»   » ಪುಟ್ಟಣ್ಣಯ್ಯ ಕುಟುಂಬಕ್ಕೆ ಸಾಂತ್ವನ ಹೇಳಿದ ನಟ ದರ್ಶನ್

ಪುಟ್ಟಣ್ಣಯ್ಯ ಕುಟುಂಬಕ್ಕೆ ಸಾಂತ್ವನ ಹೇಳಿದ ನಟ ದರ್ಶನ್

Posted By:
Subscribe to Filmibeat Kannada
ಪುಟ್ಟಣ್ಣಯ್ಯ ಕುಟುಂಬಕ್ಕೆ ಸಾಂತ್ವನ ಹೇಳಿದ ನಟ ದರ್ಶನ್ | Oneindia Kannada

ರೈತ ಮುಖಂಡ, ಮೇಲುಕೋಟೆ ಕ್ಷೇತ್ರದ ಸರ್ವೋದಯ ಪಕ್ಷದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ನಿಧನಕ್ಕೆ ಚಿತ್ರರಂಗದ ಸಾಕಷ್ಟು ಗಣ್ಯರು ಕಂಬನಿ ಮಿಡಿದಿದ್ದಾರೆ. ನಟ ದರ್ಶನ್ ಸಹ ಪುಟ್ಟಣ್ಣಯ್ಯ ಅವರ ಅಂತಿಮ ದರ್ಶನವನ್ನು ಪಡೆದಿದ್ದಾರೆ.

ಪುಟ್ಟಣ್ಣಯ್ಯ ಅವರ ಮೃತದೇಹವನ್ನು ಸ್ವಗ್ರಾಮ ಕ್ಯಾತನಹಳ್ಳಿಯಲ್ಲಿ ಇಡಲಾಗಿದೆ. ದರ್ಶನ್ ನಿನ್ನೆ ರಾತ್ರಿ 1 ಗಂಟೆಗೆ ವೇಳೆಗೆ ಅಲ್ಲಿಗೆ ಬಂದು ಅಂತಿಮ ದರ್ಶನ ಪಡೆದಿದ್ದಾರೆ ಹಾಗೂ ಪುಟ್ಟಣ್ಣಯ್ಯ ಅವರ ಪತ್ನಿ, ಪುತ್ರನಿಗೆ ಸಾಂತ್ವನ ಹೇಳಿದ್ದಾರೆ.

ಕಬಡ್ಡಿ ಪಂದ್ಯ ವೀಕ್ಷಿಸುತ್ತಿದ್ದ ಪುಟ್ಟಣ್ಣಯ್ಯ ಅವರು ಎದೆ ನೋವಿನಿಂದ ಕುಸಿದು ಬಿದ್ದಿದ್ದರು. ಅವರನ್ನು ತಕ್ಷಣವೇ ಮಿಮ್ಸ್ ಆಸ್ಪತ್ರೆಗೆ ಸೇರಿಸಲಾಗಿತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಹೃದಯಾಘಾತದಿಂದ ಪುಟ್ಟಣ್ಣಯ್ಯ ನಿಧನ ನಿನ್ನೆ (ಫೆಬ್ರವರಿ 18)ಹೊಂದಿದ್ದಾರೆ.

Darshan visited ks puttannaiah house to offer his last prayers

ಇನ್ನು ಮೃತರ ಅಂತ್ಯಕ್ರಿಯೆಯನ್ನು ಬುಧವಾರದಂದು ಕ್ಯಾತನಹಳ್ಳಿಯಲ್ಲಿ ನೆರವೇರಿಸಲಾಗುತ್ತದೆ ಎಂದು ಪುತ್ರ ದರ್ಶನ್ ಹೇಳಿದ್ದಾರೆ. ಪುಟ್ಟಣ್ಣಯ್ಯ ಅವರ ಹೆಣ್ಣುಮಕ್ಕಳು, ಅಳಿಯಂದಿರು ವಿದೇಶದಲ್ಲಿದ್ದು, ಅವರು ಮಂಗಳವಾರ ಸಂಜೆ ವೇಳೆಗೆ ಇಲ್ಲಿಗೆ ತಲುಪಲಿದ್ದಾರೆ

English summary
Kannada actor Darshan visited ks puttannaiah house to offer his last prayers. Melukote MLA, Farmers leader KS Puttannaiah (69) dies of Heart attack Sunday(February 18) evening while watching a Kabaddi match at Mandya.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada