For Quick Alerts
  ALLOW NOTIFICATIONS  
  For Daily Alerts

  ಕೀನ್ಯಾ ರಾಷ್ಟೀಯ ಉದ್ಯಾನವನದಲ್ಲಿ ದರ್ಶನ್ ಫೋಟೋಗ್ರಾಫಿ

  |

  ಸುದೀಪ್ ಮತ್ತು ದರ್ಶನ್ ನಡುವಿನ ಸ್ಟಾರ್ ವಾರ್ ಸುದ್ದಿ ಒಂದು ಕಡೆ ನಡೆಯುತ್ತಿದೆ. ಇನ್ನೊಂದು ಕಡೆ ತಮ್ಮ ಕ್ಯಾಮರಾ ಹಿಡಿದು ದರ್ಶನ್ ಕೀನ್ಯಾಗೆ ಸಾಗಿದ್ದಾರೆ.

  ವೈಲ್ಡ್ ಲೈಫ್ ಫೋಟೋಗ್ರಾಫಿಯನ್ನು ಹವ್ಯಾಸವನ್ನಾಗಿ ಮಾಡಿಕೊಂಡಿರುವ ದರ್ಶನ್ ಇದೀಗ ಮತ್ತೆ ಅದನ್ನು ಮುಂದುವರೆಸಿದ್ದಾರೆ. 'ರಾಬರ್ಟ್' ಸಿನಿಮಾದ ಚಿತ್ರೀಕರಣದಿಂದ ಬಿಡುವು ಮಾಡಿಕೊಂಡಿರುವ ದರ್ಶನ್ ಮತ್ತೆ ಕ್ಯಾಮರಾ ಜೊತೆಗೆ ಪ್ರಯಾಣ ಬೆಳೆಸಿದ್ದಾರೆ.

  ದರ್ಶನ್ - ಸುದೀಪ್ ಜಗಳದ ನಡುವೆ ಸುಮಲತಾರನ್ನು ಏಳೆದು ತಂದ ಕಿಡಿಗೇಡಿಗಳು

  ಕೀನ್ಯಾದ Maasai Mara ಎಂಬ ರಾಷ್ಟೀಯ ಉದ್ಯಾನವನಕ್ಕೆ ದರ್ಶನ್ ಭೇಟಿ ನೀಡುತ್ತಿದ್ದಾರೆ. ಅಲ್ಲಿನ ಪ್ರಾಣಿಗಳನ್ನು ತಮ್ಮ ಕ್ಯಾಮರಾ ಮೂಲಕ ಸೆರೆ ಹಿಡಿಯುತ್ತಿದ್ದಾರೆ. ದರ್ಶನ್ ರ ಫೋಟೋವನ್ನು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ನಿರ್ಮಾಪಕ ಉಮಾಪತಿ ಈ ವಿಷಯವನ್ನು ಹಂಚಿಕೊಂಡಿದ್ದಾರೆ.

  ಈ ಹಿಂದೆ ಅರಣ್ಯ ಇಲಾಖೆಯ ರಾಯಭಾರಿ ಆಗಿದ್ದ ದರ್ಶನ್, ಪ್ರಾಣಿಗಳ ಫೋಟೋಗಳನ್ನು ಸೆರೆ ಹಿಡಿದಿದ್ದರು. ಈ ಫೋಟೋಗಳನ್ನು ಮಾರಾಟಕ್ಕೆ ಇಟ್ಟು ಅದರಿಂದ ಬಂದ ಹಣವನ್ನು ಅರಣ್ಯ ಇಲಾಖೆಗೆ ನೀಡಿದ್ದರು. ಇದೀಗ ಮತ್ತೆ ಅದೇ ರೀತಿಯ ಯೋಚನೆಯಿಂದಲೋ ಏನೋ ಮತ್ತೆ ಐರಾವತ ಕೀನ್ಯಾಗೆ ಸಾಗಿದೆ.

  'ಒಡೆಯ'ನ ಖದರ್ ಪೋಟೋ ಹಂಚಿಕೊಂಡ ಡಿ ಬಾಸ್

  ದರ್ಶನ್ 'ರಾಬರ್ಟ್' ಸಿನಿಮಾದ ಚಿತ್ರೀಕರಣದಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. 'ಒಡೆಯ', 'ಗಂಡುಗಲಿ ಮದಕರಿ ನಾಯಕ' ಹಾಗೂ ಮಿಲನ ಪ್ರಕಾಶ್ ನಿರ್ದೇಶನದ ಚಿತ್ರ ಅವರ ಮುಂದಿನ ಸಿನಿಮಾಗಳಾಗಿವೆ.

  English summary
  Actor Darshan traveling to Maasai Mara (Kenya) for wildlife photography.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X