For Quick Alerts
  ALLOW NOTIFICATIONS  
  For Daily Alerts

  ಮತ್ತೆ ಕಾಡಿನ ಮಡಿಲು ಹೊಕ್ಕ ಡಿ-ಬಾಸ್ ದರ್ಶನ್

  |

  ಅರಣ್ಯ ಮತ್ತು ವನ್ಯಜೀವಿಗಳ ಬಗೆಗೆ ವಿಶೇಷ ಪ್ರೀತಿ ಇರಿಸಿಕೊಂಡಿದ್ದಾರೆ ನಟ ದರ್ಶನ್. ವನ್ಯಜೀವಿ ಛಾಯಾಗ್ರಹಣ ದರ್ಶನ್‌ ಅವರ ಮೆಚ್ಚಿನ ಹವ್ಯಾಸಗಳಲ್ಲಿ ಒಂದು.

  ಆಗಾಗ್ಗೆ ಕಾಡಿಗೆ ಹೋಗಿ ತದೇಕಚಿತ್ತದಿಂದ ಕೂತು ವನ್ಯಜೀವಿಗಳ ಛಾಯಾಗ್ರಹಣ ಮಾಡುತ್ತಾರೆ ನಟ ದರ್ಶನ್. ಈಗ ಮತ್ತೆ ಕ್ಯಾಮೆರಾ ಬುಜಕ್ಕೆ ಏರಿಸಿ ನಾಗರಹೊಳೆ ಕಾಡಿಗೆ ಹೋಗಿದ್ದಾರೆ ದರ್ಶನ್.

  ನಾಗರಹೊಳೆ, ಕಬಿನಿ ಪ್ರದೇಶದಲ್ಲಿ ಸಫಾರಿ ಮಾಡಿ ವನ್ಯಜೀವಿಗಳ ಛಾಯಾಗ್ರಹಣ ಮಾಡಿದ್ದಾರೆ ನಟ ದರ್ಶನ್. ದರ್ಶನ್ ಅವರು ಕಬಿನಿಯಲ್ಲಿ ಸಫಾರಿ ಮಾಡಿದ ಚಿತ್ರಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

  ಮತ್ತೆ ಕ್ಯಾಮರಾ ಹಿಡಿದು ಕಾಡಿಗೆ ಹೊರಟ ದರ್ಶನ್; ಹುಲಿ ಸೆರೆಹಿಡಿಯುತ್ತಿರುವ ವಿಡಿಯೋ ವೈರಲ್ಮತ್ತೆ ಕ್ಯಾಮರಾ ಹಿಡಿದು ಕಾಡಿಗೆ ಹೊರಟ ದರ್ಶನ್; ಹುಲಿ ಸೆರೆಹಿಡಿಯುತ್ತಿರುವ ವಿಡಿಯೋ ವೈರಲ್

  ಅಭಿಮಾನಿಗಳೊಂದಿಗೆ ಚಿತ್ರಗಳು

  ಅಭಿಮಾನಿಗಳೊಂದಿಗೆ ಚಿತ್ರಗಳು

  ಅಲ್ಲಿಯೂ ಅಭಿಮಾನಿಗಳು ದರ್ಶನ್‌ ಅವರನ್ನು ಮುತ್ತಿಕೊಂಡಿದ್ದಾರೆ. ಹಲವಾರು ಮಂದಿ ಅಭಿಮಾನಿಗಳು ತಮ್ಮ ಮೆಚ್ಚಿನ ನಟನೊಂದಿಗೆ ಚಿತ್ರಗಳನ್ನು ತೆಗೆಸಿಕೊಂಡಿದ್ದಾರೆ. ದರ್ಶನ್ ಸಹ ಎಂದಿನಿಂತೆ ತಾಳ್ಮೆಯಿಂದ ಅಭಿಮಾನಿಗಳೊಟ್ಟಿಗೆ ಚಿತ್ರಗಳಿಗೆ ಫೋಸ್ ನೀಡಿದ್ದಾರೆ.

