twitter
    For Quick Alerts
    ALLOW NOTIFICATIONS  
    For Daily Alerts

    ಮುಂದಿನ 5 ದಿನ ದರ್ಶನ್ ಪ್ರಚಾರ ಮಾಡಲ್ಲ, ದಿಢೀರ್ ಈ ನಿರ್ಧಾರಕ್ಕೆ ಕಾರಣವೇನು?

    |

    Recommended Video

    ದರ್ಶನ್ ಮುಂದಿನ ಐದು ದಿನಗಳು ಪ್ರಚಾರ ಮಾಡುವುದಿಲ್ಲ | Lok Sabha Elections 2019

    ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡುತ್ತಿರುವ ನಟ ದರ್ಶನ್, ಸತತವಾಗಿ ನಾಲ್ಕು ದಿನ ಮಂಡ್ಯ ಸುತ್ತಮುತ್ತ ಪ್ರದೇಶದಲ್ಲಿ ಮತಯಾಚನೆ ಮಾಡಿದ್ದಾರೆ. ಶ್ರೀರಂಗಪಟ್ಟಣ, ಮಂಡ್ಯ, ಕೆಆರ್ ಪೇಟೆ, ನಾಗಮಂಗಲದ ಬಹುತೇಕ ಹಳ್ಳಿಗಳಲ್ಲಿ ಸಂಚರಿಸಿ ಸುಮಮ್ಮನ ಪರ ಮತ ಕೇಳಿದ್ದಾರೆ.

    ಒಟ್ಟು ಹನ್ನೊಂದು ದಿನ ಪ್ರಚಾರ ಮಾಡಬೇಕಿದ್ದ ಚಾಲೆಂಜಿಂಗ್ ಸ್ಟಾರ್ ಈಗ ಐದು ದಿನಗಳ ಕಾಲ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ. ಅದೂ ಅಲ್ಲದೇ ನಿನ್ನೆ ನಡೆದ ಪ್ರಚಾರದಲ್ಲಿ ದರ್ಶನ್ ಕಾರಿನ ಮೇಲೆ ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ಮಾಡಿದ್ದಾರೆ ಎನ್ನಲಾಗಿದೆ.

    ಪ್ರಚಾರದಲ್ಲಿ ದರ್ಶನ್ ಗೆ ಹಾಡೇಳುವಂತೆ ವೃದ್ದೆ ಮನವಿ: ಡಿ ಬಾಸ್ ಏನಂದ್ರು? ಪ್ರಚಾರದಲ್ಲಿ ದರ್ಶನ್ ಗೆ ಹಾಡೇಳುವಂತೆ ವೃದ್ದೆ ಮನವಿ: ಡಿ ಬಾಸ್ ಏನಂದ್ರು?

    ಈ ಹಿಂದೆ ಅಪಘಾತದಲ್ಲಿ ದರ್ಶನ್ ಬಲಗೈಗೆ ಪೆಟ್ಟಾಗಿತ್ತು. ಈಗ ಸತತ ನಾಲ್ಕು ದಿನ ಬಿರುಸಿನ ಪ್ರಚಾರ ಮಾಡಿದ ಹಿನ್ನೆಲೆ ಮತ್ತೆ ಆ ಕೈಗೆ ನೋವುಂಟಾಗಿದೆ ಎನ್ನಲಾಗಿದೆ. ಇದೆಲ್ಲ ಬೆಳವಣಿಗೆ ಮಧ್ಯೆ ಐದು ದಿನ ಪ್ರಚಾರಕ್ಕೆ ಬ್ರೇಕ್ ಹಾಕಿರುವುದು ಕುತೂಹಲ ಮೂಡಿಸಿದೆ. ಹಾಗಿದ್ರೆ, ದರ್ಶನ್ ವಿಶ್ರಾಂತಿಗೆ ನಿಜವಾದ ಕಾರಣವೇನು? ಮುಂದೆ ಓದಿ......

