»   » ಗಾಂಧಿನಗರಕ್ಕೆ ಕಾಲಿಟ್ಟ 'ಕಿರಗೂರಿನ ಗಯ್ಯಾಳಿಗಳು'!

ಗಾಂಧಿನಗರಕ್ಕೆ ಕಾಲಿಟ್ಟ 'ಕಿರಗೂರಿನ ಗಯ್ಯಾಳಿಗಳು'!

Posted By:
Subscribe to Filmibeat Kannada

ಖ್ಯಾತ ಬರಹಗಾರರಾದ ಪೂರ್ಣಚಂದ್ರ ತೇಜಸ್ವಿ ಅವರ 'ಕಿರಗೂರಿನ ಗಯ್ಯಾಳಿಗಳು' ಕಾದಂಬರಿಯನ್ನು ನಿರ್ದೇಶಕಿ ಸುಮನಾ ಕಿತ್ತೂರು ಅವರು ಹಾಗೆ ತೆರೆ ಮೇಲೆ ಕಲರ್ ಫುಲ್ ಆಗಿ ಹೊರತಂದಿದ್ದಾರೆ.

'ಎದೆಗಾರಿಕೆ' ಚಿತ್ರದ ನಂತರ ಮತ್ತೊಮ್ಮೆ ಗಾಂಧಿನಗರಕ್ಕೆ ವಾಪಸಾಗಿರುವ ಸುಮನಾ ಕಿತ್ತೂರು ಅವರು 'ಕಿರಗೂರಿನ ಗಯ್ಯಾಳಿಗಳು' ಚಿತ್ರದ ಮೂಲಕ ಮತ್ತೆ ನಿರ್ದೇಶನದ ಕಡೆ ಹೊರಳಿದ್ದಾರೆ. ಇದೀಗ ದಸರಾ ಹಬ್ಬದ ಪ್ರಯುಕ್ತ ಸಿನಿಮಾದ ಫಸ್ಟ್ ಲುಕ್ ಫೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ದಸರಾ ಸ್ಪೆಷಲ್ ಗಿಫ್ಟ್ ಪ್ರೆಸೆಂಟ್ ಮಾಡಿದ್ದಾರೆ.

ಅಗ್ನಿ ಶ್ರೀಧರ್ ಅವರ ನಿರ್ಮಾಣದಲ್ಲಿ ಮೂಡಿಬರುತ್ತಿರುವ 'ಕಿರಗೂರಿನ ಗಯ್ಯಾಳಿಗಳು' ಮೇಘ ಮೂವೀಸ್ ಬ್ಯಾನರ್ ಅಡಿಯಲ್ಲಿ ಮೂಡಿಬಂದಿದೆ. ಈಗಾಗಲೇ ಚಿತ್ರದ ಬಹುತೇಕ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಡಬ್ಬಿಂಗ್ ಕಾರ್ಯಗಳು ಕೂಡ ಕೊನೆಯ ಹಂತದಲ್ಲಿದೆ.

ಬರೀ ಹೆಂಗಸರಿಗೆ ಹೆಚ್ಚು ಪ್ರಾಮುಖ್ಯತೆ ನೀಡಿರುವ ಈ ಸಿನಿಮಾದಲ್ಲಿ ಸ್ಯಾಂಡಲ್ ವುಡ್ ನ ಅನೇಕ ಹಿಟ್ ಸ್ಟಾರ್ ನಟರು ಅಭಿನಯಿಸಿದ್ದಾರೆ. ಇದೀಗ ಚಿತ್ರದ ಎಲ್ಲಾ ನ್ಯೂ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ಪೋಸ್ಟರ್ ಗಳು ಭಾರಿ ಕುತೂಹಲ ಹುಟ್ಟಿಸುತ್ತಿವೆ. ಇನ್ನು ಚಿತ್ರದಲ್ಲಿ ಯಾರು ಯಾರು ಮಿಂಚಿದ್ದಾರೆ ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ.

ಸಿಂಪಲ್ ಹುಡುಗಿ ಶ್ವೇತಾ ಶ್ರೀವಾಸ್ತವ್

ನಟ-ನಿರ್ದೇಶಕ ರಕ್ಷಿತ್ ಶೆಟ್ಟಿ ಅವರೊಂದಿಗೆ 'ಸಿಂಪಲ್ಲಾಗ್ ಒಂದು ಲವ್ ಸ್ಟೋರಿ' ಚಿತ್ರದಲ್ಲಿ ಮಿಂಚಿದ್ದ ನಟಿ ಶ್ವೇತಾ ಶ್ರೀವಾಸ್ತವ್ ಅವರು ನಿರ್ದೇಶಕಿ ಸುಮನಾ ಕಿತ್ತೂರು ಅವರ 'ಕಿರಗೂರಿನ ಗಯ್ಯಾಳಿಗಳು' ಚಿತ್ರದಲ್ಲಿ 'ದಾನಮ್ಮ' ಎಂಬ ಪಾತ್ರ ಮಾಡುವ ಮೂಲಕ ಲೀಡ್ ರೋಲ್ ನಲ್ಲಿ ಮಿಂಚಿದ್ದಾರೆ.

'ಜಟ್ಟ' ನ ನಾಯಕಿ ಸುಕೃತಾ ವಾಗ್ಲೇ

ನಟ ