For Quick Alerts
  ALLOW NOTIFICATIONS  
  For Daily Alerts

  ಅಣ್ಣಾವ್ರು ಕನ್ನಡಿಗರ ಮನದಲ್ಲಿ ಎಂದಿಗೂ ಅಜರಾಮರ ಎಂದು ಸ್ಮರಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

  |

  ಇಂದು ವರನಟ ಡಾ. ರಾಜ್ ಕುಮಾರ್ ಪುಣ್ಯತಿಥಿ. ಅವರನ್ನು ಕಳೆದುಕೊಂಡ ಕನ್ನಡ ಚಿತ್ರರಂಗ, ಇಂದು ಅವರನ್ನು ಸ್ಮರಿಸುತ್ತಿದೆ. ಅನೇಕ ನಟರು, ನಿರ್ದೇಶಕರು, ರಾಜಕಾರಣಿಗಳು, ರಾಜ್ ಕುಮಾರ್ ಅಭಿಮಾನಿಗಳು ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ. ಈ ಸಮಯದಲ್ಲಿ ಅವರು ನಮ್ಮೊಂದಿಗೆ ಇರಬೇಕಿತ್ತು ಎಂಬ ನೋವನ್ನು ಹಂಚಿಕೊಳ್ಳುತ್ತಿದ್ದಾರೆ. ಅವರು ಕನ್ನಡ ನಾಡು, ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಕೊಂಡಾಡುತ್ತಿದ್ದಾರೆ.

  ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯ ದಿನದಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಅವರನ್ನು ಸ್ಮರಿಸಿಕೊಂಡಿದ್ದಾರೆ. ರಾಜ್ ಕುಮಾರ್ ಅವರು ಎಂದೆಂದಿಗೂ ನಮ್ಮೆಲ್ಲರ ಮನದಲ್ಲಿ ಚಿರಸ್ಮರಣೀಯರಾಗಿ ಉಳಿದಿರುತ್ತಾರೆ ಎಂದು ದರ್ಶನ್ ಹೇಳಿದ್ದಾರೆ. ದರ್ಶನ್ ಅವರು ಅಣ್ಣಾವ್ರ ಬಗ್ಗೆ ಹೇಳಿರುವ ಮಾತುಗಳೇನು? ಅವರನ್ನು ಪುಣ್ಯತಿಥಿಯಲ್ಲಿ ಯಾವ ರೀತಿ ಸ್ಮರಿಸಿದ್ದಾರೆ? ಮುಂದೆ ಓದಿ.

  ಕಸ್ತೂರಿ ಕನ್ನಡ ಕೇಳೋದೇ ಒಂದು ಚೆಂದ

  ಇಂದು ವರನಟ ಡಾ|| ರಾಜಕುಮಾರ್ ಅವರ ಪುಣ್ಯಸರಣೆ. ಅಣ್ಣಾವ್ರು ಇಂದು ನಮ್ಮೊಂದಿಗೆ ದೈಹಿಕವಾಗಿ ಇಲ್ಲವಾದರೂ ಕನ್ನಡಿಗರ ಮನದಲ್ಲಿ ಎಂದಿಗೂ ಅಜರಾಮರ. ಕಸ್ತೂರಿ ಕನ್ನಡ ಅವರ ಬಾಯಲ್ಲಿ ಕೇಳೋದೇ ಒಂದು ಚೆಂದ. ನಿಮ್ಮ ದಾಸ ದರ್ಶನ್ ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.

  ಅಣ್ಣಾವ್ರ ವ್ಯಕ್ತಿತ್ವವೇ ಸ್ಪೂರ್ತಿಯ ಚಿಲುಮೆ ಎಂದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಅಣ್ಣಾವ್ರ ವ್ಯಕ್ತಿತ್ವವೇ ಸ್ಪೂರ್ತಿಯ ಚಿಲುಮೆ ಎಂದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ

  ಕನ್ನಡದ ಅಸ್ಮಿತೆಯ ಸಂಕೇತ

  ಕನ್ನಡದ ಅಸ್ಮಿತೆಯ ಸಂಕೇತ, ಕನ್ನಡಿಗರ ಹೃದಯ ಸಾಮ್ರಾಟ, ಕರ್ನಾಟಕ ರತ್ನ ಡಾ. ರಾಜ್ ಕುಮಾರ್ ಅವರ ಪುಣ್ಯಸ್ಮರಣೆಯಂದು ಅವರಿಗೆ ಗೌರವಪೂರ್ವಕ ನಮನಗಳು. ಕನ್ನಡ ರಂಗಭೂಮಿ, ಚಲನಚಿತ್ರಗಳ ಮೂಲಕ ಡಾ.ರಾಜ್ ಅವರು ಕನ್ನಡ ನಾಡು-ನುಡಿಗೆ ಸಲ್ಲಿಸಿದ ಅನುಪಮ ಸೇವೆಯನ್ನು ಸದಾ ಕಾಪಿಟ್ಟುಕೊಳ್ಳೋಣ- ಬಿಎಸ್ ಯಡಿಯೂರಪ್ಪ

  ಡಾ. ರಾಜ್‌ ಕುಮಾರ್ ಅಗಲಿದ ದಿನವನ್ನು ನೆನಪಿಸಿಕೊಂಡು ಭಾವುಕರಾದ ಜಗ್ಗೇಶ್ಡಾ. ರಾಜ್‌ ಕುಮಾರ್ ಅಗಲಿದ ದಿನವನ್ನು ನೆನಪಿಸಿಕೊಂಡು ಭಾವುಕರಾದ ಜಗ್ಗೇಶ್

  ಎಂದೆಂದಿಗೂ ಅಮರ

  ವರನಟ ಡಾ| ರಾಜ್ ಕುಮಾರ್ ಅವರ ಪುಣ್ಯತಿಥಿಯಂದು ನನ್ನ ಗೌರವ ನಮನಗಳು. ನಾಡಿನ ಕಲಾರಂಗಕ್ಕೆ ಮತ್ತು ತಾಯಿ ಭುವನೇಶ್ವರಿಗೆ ಅವರು ಮಾಡಿದ ಸೇವೆ ಎಂದೆಂದಿಗೂ ಅಮರ. ಅವರ ಮೇರು ವ್ಯಕ್ತಿತ್ವ ಇಂದಿನ ಜನಾಂಗಕ್ಕೆ ಮಾದರಿಯಾಗಲಿ- ಡಾ. ಅಶ್ವತ್ಥ್ ನಾರಾಯಣ

  ಅವರ ನೆನಪು...

  ಇಂದು ಅಪ್ಪಾಜಿಯವರ ಪುಣ್ಯಸ್ಮರಣೆ. ಅವರ ನೆನಪು ಎಂದೆಂದಿಗೂ ಅಮರ... ಎಂದು ರಾಜ್ ಕುಮಾರ್ ಅವರ ಮಗ, ನಟ ರಾಘವೇಂದ್ರ ರಾಜ್ ಕುಮಾರ್ ಟ್ವೀಟ್ ಮಾಡಿದ್ದಾರೆ.

  English summary
  Challenging star Darshan, CM BS Yediyurappa and many others remembered Dr Rajkumar on his death anniversary.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X