    ಕಲ್ಲು ತೂರಾಟದಲ್ಲಿ ಯಾವುದೇ ಗಾಯವಾಗಿಲ್ಲ

    ಕಲ್ಲು ತೂರಾಟದಲ್ಲಿ ಯಾವುದೇ ಗಾಯವಾಗಿಲ್ಲ

    ನಿನ್ನೆ ಮಂಡ್ಯದ ಮಿನಿ ವಿಧಾನಸೌದದ ಬಳಿ ದರ್ಶನ್ ಪ್ರಚಾರ ಮಾಡುತ್ತಿದ್ದ ವಾಹನದ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಘಟನೆಯಿಂದ ನಟ ದರ್ಶನ್ ಗೆ ಯಾವುದೇ ಗಾಯವಾಗಿಲ್ಲ. ಎಂದಿನಂತೆ ಪ್ರಚಾರ ಮುಗಿಸಿ ತಾವು ತಂಗಿದ್ದ ಹೋಟೆಲ್ ಗೆ ತೆರೆಳಿದ್ದಾರಂತೆ.

    ಮೊನ್ನೆ ದರ್ಶನ್ ಗೆ ಆಗಿದ್ದೇ ಈಗ ಯಶ್ ಗೂ ಆಯ್ತು.! ಮೊನ್ನೆ ದರ್ಶನ್ ಗೆ ಆಗಿದ್ದೇ ಈಗ ಯಶ್ ಗೂ ಆಯ್ತು.!

    ಆಸ್ಪತ್ರೆಗೆ ದಾಖಲಾಗಿಲ್ಲ

    ಆಸ್ಪತ್ರೆಗೆ ದಾಖಲಾಗಿಲ್ಲ

    ಇನ್ನು ಬಲಗೈಗೆ ಮತ್ತೆ ನೋವು ಕಾಣಿಸಿಕೊಂಡ ಹಿನ್ನೆಲೆ ನಟ ದರ್ಶನ್ ಆಸ್ಪತ್ರೆಗೆ ತೆರೆಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ, ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡಿದೆ. ಆದ್ರೆ, ದರ್ಶನ್ ಗೆ ಯಾವುದೇ ಗಾಯ ಮತ್ತು ನೋವು ಕಾಣಿಸಿಲ್ಲ, ಆರಾಮಾಗಿದ್ದಾರೆ. ಅವರು ಆಸ್ಪತ್ರಗೆ ಕೂಡ ದಾಖಲಾಗಿಲ್ಲ ಎಂದು ಆಪ್ತರು, ಅಭಿಮಾನಿಗಳು ಸ್ಪಷ್ಟಪಡಿಸಿದ್ದಾರೆ.

    'ನಾವು ಬಿಸಿಲಿನಲ್ಲಿ ಆಡಿ ಬಂದವರು' ಸಿಎಂ ಹೇಳಿಕೆಗೆ ರಾಕಿ ಭಾಯ್ ಪಂಚ್ 'ನಾವು ಬಿಸಿಲಿನಲ್ಲಿ ಆಡಿ ಬಂದವರು' ಸಿಎಂ ಹೇಳಿಕೆಗೆ ರಾಕಿ ಭಾಯ್ ಪಂಚ್

    ಹಾಗಿದ್ರೆ, ಐದು ದಿನ ವಿಶ್ರಾಂತಿ ಯಾಕೆ?

    ಹಾಗಿದ್ರೆ, ಐದು ದಿನ ವಿಶ್ರಾಂತಿ ಯಾಕೆ?

    ನಾಲ್ಕು ದಿನ ಪ್ರಚಾರ ಮಾಡಿದ ದರ್ಶನ್ ಮುಂದಿನ ಐದು ದಿನ ವಿಶ್ರಾಂತಿ ಪಡೆದುಕೊಂಡಿದ್ದಾರೆ. ಇದು ಪೂರ್ವನಿಯೋಜಿತ ಕಾರಣ. ಈ ಮೊದಲೇ ಶೆಡ್ಯೂಲ್ ಹಾಕಿದಾಗಲೇ ದರ್ಶನ್ ಗೆ ಈ ಐದು ದಿನ ವಿಶ್ರಾಂತಿ ನೀಡಲಾಗಿತ್ತು. ಈ ಬಗ್ಗೆ ವೇಳಾಪಟ್ಟಿಯಲ್ಲೂ ಮಾಹಿತಿ ನೀಡಲಾಗಿತ್ತು. ಡಿ ಬಾಸ್ ಅವರ ಈ ವಿಶ್ರಾಂತಿಗೂ ನಿನ್ನೆ ನಡೆದ ಬೆಳವಣಿಗೆಗೂ ಯಾವುದೇ ಸಂಬಂಧವಿಲ್ಲ.

    ಜೋಡೆತ್ತುಗಳ ಉಳಿದ 14 ದಿನ ಪ್ರಚಾರದ ಸಂಪೂರ್ಣ ವೇಳಾಪಟ್ಟಿ

    ಎರಡು ದಿನ ಯುಗಾದಿ ರಜೆ

    ಎರಡು ದಿನ ಯುಗಾದಿ ರಜೆ

    ಸುಮಲತಾ ಪರ ಹನ್ನೊಂದು ದಿನ ದರ್ಶನ್ ಪ್ರಚಾರ ಮಾಡಲಿದ್ದಾರೆ. ಯುಗಾದಿ ಹಬ್ಬದ ಪ್ರಯುಕ್ತ ಶನಿವಾರ ಮತ್ತು ಭಾನುವಾರ ಎರಡು ದಿನ ದರ್ಶನ್ ಪ್ರಚಾರಕ್ಕೆ ಬ್ರೇಕ್ ಹಾಕಿದ್ದಾರೆ. ಅದರ ಜೊತೆಗೆ ಇಂದು (ಶುಕ್ರವಾರ) ಸೋಮವಾರ, ಮಂಗಳವಾರ ಬೇರೆಯದ್ದೇ ಕಾರಣದಿಂದ ಪ್ರಚಾರ ಮಾಡುತ್ತಿಲ್ಲ. ಇದನ್ನೂ ಕೂಡ ವೇಳಾಪಟ್ಟಿಯಲ್ಲಿ ತಿಳಿಸಿದ್ದಾರೆ.

    ಮಂಡ್ಯ ಪ್ರಚಾರದಲ್ಲಿ ಈ ನಾಲ್ಕು ಹೆಸರನ್ನ ಪದೇ ಪದೇ ನೆನಪಿಸುತ್ತಿರುವ ದರ್ಶನ್ಮಂಡ್ಯ ಪ್ರಚಾರದಲ್ಲಿ ಈ ನಾಲ್ಕು ಹೆಸರನ್ನ ಪದೇ ಪದೇ ನೆನಪಿಸುತ್ತಿರುವ ದರ್ಶನ್

    ಯಶ್ ಪ್ರಚಾರ ಮುಂದುವರಿಸಿದ್ದಾರೆ

    ಯಶ್ ಪ್ರಚಾರ ಮುಂದುವರಿಸಿದ್ದಾರೆ

    ಜೋಡೆತ್ತುಗಳಲ್ಲಿ ದರ್ಶನ್ ವಿಶ್ರಾಂತಿ ಪಡೆದುಕೊಂಡಿದ್ದರೇ, ಮತ್ತೊಂದೆಡೆ ನಟ ಯಶ್ ಇಂದು ಒಬ್ಬರೇ ಪ್ರಚಾರ ಮುಂದುವರಿಸಲಿದ್ದಾರೆ. ಯುಗಾದಿ ಹಬ್ಬದ ಪ್ರಯುಕ್ತ ಶನಿವಾರ ಮತ್ತು ಭಾನುವಾರ ಯಶ್ ಕೂಡ ವಿಶ್ರಾಂತಿ ಪಡೆಯಲಿದ್ದು, ಸೋಮವಾರ ಮತ್ತೆ ಮತಯಾಚನೆ ಆರಂಭಿಸಲಿದ್ದಾರೆ. ಇದು ಪೂರ್ವನಿಯೋಜಿತ ವಿಶ್ರಾಂತಿಯಾಗಿದ್ದು, ವೇಳಾಪಟ್ಟಿಯಲ್ಲಿ ಮೊದಲೇ ಪ್ರಕಟಿಸಲಾಗಿತ್ತು.

    English summary
    Kannada actor Darshan will not campaigning for next five days in mandya. because, he taking rest for ugadi festival. darshan campaigning for sumalatha.
    Friday, April 5, 2019, 10:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X