For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಪತ್ನಿಯನ್ನ ನಿಂದಿಸಿದ ಅನಾಮಧೇಯ ವ್ಯಕ್ತಿ: ದೂರು ದಾಖಲು

  By Bharath Kumar
  |
  ದರ್ಶನ್ ಪತ್ನಿಗೆ ತಲೆನೋವು ತಂದಿಟ್ಟ ಕಿಡಿಗೇಡಿ..! | Filmibeat Kannada

  ಸಿನಿಮಾ ತಾರೆಯರು ಮತ್ತು ಸೆಲೆಬ್ರಿಟಿಗಳ ಬಗ್ಗೆ ಕೆಟ್ಟದಾಗಿ ಫೋಸ್ಟ್ ಮಾಡುವುದು, ಕಾಮೆಂಟ್ ಮಾಡುವುದು, ಫೋಟೋ ಎಡಿಟ್ ಮಾಡುವುದು ಕೆಲವು ವ್ಯಕ್ತಿಗಳಿಗೆ ವೃತ್ತಿಯಾಗಿದೆ.

  ಈಗ ಅಂತಹದ್ದೇ ಸಮಸ್ಯೆಗೆ ಎದುರಾಗಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ. ಫೇಸ್ ಬುಕ್ ನಲ್ಲಿ ವ್ಯಕ್ತಿಯೊಬ್ಬ ವಿಜಯಲಕ್ಷ್ಮಿ ಅವರ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವ ಮೂಲಕ ಅವರನ್ನ ನಿಂದಿಸಿದ್ದಾನೆ, ಅವರ ಗೌರವಕ್ಕೆ ಧಕ್ಕೆ ತರುವಂತೆ ಕೆಲವು ಫೋಟೋಗಳನ್ನ ಎಡಿಟ್ ಮಾಡಿದ್ದಾನಂತೆ.

  ದರ್ಶನ್ ಪತ್ನಿ ವಿಜಯಲಕ್ಷ್ಮಿ ಆಡಿರುವ ಮಾತು ಸರಿಯಾಗಿದೆ: ನಿಮ್ಗೇನು ಅನ್ಸುತ್ತೆ.? ದರ್ಶನ್ ಪತ್ನಿ ವಿಜಯಲಕ್ಷ್ಮಿ ಆಡಿರುವ ಮಾತು ಸರಿಯಾಗಿದೆ: ನಿಮ್ಗೇನು ಅನ್ಸುತ್ತೆ.?

  ಈ ಕುರಿತು ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಆ ವ್ಯಕ್ತಿಯನ್ನ ಪತ್ತೆ ಹಚ್ಚುವ ಕೆಲಸಕ್ಕೆ ಮುಂದಾಗಿದ್ದಾರೆ. ಅಷ್ಟಕ್ಕೂ, ಆ ವ್ಯಕ್ತಿ ವಿಜಯಲಕ್ಷ್ಮಿ ಅವರನ್ನ ಟಾರ್ಗೆಟ್ ಮಾಡಿದ್ದೇಕೆ.? ಮುಂದೆ ಓದಿ....

  ನಕಲಿ ಖಾತೆ ಬಳಸಿ ಅಪಪ್ರಚಾರ

  ನಕಲಿ ಖಾತೆ ಬಳಸಿ ಅಪಪ್ರಚಾರ

  ವಿಜಯಲಕ್ಷ್ಮಿ ಅವರ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆಯನ್ನ ತೆರೆದು, ಅವರ ಬಗ್ಗೆ ಅಪ ಪ್ರಚಾರ ಮಾಡುತ್ತಿದ್ದಾನಂತೆ. ವಿಜಯಲಕ್ಷ್ಮಿ ಅವರಿಗೆ ಟ್ಯಾಗ್ ಮಾಡುವ ಮೂಲಕ ಅಶ್ಲೀಲ ಕಾಮೆಂಟ್ ಮತ್ತು ಪೋಸ್ಟ್ ಮಾಡುತ್ತಿದ್ದನಂತೆ. ಇದರಿಂದ ಬೇಸರಗೊಂಡ ವಿಜಯಲಕ್ಷ್ಮಿ ಅವರು ಸೈಬರ್ ಪೊಲೀಸರ ಮೊರೆ ಹೋಗಿದ್ದಾರೆ.

