For Quick Alerts
  ALLOW NOTIFICATIONS  
  For Daily Alerts

  ಅಭಿಷೇಕ್ ಅಂಬರೀಶ್ ಪರವಾಗಿ ಮನವಿ ಮಾಡಿದ ದರ್ಶನ್

  |

  ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ ಚೊಚ್ಚಲ ಸಿನಿಮಾ 'ಅಮರ್'ಗೆ ನಟ ದರ್ಶನ್ ಸದಾ ಜೊತೆಯಾಗಿ ನಿಂತಿದ್ದಾರೆ. ಅಂಬಿಗೆ ದೊಡ್ಮಗನಂತಿದ್ದ ದರ್ಶನ್ ಈಗ ಅಭಿಷೇಕ್ ಅಣ್ಣನ ಸ್ಥಾನದಲ್ಲಿ ನಿಂತು ಅಮರ್ ಚಿತ್ರಕ್ಕೆ ಬೆಂಬಲ ನೀಡ್ತಿದ್ದಾರೆ.

  ದರ್ಶನ್ ಯಜಮಾನ ಸಿನಿಮಾ ಬಿಡುಗಡೆ ದಿನವೇ ಅಮರ್ ಚಿತ್ರದ ಟ್ರೈಲರ್ ಲಾಂಚ್ ಆಗ್ತಿದ್ದು, ಡಿ ಬಾಸ್ ಅಭಿಮಾನಿಗಳಿಗೆ ಡಬಲ್ ಧಮಾಕ ಆಗಿದೆ. ಈ ಮೂಲಕ ದಚ್ಚು ಜೊತೆ ಅಮರ್ ನೋಡುವ ಸರ್ಪ್ರೈಸ್ ಕೂಡ ಕನ್ನಡ ಪ್ರೇಕ್ಷಕರಿಗೆ ಸಿಗಲಿದೆ.

  ಮಾರ್ಚ್ 1 ರಂದು ಅಣ್ಣನ ಜೊತೆಯಲ್ಲೇ ಬರ್ತಾರೆ ಅಭಿಷೇಕ್.!

  ಮಾರ್ಚ್ 1 ರಂದು ಅಮರ್ ಟ್ರೈಲರ್ ಬಿಡುಗಡೆಯಾಗುತ್ತಿದ್ದು ಈ ಬಗ್ಗೆ ದರ್ಶನ್ ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.

  ''ನನ್ನ ಪ್ರೀತಿಯ ತಮ್ಮ ಅಭಿಷೇಕ್ ಅಂಬರೀಷ್ 'ಅಮರ್' ಚಿತ್ರದ ಮೂಲಕ ಯಂಗ್ ರೆಬೆಲ್ ಸ್ಟಾರ್ ಆಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾನೆ. ಚಿತ್ರದ ಟ್ರೈಲರ್ ಮಾರ್ಚ್ 1, ಬೆಳಗ್ಗೆ 10:08 ಗಂಟೆಗೆ ಬಿಡುಗಡೆಯಾಗಲಿದೆ. ಅಪ್ಪಾಜಿಯ ಖದರ್ ಅನ್ನು ಅಭಿಯಲ್ಲೂ ಕಾಣಬಹುದು. ನೋಡಿ ಹರಸಿ, ಪ್ರೀತಿಯಿಂದ ಅಭಿಯನ್ನು ಸ್ವಾಗತಿಸಬೇಕಾಗಿ ವಿನಂತಿ'' ಮಾಡಿಕೊಂಡಿದ್ದಾರೆ.

  ಅಂಬಿ ಪುತ್ರ ಅಭಿಷೇಕ್ ಮತ್ತು 'ದೊಡ್ಮಗ' ದರ್ಶನ್ ಕೊಟ್ರು ಬ್ರೇಕಿಂಗ್ ನ್ಯೂಸ್

  ವಿಶೇಷ ಅಂದ್ರೆ ಅಮರ್ ಚಿತ್ರದಲ್ಲಿ ದರ್ಶನ್ ಕೂಡ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಅಂಬಿ ಇಲ್ಲದೇ ಒಂಟಿಯಾಗಿರುವ ಅಭಿಷೇಕ್ ಗೆ ಸಹೋದರನ ಸ್ಥಾನದಲ್ಲಿ ನಿಂತು ದಾಸ ಸಪೋರ್ಟ್ ಮಾಡ್ತಿದ್ದಾರೆ. ದರ್ಶನ್ ಅವರ ಈ ಟ್ವೀಟ್ ಗೆ ಸುಮಲತಾ ಅಂಬರೀಶ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

  English summary
  Rebel star ambarish son abhishek starrer amar movie trailer will release with darshan's yajamana on march 1st. now darshan has taken his twitter account to welcome abhi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X