For Quick Alerts
  ALLOW NOTIFICATIONS  
  For Daily Alerts

  30 ವರ್ಷದ ಹಿಂದೆ ಡಿ ಬಾಸ್ ಮಾಡಿದ ಡ್ರಾಮಾ ಇದು

  By Pavithra
  |

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಬಣ್ಣದ ನಂಟು ಇಂದಿನಿಂದಲ್ಲ, ಸಾಕಷ್ಟು ವರ್ಷಗಳಿಂದಲೇ ದರ್ಶನ್ ನಾಟಕಗಳಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದರು ಅನ್ನುವುದಕ್ಕೆ ಸಾಕ್ಷಿ ಸಿಕ್ಕಿದೆ.

  ಚಿತ್ರರಂಗದಲ್ಲಿ ಲೈಟ್ ಬಾಯ್ ಆಗಿ ಕೆಲಸ ಮಾಡಿ ನಂತರ ನೀನಾಸಂ ನಲ್ಲಿ ನಟನೆಯನ್ನ ಕಲಿಯುವುದಕ್ಕೂ ಮುನ್ನ ದರ್ಶನ್ ಅವರಿಗೆ ಕಲಾ ಸರಸ್ವತಿ ಒಲಿದಿದ್ದಳು. ದರ್ಶನ್ ಅವರಿಗೆ ಸುಮಾರು 9 ವರ್ಷ ಆಗಿದ್ದಾಗಿನಿಂದಲೇ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು.

  ಸದ್ಯ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್ ಸುಲ್ತಾನ್ ಆಗಿರುವ ಡಿ ಬಾಸ್ ಮೂವತ್ತು ವರ್ಷದ ಹಿಂದೆ ಅಭಿನಯಿಸುತ್ತಿದ್ದ ನಾಟಕದಲ್ಲೂ ರಾಜನೇ ಅನ್ನುವುದು ಅಭಿಮಾನಿಗಳಿಗೆ ಹೆಮ್ಮೆ ಪಡುವಂತಹ ವಿಚಾರ.

  ನಟ, ನಿರ್ದೇಶಕ , ರಂಗಕರ್ಮಿ ಮಂಡ್ಯ ರಮೇಶ್ ಮಾಡಿಸಿದ 'ರಾಬಿನ್ ಗುಡ್ಫೆಲೊ' ನಾಟಕದಲ್ಲಿ ದರ್ಶನ್ ರಾಜನಾಗಿ ಅಭಿನಯಿಸಿದ್ದರಂತೆ. ಆ ನಾಟಕದ ಸಮಯದಲ್ಲಿ ತೆಗೆದ ಫೋಟೋ ರಮೇಶ್ ಅವರಿಗೆ ಸಿಕ್ಕಿದ್ದು ಈ ಬಗ್ಗೆ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

  ವೆನ್ನಿಲ್ಲಾ ರುಚಿ ಸವಿಯಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್

  "ನಟನದ ಶಿಷ್ಯ ಮಿತ್ತ್ರೋತ್ತಮರು ಹತ್ತಾರು ಸಾವಿರ ಪುಸ್ತಕಗಳನ್ನು ಕ್ರಮವಾಗಿ ಜೋಡಿಸುವ ಕೈಂಕರ್ಯದಲ್ಲಿ ಕರಗಿಹೋಗಿದ್ದಾಗ ನಡುವಿನಲ್ಲಿ ಈ ಚಿತ್ರ ಸಿಕ್ಕಿತು!

  ಮೂವತ್ತೊಂದು ವರುಷದ ಹಿಂದೆ ಈ ನಾಟಕ ಮಾಡಿಸುವಾಗ, ಅವನು ಈ'ಎತ್ತರ'ಕ್ಕೆ ಏರಬಹುದು ಅಂತಾ ನಮಗಾರಿಗೂ ಅನಿಸಿರಲಿಲ್ಲ! ಸೃಷ್ಟಿ ಕೊಡಗುರಂಗದ 'ರಾಬಿನ್ ಗುಡ್ಫೆಲೊ' ನಾಟಕದ ರಾಜ ಅವನು!ಗುರುತಿಸಿ?" ಫೋಟೋ ಜೊತೆಗೆ ಈ ಸಾಲುಗಳನ್ನು ಬರೆದಿದ್ದಾರೆ ಮಂಡ್ಯ ರಮೇಶ್.

  ಒಂಬತ್ತು ವರ್ಷದ ಪ್ರಾಯದಲ್ಲೇ ಅಷ್ಟು ಎತ್ತರವಿದ್ದ ದರ್ಶನ್ ಇಂದು ಕನ್ನಡ ಸಿನಿಮಾರಂಗದಲ್ಲಿ ಎತ್ತರಕ್ಕೆ ಬೆಳೆದಿರುವುದು ಎಲ್ಲರಿಗೂ ಖುಷಿಯನ್ನ ನೀಡುವ ಸಂಗತಿ ಆಗಿದೆ.

  English summary
  Kannada Actor Darshan was in the role of Robin Goodfellow when he was nine years old. Darshan plays the king role in the play, actor Mandya Ramesh directed the drama.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X