»   » ದರ್ಶನ್, ಸುದೀಪ್, ಪುನೀತ್ ಎಲ್ರೂ ಉಪ್ಪಿನಕಾಯಿಗಳೇ

ದರ್ಶನ್, ಸುದೀಪ್, ಪುನೀತ್ ಎಲ್ರೂ ಉಪ್ಪಿನಕಾಯಿಗಳೇ

By: ಜೀವನರಸಿಕ
Subscribe to Filmibeat Kannada

ಸಿನಿಮಾದಲ್ಲಿ ಪೋಸ್ಟರ್ ಗಳಲ್ಲಿ ಒಬ್ಬ ಹೀರೋ ಒಬ್ಳು ಹೀರೋಯಿನ್ ಕಂಡ್ರೆ ಸಾಕಾ? ಇಬ್ಬರು ಹೀರೋಗಳನ್ನ ಹಾಕ್ಕೊಂಡು ಒಂದ್ ಸಿನಿಮಾ ಮಾಡೋದು ಸಾಮಾನ್ಯ ನಿರ್ಮಾಪಕರಿಗೆ ಅಸಾಧ್ಯ. ಆದರೆ ಒಂದೇ ಪೋಸ್ಟರ್ ನಲ್ಲಿ ಎರೆಡೆರೆಡು ಹೀರೋಗಳಿದ್ರೆ ಇಬ್ಬರೂ ಸ್ಟಾರ್ ಗಳ ಅಭಿಮಾನಿ ವರ್ಗವನ್ನ ಸೆಳೆಯಬಹುದು.

ಈ ರೀತಿಯ ಲೆಕ್ಕಾಚಾರ, ಪ್ಲಾನ್ ಈಗ ಕನ್ನಡ ಚಿತ್ರೋದ್ಯಮದಲ್ಲಿ ಹೆಡೆಯೆತ್ತಿದೆ. ಸಿನಿಮಾದ ಒಂದು ಸಾಂಗ್ ನಲ್ಲೋ ಇಲ್ಲದಿದ್ರೆ ಒಂದು ಸೀನ್ ನಲ್ಲೋ ಒಬ್ಬ ಸ್ಟಾರನ್ನ ಕರೆಸಿ ವಿಭಿನ್ನ ಪಾತ್ರ ಕೊಟ್ಟು ಒಂದೇ ಸಿನಿಮಾದಲ್ಲಿ ಎರಡು ಹಕ್ಕಿ ಹೊಡೆಯುತ್ತಿದ್ದಾರೆ.

ಒಬ್ಬನೇ ಹೀರೋ ಕಾಣಿಸಿಕೊಳ್ಳೋದಕ್ಕಿಂತ ಮದ್ಯದಲ್ಲೆಲ್ಲೋ ಊಟದಲ್ಲಿ ಉಪ್ಪಿನಕಾಯಿನೋ, ಹಪ್ಪಳ, ಸಂಡಿಗೇನೋ ಕೊಟ್ಟು ಪ್ರೇಕ್ಷಕ ಪ್ರಭುವಿಗೆ ಸ್ವಲ್ಪ ಡಿಫ್ರೆಂಟ್ ಅಥವಾ ವೆರೈಟಿ ಟೇಸ್ಟ್ ಕೊಡ್ತಾರೆ.

ಇತ್ತೀಚೆಗೆ ದರ್ಶನ್, ಸುದೀಪ್, ಪನೀತ್ ರಂತಹ ದೊಡ್ಡ ಸ್ಟಾರ್ ಗಳಿಂದ ಶುರುವಾಗಿ ಎಲ್ಲರೂ ಗೆಸ್ಟ್ ಅಪಿಯರೆನ್ಸ್ ನ ಉಪ್ಪಿಕಾಯಿಯಾಗ್ತಿದ್ದಾರೆ. ಹೀಗೆ ಸ್ಯಾಂಡಲ್ ವುಡ್ ನಲ್ಲಿ ಗೆಸ್ಟ್ ರೋಲ್ ಗಳ ಜಮಾನಾ ಶುರುವಾಗಿದೆ. ಇದೆಲ್ಲದರ ನಡುವೆ ಹೊಸಬರಿಗೆ ಸ್ಟಾರ್ ನಟರು ಪ್ರೋತ್ಸಾಹ ಕೊಡ್ತಿರೋದು ವಿಶೇಷ.

ಸುದೀಪ್ ಕಲರ್ ಫುಲ್ ಉಪ್ಪಿನಕಾಯಿ

ಪೊಲೀಸ್ ರೋಲ್ಗಳಲ್ಲಿ ಅಬ್ಬರಿಸೋ ಸುದೀಪ್ ಇತ್ತೀಚೆಗೆ 'ರಂಗನ್ ಸ್ಟೈಲ್' ಚಿತ್ರದಲ್ಲಿ ಪ್ರದೀಪ್ ಅನ್ನೋ ರೈಸ್, ಕನ್ನಿಕಾ ಅನ್ನೋ ಸಾಂಬಾರ್ ಗೆ ಕಲರ್ ಫುಲ್ ಉಪ್ಪಿನಕಾಯಿ.

