»   » ದರ್ಶನ್ 'ಮುನಿಸು' ಅಂತೆ-ಕಂತೆ ಅಷ್ಟೆ... ಕಿವಿಗೆ ಹಾಕಿಕೊಳ್ಳಬೇಡಿ

ದರ್ಶನ್ 'ಮುನಿಸು' ಅಂತೆ-ಕಂತೆ ಅಷ್ಟೆ... ಕಿವಿಗೆ ಹಾಕಿಕೊಳ್ಳಬೇಡಿ

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯಿಸಲು ಒಪ್ಪಿಕೊಂಡಿರುವ 50ನೇ ಸಿನಿಮಾ 'ಕುರುಕ್ಷೇತ್ರ' ಸೆಟ್ಟೇರುವ ಮುನ್ನವೇ ಗಲ್ಲಿ ಗಾಸಿಪ್ ಪಂಡಿತರ ಬಾಯಿಗೆ ಆಹಾರವಾಗಿದೆ.

''ಕುರುಕ್ಷೇತ್ರ' ಚಿತ್ರತಂಡ ಮೇಲೆ ಮುನಿಸಿಕೊಂಡಿರುವ ದರ್ಶನ್, ಸಿನಿಮಾದಿಂದ ಹೊರಬಂದಿದ್ದಾರೆ'' ಎಂಬ ಗುಲ್ಲು ಕಳೆದ ಎರಡ್ಮೂರು ದಿನಗಳಿಂದ ಗಾಂಧಿನಗರದ ಮೂಲೆ ಮೂಲೆಯಲ್ಲೂ ಕೇಳಿಬರುತ್ತಿದೆ.

'ಕುರುಕ್ಷೇತ್ರ'ದ ಬಗ್ಗೆ ಬೇಸರಗೊಂಡಿದ್ದಾರಾ ನಟ ದರ್ಶನ್.?

ಹಾಗಾದ್ರೆ, 'ಕುರುಕ್ಷೇತ್ರ' ಚಿತ್ರವನ್ನ ದರ್ಶನ್ ಕೈಬಿಟ್ಟಿದ್ದಾರಾ.? ಎಂಬ ಅನುಮಾನಕ್ಕೆ ಸಹೋದರ ದಿನಕರ್ ತೂಗುದೀಪ ಉತ್ತರ ನೀಡಿದ್ದಾರೆ. ಮುಂದೆ ಓದಿರಿ...

ಇದೆಲ್ಲ ಸುಳ್ಳು

''ಕುರುಕ್ಷೇತ್ರ ಚಿತ್ರವನ್ನ ದರ್ಶನ್ ಕೈಬಿಟ್ಟಿಲ್ಲ. ಅಂತಹ ಅವಕಾಶವನ್ನು ದರ್ಶನ್ ಬಿಡೋದಿಲ್ಲ'' ಎಂದು 'ಚಿತ್ರಲೋಕ.ಕಾಮ್'ಗೆ ದಿನಕರ್ ತೂಗುದೀಪ ಸ್ಪಷ್ಟಪಡಿಸಿದ್ದಾರೆ.

'ಕುರುಕ್ಷೇತ್ರ'ದಲ್ಲಿ ದರ್ಶನ್ ಸಂಭಾವನೆ ಕೇಳಿ ಬೆಚ್ಚಿಬಿದ್ದ ಗಾಂಧಿನಗರ.!

ಅಪರೂಪದ ಅವಕಾಶ

''ದುರ್ಯೋಧನ ಪಾತ್ರಕ್ಕಾಗಿ ದರ್ಶನ್, ತೂಕ ಹೆಚ್ಚಿಸಿಕೊಳ್ಳುತ್ತಿದ್ದಾರೆ. ಒಬ್ಬ ನಟನ ಜೀವನದಲ್ಲಿ ಸಿಗುವ ಅಪರೂಪದ ಅವಕಾಶ ಇದು'' ಎನ್ನುತ್ತಾರೆ ದಿನಕರ್ ತೂಗುದೀಪ

'ಕುರುಕ್ಷೇತ್ರ'ಕ್ಕೆ ಕರ್ಣ ಫಿಕ್ಸ್: ಇದು ದರ್ಶನ್ ಬಳಗಕ್ಕೆ ಶಾಕ್ ಆದ್ರು ಖುಷಿ ವಿಚಾರವೇ.!

ಇದೇ ತಿಂಗಳು ಸಿನಿಮಾ ಸೆಟ್ಟೇರಲಿದೆ

'ಕುರುಕ್ಷೇತ್ರ' ಸಿನಿಮಾ ಇದೇ ತಿಂಗಳು ಸೆಟ್ಟೇರಲಿದೆ. ಮುನಿರತ್ನ ರವರ ಹುಟ್ಟುಹಬ್ಬದಂದು 'ಕುರುಕ್ಷೇತ್ರ' ಸಿನಿಮಾದ ಮುಹೂರ್ತ ನೆರವೇರಲಿದೆ. ಹೈದರಾಬಾದ್ ನಲ್ಲಿ ಇರುವ ರಾಮೋಜಿ ಫಿಲ್ಮ್ ಸಿಟಿಯಲ್ಲಿ 'ಕುರುಕ್ಷೇತ್ರ' ಚಿತ್ರದ ಶೂಟಿಂಗ್ ನಡೆಯಲಿದೆ.

'ಕುರುಕ್ಷೇತ್ರ'ದ ಪಾತ್ರಧಾರಿಗಳು...

'ಕುರುಕ್ಷೇತ್ರ' ಸಿನಿಮಾದಲ್ಲಿ ರವಿಚಂದ್ರನ್ 'ಶ್ರೀಕೃಷ್ಣ'ನ ಪಾತ್ರ ನಿರ್ವಹಿಸಲಿದ್ದಾರೆ. ದ್ರೋಣಾಚಾರ್ಯ ಆಗಿ ಶ್ರೀನಿವಾಸ ಮೂರ್ತಿ ಬಣ್ಣಹಚ್ಚಲಿದ್ರೆ, ಧೃತರಾಷ್ಟ್ರನಾಗಿ ಶ್ರೀನಾಥ್ ಅಭಿನಯಿಸಲಿದ್ದಾರೆ. ಉಳಿದ ಪಾತ್ರಗಳಿಗೆ ಆಯ್ಕೆ ನಡೆಯಬೇಕಿದೆ.

ಯಾರು ಏನೇ ಹೇಳಿದ್ರೂ, ಕುರುಕ್ಷೇತ್ರದಲ್ಲಿ 'ನಾನೇ' ಕೃಷ್ಣ.!

English summary
Challenging Star Darshan will act in 'Kurukshetra' says Dinakar Toogudeepa

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X