  ಹೊರ ರಾಜ್ಯದ ಕಾಡುಗಳಿಗೂ ಪ್ರವಾಸ

  ಹೊರ ರಾಜ್ಯದ ಕಾಡುಗಳಿಗೂ ಪ್ರವಾಸ

  ದರ್ಶನ್ ಅವರು ಕರ್ನಾಟಕದ ಕಾಡುಗಳು ಮಾತ್ರವೇ ಅಲ್ಲದೆ ಹೊರ ರಾಜ್ಯಗಳ ಕಾಡುಗಳಿಗೂ ಆಗಾಗ್ಗೆ ಪ್ರವಾಸ ಹೋಗಿ ವನ್ಯಜೀವಿ ಫೊಟೊಗ್ರಫಿ ಮಾಡುತ್ತಿರುತ್ತಾರೆ. ಲಾಕ್‌ಡೌನ್ ಗೆ ಮುನ್ನಾ ಉತ್ತರಕಾಂಡಕ್ಕೆ ದರ್ಶನ್ ಭೇಟಿ ನೀಡಿದ್ದರು.

  ಸುಕುಮಾರ್ ಜೊತೆ ಡಿ-ಬಾಸ್ ಸಿನಿಮಾ ಮಾಡ್ತಾರಾ? ಫ್ಯಾನ್ಸ್‌ಗೆ ನಿರೀಕ್ಷೆ ಹೆಚ್ಚಾಗ್ತಿದೆ!ಸುಕುಮಾರ್ ಜೊತೆ ಡಿ-ಬಾಸ್ ಸಿನಿಮಾ ಮಾಡ್ತಾರಾ? ಫ್ಯಾನ್ಸ್‌ಗೆ ನಿರೀಕ್ಷೆ ಹೆಚ್ಚಾಗ್ತಿದೆ!

  ಚಿತ್ರ ಮಾರಿದ ಹಣ ವನ್ಯಜೀವಿ ಸಂರಕ್ಷಣೆಗೆ ದೇಣಿಗೆ

  ಚಿತ್ರ ಮಾರಿದ ಹಣ ವನ್ಯಜೀವಿ ಸಂರಕ್ಷಣೆಗೆ ದೇಣಿಗೆ

  ತಾವು ತೆಗೆದ ವನ್ಯಜೀವಿಗಳ ಚಿತ್ರಗಳನ್ನು ಮಾರಿ ಬಂದ ಹಣವನ್ನು ವನ್ಯಜೀವಿಗಳ ಕ್ಷೇಮಾಭಿವೃದ್ಧಿ, ಅರಣ್ಯಾಭಿವೃದ್ಧಿಗೆ ದೇಣಿಗೆ ನೀಡುತ್ತಾರೆ ದರ್ಶನ್. ಹಲವು ನಟ-ನಟಿಯರು, ದರ್ಶನ್ ಅವರ ಸ್ನೇಹಿತರು ದರ್ಶನ್ ತೆಗೆದ ಚಿತ್ರಗಳನ್ನು ಕೊಂಡುಕೊಂಡಿದ್ದಾರೆ. ಆ ಮೂಲಕ ವನ್ಯಜೀವಿ ಒಳಿತಿಗೆ ಸಹಕಾರಿಯಾಗಿದ್ದಾರೆ.

  Recommended Video

  ತನ್ನವರನ್ನು ಕಿಚ್ಚ ಸುದೀಪ್ ನೋಡಿಕೊಳ್ಳೊ ರೀತಿ ಇದು | Filmibeat Kannada
  ಬೈಕ್ ರೈಡಿಂಗ್ ದರ್ಶನ್‌ ಹವ್ಯಾಸಗಳಲ್ಲಿ ಒಂದು

  ಬೈಕ್ ರೈಡಿಂಗ್ ದರ್ಶನ್‌ ಹವ್ಯಾಸಗಳಲ್ಲಿ ಒಂದು

  ಬೈಕ್‌ ರೈಡಿಂಗ್ ಸಹ ದರ್ಶನ್ ಅವರ ಮೆಚ್ಚಿನ ಹವ್ಯಾಸ. ಕೊರೊನಾ ಲಾಕ್‌ಡೌನ್ ಅಂತ್ಯವಾದ ಬಳಿಕ ಹಲವು ಬಾರಿ ದರ್ಶನ್ ತಮ್ಮ ದೊಡ್ಡ ಗೆಳೆಯರ ಗುಂಪಿನೊಂದಿಗೆ ಬೈಕ್‌ ರೈಡಿಂಗ್ ಹೋದರು. ಈ ವೇಳೆ ಹಲವು ಅಭಿಮಾನಿಗಳನ್ನು ದರ್ಶನ್ ಭೇಟಿ ಮಾಡಿದರು. ಕೆಲವು ಕಡೆಗೆ ಪ್ರವಾಸವನ್ನೂ ಮಾಡಿದರು ದರ್ಶನ್.

  English summary
  Actor Darshan visited Nagarahole forest and did Safari took photos of wild animals.
  Friday, January 15, 2021, 8:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X