Darshan is now teaming up with Kannada Director 'Milana' Prakash for his next. The movie is set to be Family Drama.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada