For Quick Alerts
  ALLOW NOTIFICATIONS  
  For Daily Alerts

  ಅಂಬರೀಶ್ ಮಗನ ಚಿತ್ರಕ್ಕೆ ವಿಶ್ ಮಾಡಿದ ದರ್ಶನ್

  By Bharath Kumar
  |

  ರೆಬಲ್ ಸ್ಟಾರ್ ಅಂಬರೀಶ್ ಅವರ ಮಗನ ಚೊಚ್ಚಲ ಸಿನಿಮಾ 'ಅಮರ್' ಅದ್ಧೂರಿಯಾಗಿ ಸೆಟ್ಟೇರಿದೆ. ಬಹಳ ವಿಶೇಷತೆಗಳಿಂದ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಶುಭಕೋರಿದ್ದಾರೆ.

  ಮುಹೂರ್ತ ಸಮಾರಂಭದಲ್ಲಿ ಬಹುಶಃ ದರ್ಶನ್ ಅವರ ಕಾಣಿಸಿಕೊಳ್ಳಬಹುದು ಎಂಬ ನಿರೀಕ್ಷೆ ಇತ್ತು. ಆದ್ರೆ, 'ಯಜಮಾನ' ಶೂಟಿಂಗ್ ನಲ್ಲಿ ದರ್ಶನ್ ಬ್ಯುಸಿ ಇದ್ದಾರೆ. ಹೀಗಿದ್ದರೂ, ಅಭಿಷೇಕ್ ಗೆ ಮತ್ತು ಚಿತ್ರತಂಡಕ್ಕೆ ಟ್ವಿಟ್ಟರ್ ಮೂಲಕ ವಿಶ್ ಮಾಡಿದ್ದಾರೆ.

  ''ನಮ್ಮೆಲ್ಲರ ಪ್ರೀತಿಯ ಅಂಬಿ ಅಪ್ಪಾಜಿ ರವರ ಪುತ್ರ ಅಭಿ ಇಂದು 'ಅಮರ್' ಚಿತ್ರದ ಮುಹೂರ್ತದ ಮೂಲಕ ಅಧಿಕೃತವಾಗಿ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾನೆ. ನಿಮ್ಮ ಪ್ರೀತಿ-ಪ್ರೋತ್ಸಾಹ ಈ ಹುಡುಗನ ಮೇಲಿರಲಿ. ಚಿತ್ರವು ಭರ್ಜರಿ ಯಶಸ್ಸು ಗಳಿಸಲೆಂದು ತುಂಬು ಹೃದಯದಿಂದ ಹಾರೈಸುತ್ತೇನೆ'' ಎಂದು ಟ್ವೀಟ್ ಮಾಡಿದ್ದಾರೆ.

  ಅಂಬಿ ಪುತ್ರನ ಚಿತ್ರಕ್ಕಾಗಿ ಬರ್ತಾರೆ ಭಾರತದ ಸೂಪರ್ ಸ್ಟಾರ್ಸ್.!ಅಂಬಿ ಪುತ್ರನ ಚಿತ್ರಕ್ಕಾಗಿ ಬರ್ತಾರೆ ಭಾರತದ ಸೂಪರ್ ಸ್ಟಾರ್ಸ್.!

  ಅಂದ್ಹಾಗೆ, ಅಭಿಷೇಕ್ ಅವರ 'ಅಮರ್' ಸಿನಿಮಾ ದರ್ಶನ್ ಗೂ ತುಂಬಾ ಹತ್ತಿರದ ನಂಟು. ಯಾಕಂದ್ರೆ, ಇದು ಅಂಬರೀಶ್ ಅವರ ಮಗನ ಸಿನಿಮಾ. ಅಂಬರೀಶ್ ಅಂದ್ರೆ ದರ್ಶನ್ ಗೆ ದೊಡ್ಡ ಅಭಿಮಾನ. ಮತ್ತೊಂದೆಡೆ ಈ ಚಿತ್ರ ನಿರ್ಮಾಣ ಮಾಡುತ್ತಿರುವುದು ಸಂದೇಶ ನಾಗರಾಜ್. ಇವರು ಕೂಡ ಡಿ ಬಾಸ್ ಗೆ ತುಂಬ ಆತ್ಮೀಯರು. ಹೀಗಾಗಿ, 'ಅಮರ್' ಚಿತ್ರದ ಮೇಲೆ ದರ್ಶನ್ ಅವರಿಗೂ ಕಾಳಜಿ ಹೆಚ್ಚಿದೆ ಅಂದ್ರೆ ತಪ್ಪಾಗಲಾರದು.

  ಸಂದರ್ಶನ : ಜನರ ನಿರೀಕ್ಷೆ ಈಡೇರಿಸಲಿಲ್ಲ ಅಂದ್ರೆ ನಾವು ಮಾಡೋದೆ ವೇಸ್ಟ್ಸಂದರ್ಶನ : ಜನರ ನಿರೀಕ್ಷೆ ಈಡೇರಿಸಲಿಲ್ಲ ಅಂದ್ರೆ ನಾವು ಮಾಡೋದೆ ವೇಸ್ಟ್

  ಇನ್ನು 'ಅಮರ್' ಚಿತ್ರದಲ್ಲಿ ದರ್ಶನ್ ಏನಾದರೂ ಅಭಿನಯಿಸಬಹುದಾ ಎಂಬ ಕುತೂಹಲವನ್ನ ತಳ್ಳಿಹಾಕುವಂತಿಲ್ಲ. ಯಾಕಂದ್ರೆ, ಈಗಾಗಲೇ ನಿರ್ದೇಶಕ ನಾಗಶೇಖರ್, ಚಿತ್ರದ ಒಂದು ಹಾಡಿಗೆ ಭಾರತೀಯ ಸೂಪರ್ ಸ್ಟಾರ್ ಗಳನ್ನ ಕರೆತರುವ ಯೋಚನೆಯಲ್ಲಿದ್ದಾರೆ. ಅಂತಹದ್ರಲ್ಲಿ, ಸ್ಯಾಂಡಲ್ ವುಡ್ ನಟರನ್ನ ಬಿಡ್ತಾರಾ ಎಂಬ ಅನುಮಾನ. ಅಷ್ಟೇ ಅಲ್ಲದೆ, ಅಂಬರೀಶ್ ಅವರು ಒಂದುಸ ಮಾತು ಹೇಳಿದ್ರೆ, ಖಂಡಿತಾ ಇಲ್ಲ ಎನ್ನಲ್ಲ ದಾಸ.

  English summary
  Kannada Actor, Challenging star darshan has taken his twitter account to wish Abhishek ambarish's Debut movie Amar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X