For Quick Alerts
  ALLOW NOTIFICATIONS  
  For Daily Alerts

  ಜೆಎಸ್‌ಎಸ್‌ ಕಾಲೇಜಿಗೆ ಡಿ ಬಾಸ್ ಎಂಟ್ರಿ: ವಿದ್ಯಾರ್ಥಿಗಳ ಜೊತೆ ಸಂಭ್ರಮ

  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಂದು ಮೈಸೂರಿನ ಜೆಎಸ್‌ಎಸ್‌ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಜೊತೆ ಕೆಲ ಕಾಲ ಸಮಯ ಕಳೆದಿದ್ದಾರೆ.

  ಮೈಸೂರಿನ ಜೆ. ಎಸ್.ಎಸ್. ಕಾಲೇಜಿನಲ್ಲಿ ನಡೆದ ಸ್ಕಾಲರ್ ಶಿಪ್ ವಿತರಣೆ ಕಾರ್ಯಕ್ರಮದಲ್ಲಿ ನಟ ದರ್ಶನ್ ಮುಖ್ಯ ಅತಿಥಿಯಾಗಿಯಾಗಿ ಭಾಗವಹಿಸಿದ್ದರು. ಈ ವೇಳೆ ವಿಶೇಷ ಚೇತನ ಮಕ್ಕಳ ಜೊತೆ ಸಂಭ್ರಮಿಸಿದರು. ಅವರ ಜೊತೆ ಕುಳಿತು ಫೋಟೋ ಕ್ಲಿಕ್ಕಿಸಿಕೊಂಡರು.

  ದರ್ಶನ್‌ಗೆ ವಿಶೇಷವಾದ ಉಡುಗೊರೆ ನೀಡಿದ ಹುಬ್ಬಳ್ಳಿ ಅಭಿಮಾನಿ

  ವಿದ್ಯಾರ್ಥಿಗಳು ಡೈಲಾಗ್‌ ಹೇಳಲು ಹೆಚ್ಚು ಬೇಡಿಕೆಯಿಟ್ಟ ಹಿನ್ನೆಲೆ ರಾಬರ್ಟ್ ಚಿತ್ರದ ಡೈಲಾಗ್ ಹೇಳಿ ಮಕ್ಕಳನ್ನು ಖುಷಿ ಪಡಿಸಿದರು. ದಾಸ ದರ್ಶನ್ ಜೆಎಸ್‌ಎಸ್‌ ಕಾಲೇಜಿಗೆ ಭೇಟಿ ನೀಡಿದ ಫೊಟೋಗಳು ಹಾಗೂ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

  ಇನ್ನು ಡಿ ಬಾಸ್ ನಟನೆಯ ರಾಬರ್ಟ್ ಸಿನಿಮಾ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮಾರ್ಚ್ 11 ರಂದು ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ತರುಣ್ ಸುಧೀರ್ ಈ ಚಿತ್ರ ನಿರ್ದೇಶನ ಮಾಡಿದ್ದು, ಉಮಾಪತಿ ಶ್ರೀನಿವಾಸ್ ಗೌಡ ಬಂಡವಾಳ ಹಾಕಿದ್ದಾರೆ.

  ದರ್ಶನ್ ಜೊತೆ ವಿನೋದ್ ಪ್ರಭಾಕರ್, ಜಗಪತಿ ಬಾಬು, ಆಶಾ ಭಟ್, ಚಿಕ್ಕಣ್ಣ, ದೇವರಾಜ್, ರವಿಶಂಕರ್, ಧರ್ಮಣ್ಣ, ಐಶ್ವರ್ಯ ಪ್ರಸಾದ್, ಸೋನಲ್, ದಿಲೀಪ್ ಸೇರಿದಂತೆ ಹಲವರು ನಟಿಸಿದ್ದಾರೆ. ಅರ್ಜುನ್ ಜನ್ಯ ಸಂಗೀತ ಒದಗಿಸಿದ್ದಾರೆ.

  ತರುಣ್ ಸುಧೀರ್ ಗೆ ಮದುವೆ ಮಾಡಿಸುತ್ತಾರಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ | Tharun Sudhir is all set to tie Knot
  English summary
  Challenging star Darshan visit to Mysore JSS college as a chief guest.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X