  'ಡಿ-ಬಾಸ್' ದರ್ಶನ್ ದಂಪತಿಗಿಂದು ಖುಷಿಯ ವಿಚಾರ'ಡಿ-ಬಾಸ್' ದರ್ಶನ್ ದಂಪತಿಗಿಂದು ಖುಷಿಯ ವಿಚಾರ

  ಫೋಟೋ ದುರ್ಬಳಕೆ

  ಫೋಟೋ ದುರ್ಬಳಕೆ

  ಕೇವಲ ಪೋಸ್ಟ್ ಮತ್ತು ಕಾಮೆಂಟ್ ಮಾತ್ರವಲ್ಲ, ವಿಜಯಲಕ್ಷ್ಮಿ ಅವರ ಜೊತೆ ದರ್ಶನ್ ಇರುವ ಫೋಟೋ ಬಳಸಿ, ದರ್ಶನ್ ಬದಲಿಗೆ ತನ್ನ ಫೋಟೋವನ್ನ ಸೇರಿಸಿ 'ಮೈ ವೈಫ್' ಎಂದು ಫೋಸ್ಟ್ ಮಾಡಿ ವಿಜಯಲಕ್ಷ್ಮಿ ಅವರ ಗೌರವಕ್ಕೆ ಧಕ್ಕೆ ತಂದಿದ್ದಾನೆ.

  'ಲಂಡನ್'ನಲ್ಲಿ ದರ್ಶನ್ ಗೆ ಸನ್ಮಾನ: ಶುಭಕೋರಿದ ಪತ್ನಿ ವಿಜಯಲಕ್ಷ್ಮಿ'ಲಂಡನ್'ನಲ್ಲಿ ದರ್ಶನ್ ಗೆ ಸನ್ಮಾನ: ಶುಭಕೋರಿದ ಪತ್ನಿ ವಿಜಯಲಕ್ಷ್ಮಿ

  ಪೊಲೀಸರು ಬಲೆ ಬೀಸಿದ್ದಾರೆ

  ಪೊಲೀಸರು ಬಲೆ ಬೀಸಿದ್ದಾರೆ

  ಖುದ್ದು ವಿಜಯಲಕ್ಷ್ಮಿ ಅವರೇ ಈ ಬಗ್ಗೆ ದೂರು ನೀಡಿರುವುದರಿಂದ ಸೈಬರ್ ಪೊಲೀಸರು ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದಾರೆ. ಈಗಾಗಲೇ ಆ ನಕಲಿ ಖಾತೆಯನ್ನ ಡಿಲೀಟ್ ಮಾಡಿ, ಅದರ ಕತೃ ಯಾರೆಂದು ಹುಡುಕುತ್ತಿದ್ದಾರೆ. ಈ ಸಂಬಂಧ ಎಫ್.ಐ.ಆರ್ ಕೂಡ ದಾಖಲಾಗಿದ್ದು, ಐಪಿಸಿ ಸೆಕ್ಷನ್ 354(D),354A (1)( iv), (505) (507) (420)ಅಡಿಯಲ್ಲಿ ಕೇಸ್ ದಾಖಲಾಗಿದೆ.

  'ಒಂದಲ್ಲಾ ಎರಡಲ್ಲಾ'ಗೆ ಸಿಕ್ಕಿತು ಆನೆ ಬಲ : ಒಳ್ಳೆ ಸಿನಿಮಾದ ಪರ ನಿಂತ ದಾಸ'ಒಂದಲ್ಲಾ ಎರಡಲ್ಲಾ'ಗೆ ಸಿಕ್ಕಿತು ಆನೆ ಬಲ : ಒಳ್ಳೆ ಸಿನಿಮಾದ ಪರ ನಿಂತ ದಾಸ

  ಸಾಮಾಜಿಕ ಜಾಲತಾಣ ದುರ್ಬಳಕೆ

  ಸಾಮಾಜಿಕ ಜಾಲತಾಣ ದುರ್ಬಳಕೆ

  ಈ ರೀತಿಯ ಕೃತ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಮಾನ್ಯವಾಗಿಬಿಟ್ಟಿದೆ. ಅರದಲ್ಲೂ, ಸೆಲೆಬ್ರಿಟಿಗಳ ಜೀವನದ ಬಗ್ಗೆ ಒಂದಲ್ಲ ಒಂದು ಬಗೆಯಲ್ಲಿ ಅವಮಾನಿಸುವುದು ಒಂದು ಮಾನಸಿಕ ಕಾಯಿಲೆಯಾಗಿದೆ. ಈಗ ದರ್ಶನ್ ಪತ್ನಿ ವಿಜಯಲಕ್ಷ್ಮಿ ಈ ಸಮಸ್ಯೆಗೆ ಗುರಿಯಾಗಿದ್ದಾರೆ ಅಷ್ಟೇ.

  ದರ್ಶನ್ ಅವ್ರದ್ದು ಲಕ್ಕಿ ಹ್ಯಾಂಡ್ ಎಂಬುದು ಮತ್ತೆ ನಿಜ ಆಯ್ತುದರ್ಶನ್ ಅವ್ರದ್ದು ಲಕ್ಕಿ ಹ್ಯಾಂಡ್ ಎಂಬುದು ಮತ್ತೆ ನಿಜ ಆಯ್ತು

  English summary
  Challenging star darshan wife vijayalakshmi has register complaint against fake account.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X