ಚಪ್ಪರಿಸಿ ಸವಿಯೋ ಉಪ್ಪಿನಕಾಯಿ ದರ್ಶನ್

ನವರಸನಾಯಕ ಜಗ್ಗೇಶ್ ಅಭಿನಯದ 'ಅಗ್ರಜ' ಸಿನಿಮಾದಲ್ಲಿ ಜಗ್ಗೆಶ್ ಅಂಡ್ ಟೀಂನ ಫುಲ್ ಮೀಲ್ಸ್ ನಲ್ಲಿ ಚಪ್ಪರಿ ಸವಿಯೋ ಉಪ್ಪಿಕಾಯಿ ಚಾಲೆಂಜಿಂಗ್ ಸ್ಟಾರ್ ದರ್ಶನ್.

ರಾಕಿಂಗ್ ಸ್ಟಾರ್ ಯಶ್ ಊರಿಟ್ಟ ಉಪ್ಪಿನಕಾಯಿ

ನೆನಪಿರಲಿ ಪ್ರೇಮ್ ಅಭಿಬನಯದ 'ಚಂದ್ರ' ಸಿನಿಮಾದಲ್ಲಿ ಯಶ್ ಗೆಸ್ಟ್ ರೋಲ್ ನಲ್ಲಿ ಸೂಪರ್ ಎಂಟ್ರಿಕೊಟ್ಟಿದ್ರು.

ಪವರ್ ಸ್ಟಾರ್ ಸಹ ಟೊಮೆಟೋ ಉಪ್ಪಿನಕಾಯಿ

ಪವರ್ ಸ್ಟಾರ್ ಪುನೀತ್ ಇತ್ತೀಚೆಗೆ ಮುಗಿಸಿದ 'ಮೈತ್ರಿ' ಸಿನಿಮಾದಲ್ಲೂ ಪುನೀತ್ ರದ್ದು ಸಿನಿಮಾ ಹೀರೋ ಪಾತ್ರವಲ್ಲ ಗೆಸ್ಟ್ ರೋಲ್ ಅನ್ನೋ ರಿಯಲ್ ಸುದ್ದಿ ಬಂದಿದೆ.

ಅಜಯ್ ರಾಜ್ ನುಗ್ಗೆಕಾಯಿ ಉಪ್ಪಿನಕಾಯಿ

ಸದ್ಯ ರಿಲೀಸ್ ಗೆ ರೆಡಿಯಾಗ್ತಿರೋ 'ಮನದ ಮರೆಯಲ್ಲಿ' ಸಿನಿಮಾದಲ್ಲಿ ಅಜಯ್ ರಾವ್ ಗೆಸ್ಟ್ ರೋಲ್ ಮಾಡಿದ್ದಾರೆ.

ಶ್ರೀನಗರ ಕಿಟ್ಟಿ ಸಿಂಪಲ್ ಉಪ್ಪಿನಕಾಯಿ

ಶ್ರೀನಗರ ಕಿಟ್ಟಿ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ'ಯಲ್ಲಿ ಗೆಸ್ಟ್ ಎಂಟ್ರಿಕೊಟ್ರು.

ಮಾಮು ಟೀ ಅಂಗಡಿಯಲ್ಲಿ ಮಿಕ್ಸ್ ಡ್ ಉಪ್ಪಿನಕಾಯಿ

ಈಗ ಮಾಮು ಟೀ ಅಂಗಡಿ ಸಿನಿಮಾದಲ್ಲಿ ಅಜಯ್ ರಾವ್, ಲೂಸ್ ಮಾದ ಯೋಗಿ, ಪ್ರಜ್ವಲ್ ದೇವರಾಜ್, ನಟ ಪ್ರೇಮ್ ಮುಂತಾದವರು ಕಾಣಿಸಿಕೊಳ್ತಿದ್ದಾರೆ.

ನವರಸ ನಾಯಕ ಜಗ್ಗೇಶ್ ಉಚಿತ ಉಪ್ಪಿನಕಾಯಿ

'ಡವ್' ಚಿತ್ರದ ಹಾಡಿಗಾಗಿ ಯಾವುದೇ ರೆಮ್ಯೂನರೇಷನ್ ಇಲ್ಲದೆ ಜಗ್ಗೇಶ್ ಹೆಜ್ಜೆ ಹಾಕಿದ್ರು.

English summary
Kannada big stars like Sudeep, Darshan, Puneeth Rajkumar, Srinagara Kitty, Yash and many more are in small roles. where guest appearances by certain actors brings a certain glamour to Sandalwood movies. Oneindia brings you the best cameos in Sandalwood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada