»   » ಚಿರನಿದ್ರೆಗೆ ಜಾರಿದ ದರ್ಶನ್ ಅಭಿಮಾನಿ ರೇವಂತ್

ಚಿರನಿದ್ರೆಗೆ ಜಾರಿದ ದರ್ಶನ್ ಅಭಿಮಾನಿ ರೇವಂತ್

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ಅವರ ಅಪ್ಪಟ ಅಭಿಮಾನಿ ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ವಿಚಾರ ಎಲ್ಲರಿಗೂ ತಿಳಿದಿದೆ. ಸಾಕಷ್ಟು ವರ್ಷಗಳಿಂದ ದರ್ಶನ್ ಅವರನ್ನೇ ಆರಾಧಿಸುತ್ತಿದ್ದ ರೇವಂತ್ ಬದುಕುವುದು ಇನ್ನು ಕೆಲವೇ ದಿನಗಳು ಎಂದು ವೈದ್ಯರು ತಿಳಿಸಿದ್ದರು.

ರೇವಂತ್ ಸಾಯುವ ಮುನ್ನ ದರ್ಶನ್ ಅವರನ್ನ ಭೇಟಿ ಮಾಡಬೇಕು ಅದೇ ನನ್ನ ಜೀವನದ ಕಡೆ ಆಸೆ ಎನ್ನುವುದನ್ನ ತಿಳಿಸಿದ್ದರು. ಈ ವಿಚಾರ ತಿಳಿದ ಡಿ ಕಂಪನಿಯ ಅಭಿಮಾನಿಗಳು ದರ್ಶನ್ ಅವರನ್ನ ರೇವಂತ್ ಅವರಿಗೆ ಭೇಟಿ ಮಾಡಿಸುವ ಪ್ರಯತ್ನವನ್ನ ಮಾಡಿದ್ದರು.

ವಿಚಾರ ತಿಳಿಸದ ತಕ್ಷಣ ರೇವಂತ್ ಅವರೊಂದಿಗೆ ವಿಡಿಯೋ ಕಾಲ್ ಮಾಡಿ ಅವರ ಆರೋಗ್ಯ ವಿಚಾರಿಸಿದ್ದರು ಡಿ ಬಾಸ್. ಕೆಲಸದ ಮಧ್ಯೆ ತೊಂದರೆ ಕೊಟ್ಟೆ ಎಂದು ರೇವಂತ್ ದರ್ಶನ್ ಅವರ ಬಳಿ ಕ್ಷಮೆ ಕೇಳಿದ್ದರು. ನೆಚ್ಚಿನ ಸ್ಟಾರ್ ನನ್ನು ಕಣ್ಣು ತುಂಬಾ ನೋಡಿ ಆನಂದ ಪಟ್ಟಿದ್ದ ರೇವಂತ್ ಇಂದು (ಫೆ 10)ಎಂದಿಗೂ ಮರಳಿ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ. ಮುಂದೆ ಓದಿ

ದರ್ಶನ್ ಅಭಿಮಾನಿ ರೇವಂತ್ ಇನ್ನಿಲ್ಲ

ಚಾಲೆಂಜಿಂಗ್ ಸ್ಟಾರ್ ಅವರ ಅಭಿಮಾನಿ ರೇವಂತ್ ಇಂದು ಶಿವಮೊಗ್ಗದಲ್ಲಿ ಕೊನೆಯುಸಿರೆಳೆದಿದ್ದಾರೆ. ಶಿವಮೊಗ್ಗದ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿ ಆಗದೆ ರೇವಂತ್ ಸಾವನ್ನಪ್ಪಿದ್ದಾರೆ.

ದರ್ಶನ್ ನೋಡುವುದೇ ಕನಸಾಗಿತ್ತು

ರೇವಂತ್ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ವೈದ್ಯರು ಹೆಚ್ಚು ದಿನಗಳ ಕಾಲ ಬದುಕುವುದಿಲ್ಲ ಎನ್ನುವುದನ್ನ ಖಚಿತ ಪಡಿಸಿದ್ದರು. ಆದರೆ ಸಾಯುವ ಮುನ್ನ ದರ್ಶನ್ ಅವರನ್ನ ನೋಡಲೇಬೇಕು ಎನ್ನುವುದು ರೇವಂತ್ ಆಸೆ ಆಗಿತ್ತು ಅದರಂತೆ ದರ್ಶನ್ ಅವರನ್ನ ನೋಡಿ ಆಸೆ ತೀರಿಸಿಕೊಂಡ ನಂತರ ಪ್ರಾಣ ಬಿಟ್ಟಿದ್ದಾರೆ.

ಅಪ್ಪಟ ಅಭಿಮಾನಿಯನ್ನ ಕಳೆದುಕೊಂಡ ಡಿ ಬಾಸ್

ರೇವಂತ್ ನಿಜಕ್ಕೂ ದರ್ಶನ್ ಅವರ ಅಪ್ಪಟ ಅಭಿಮಾನಿ. ಸಾಕಷ್ಟು ವರ್ಷಗಳಿಂದ ದರ್ಶನ್ ಅವರ ಸಿನಿಮಾಗಳನ್ನ ನೋಡಿಕೊಂಡು ಬೆಳೆದು ಬಂದವರು. ತುಂಬಾ ಚಿಕ್ಕ ವಯಸ್ಸಿನಲ್ಲೇ ಕ್ಯಾನ್ಸರ್ ರೋಗಕ್ಕೆ ತುತ್ತಾಗಿ ಇಂದು ಪ್ರಾಣ ಬಿಟ್ಟಿದ್ದಾರೆ.

ಬರ್ತಡೇ ಮಾಡಿಕೊಳ್ಳಲಿಲ್ಲ ರೇವಂತ್

ದರ್ಶನ್ ಹಾಗೂ ರೇವಂತ್ ಇಬ್ಬರದ್ದೂ ಇದೇ ತಿಂಗಳಲ್ಲಿ ಹುಟ್ಟುಹಬ್ಬ. ಪ್ರತಿವರ್ಷ ರೇವಂತ್ ದರ್ಶನ್ ಅವರ ಬರ್ತಡೇ ಆಚರಣೆ ಮಾಡಲು ಶಿವಮೊಗ್ಗದಿಂದ ಬೆಂಗಳೂರಿಗೆ ಬರುತ್ತಿದ್ದರು. ಆದರೆ ಈ ಬಾರಿ ಹುಟ್ಟುಹಬ್ಬ ಆಚರಣೆ ಮಾಡುವ ಮುನ್ನವೇ ಬಾರದ ಲೋಕಕ್ಕೆ ಪ್ರಯಾಣ ಬೆಳಸಿದರು.

English summary
Kannada actor Darshan's fan Revant passes away, revanth suffering from cancer . recently Darshan spoke to Revant in video call

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada