Don't Miss!
- Sports
ಗೆದ್ದ ಜಯ್ ಶಾ ಹಠ, ಪಾಕ್ಗೆ ಹಿನ್ನೆಡೆ; ತಟಸ್ಥ ಸ್ಥಳದಲ್ಲಿ 2023ರ ಏಷ್ಯಾಕಪ್ ಆಯೋಜಿಸಲು ನಿರ್ಧಾರ
- Lifestyle
Horoscope Today 5 Feb 2023: ಭಾನುವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ಗುಜರಾತ್ಗೆ ಬರಲಿದ್ದಾರೆ ಯುಎಸ್ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್
- Finance
ಅದಾನಿ ಸ್ಟಾಕ್ ಕುಸಿತ: 'ನಿಯಂತ್ರಕರು ಅವರ ಕೆಲಸ ಮಾಡುತ್ತಾರೆ', ಎಂದ ವಿತ್ತ ಸಚಿವೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಬಹುಬೇಡಿಕೆಯ ಟೊಯೊಟಾ ಹೈರೈಡರ್ ಎಸ್ಯುವಿ
- Technology
ಅಜ್ಜಿಗೆ ಆಪ್ಗಳ ಬಗ್ಗೆ ತಿಳಿಸಿಕೊಟ್ಟ ಯುವಕ; ವೈರಲ್ ಆಯ್ತು ವಿಡಿಯೋ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬುಲೆಟ್ ಪ್ರಕಾಶ್ ಬಿಟ್ಟುಹೋದ ದೊಡ್ಡ ಜವಾಬ್ದಾರಿ ಹೊತ್ತುಕೊಂಡ ದರ್ಶನ್
ಹಾಸ್ಯ ನಟ ಬುಲೆಟ್ ಪ್ರಕಾಶ್ ಇಹಲೋಕ ತ್ಯಜಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳು, ಸಿನಿ ಮಿತ್ರರನ್ನು ಅವರು ಶೋಕ ಸಾಗರದಲ್ಲಿ ಮುಳುಗಿಸಿದ್ದಾರೆ.
ಒಂದು ಕಾಲದಲ್ಲಿ ದಿನಕ್ಕೂ ಮೂರು-ನಾಲ್ಕು ಸಿನಿಮಾಗಳ ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದ ಬುಲೆಟ್ ಇತ್ತೀಚೆಗೆ ಅನಾರೋಗ್ಯದ ಸಮಸ್ಯೆಯಿಂದ ಅವಕಾಶಗಳಿಲ್ಲದೆ ಕೊರಗಿದ್ದರು.
ಕನಸು
ಈಡೇರಿಸಿಕೊಳ್ಳದೆ
ಇಹಲೋಕ
ತ್ಯಜಿಸಿದ
ಬುಲೆಟ್
ಪ್ರಕಾಶ್
ಬುಲೆಟ್ ಪ್ರಕಾಶ್ ಮಾನಸಿಕವಾಗಿ, ದೈಹಿಕವಾಗಿ ಮಾತ್ರವಲ್ಲದೆ ಆರ್ಥಿಕವಾಗಿ ಕುಸಿದಿದ್ದರು. ಕೊನೆಗೆ ಇಂದು ಕಿಡ್ನಿ, ಲಿವರ್ ವೈಫಲ್ಯದಿಂದ ನಿಧನರಾಗಿದ್ದಾರೆ.
ಬುಲೆಟ್ ಪ್ರಕಾಶ್ ನಿಧನ ಹೊಂದಿದ್ದಾರಾದರೂ ಅವರ ಗೆಳೆಯರು ಅವರ ಕುಟುಂಬದ ಕೈ ಬಿಟ್ಟಿಲ್ಲ. ಸ್ಟಾರ್ ನಟ ಬುಲೆಟ್ ಮಗಳ ಮದುವೆ ಜವಾಬ್ದಾರಿ ಹೊತ್ತಿದ್ದಾರೆ.

ದರ್ಶನ್ ಸಿನಿಮಾದಲ್ಲಿ ಬುಲೆಟ್‌ಗೆ ಪಾತ್ರ ಮೀಸಲು
ನಟ ದರ್ಶನ್ ಮತ್ತು ಬುಲೆಟ್ ಪ್ರಕಾಶ್ ಆತ್ಮೀಯರಾಗಿದ್ದರು. ದರ್ಶನ್ ಅಭಿನಯಿಸುವ ಪ್ರತಿ ಸಿನಿಮಾದಲ್ಲಿ ಬುಲೆಟ್ ಅವರಿಗೆ ಒಂದು ಪಾತ್ರ ಮೀಸಲಾಗಿರುತ್ತಿತ್ತು. ಇತ್ತೀಚೆಗೆ ಇಬ್ಬರೂ ದೂರಾಗಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು.

ಅತಿ ದೊಡ್ಡ ಜವಾಬ್ದಾರಿ ಹೊತ್ತುಕೊಂಡ ದರ್ಶನ್
ಆದರೆ ದರ್ಶನ್ ಬೇರಾವುದನ್ನೂ ಮನಸ್ಸಿನಲ್ಲಿಟ್ಟುಕೊಳ್ಳದೆ, ಬುಲೆಟ್ ಪ್ರಕಾಶ್ ಕುಟುಂಬಕ್ಕೆ ಆಸರೆಯಾಗಿ ನಿಂತಿದ್ದಾರೆ. ಬುಲೆಟ್ ಪ್ರಕಾಶ್ ಮಗಳ ಮದುವೆಯ ಅತಿ ದೊಡ್ಡ ಜವಾಬ್ದಾರಿಯನ್ನು ತನ್ನ ಹೆಗಲಿಗೆ ಹಾಕಿಕೊಂಡಿದ್ದಾರೆ.
BIG
BREAKING:
ಹಾಸ್ಯ
ನಟ
ಬುಲೆಟ್
ಪ್ರಕಾಶ್
ವಿಧಿವಶ

ದಿನಕರ್ ತೂಗುದೀಪ್-ಬುಲೆಟ್ ಪ್ರಕಾಶ್ ವಿವಾದ
ದರ್ಶನ್ ಸಿನಿಮಾವನ್ನು ತಾವು ನಿರ್ದೇಶಿಸಬೇಕು ಎಂಬ ಆಸೆ ಬುಲೆಟ್ ಪ್ರಕಾಶ್ ಗೆ ಇತ್ತು, ಅದಕ್ಕಾಗಿ ಅವರು ದರ್ಶನ್ ಕಾಲ್‌ಶೀಟ್ ಪಡೆದಿರುವುದಾಗಿಯೂ ಹೇಳಿದ್ದರು. ಇದು ದರ್ಶನ್ ತಮ್ಮ ದಿನಕರ್ ಮತ್ತು ಬುಲೆಟ್ ನಡುವೆ ಜಗಳಕ್ಕೆ ಕಾರಣವಾಯಿತು. ದಿನಕರ್ ತಮ್ಮನ್ನು ಹೊಡೆದಿದ್ದಾಗಿಯೂ ಬುಲೆಟ್ ಹೇಳಿಕೊಂಡಿದ್ದರು. ಘಟನೆ ನಂತರ ದರ್ಶನ್-ಬುಲೆಟ್ ದೂರಾದರು.

ಈಡೇರಲೇ ಇಲ್ಲ ಬುಲೆಟ್ ಪ್ರಕಾಶ್ ಆಸೆ
ಆದರೆ ಕಳೆದ ಬಾರಿ ಬುಲೆಟ್ ಪ್ರಕಾಶ್ ಆಸ್ಪತ್ರೆ ಸೇರಿದಾಗ ದರ್ಶನ್ ಅವರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಬುಲೆಟ್ ಪ್ರಕಾಶ್ ಗೆ ಧೈರ್ಯ ತುಂಬಿದ್ದರು. ಆದರೆ ದರ್ಶನ್ ಸಿನಿಮಾ ನಿರ್ದೇಶಿಸಬೇಕು ಎಂಬ ಬುಲೆಟ್ ಆಸೆ ಈಡೇರಲೇ ಇಲ್ಲ.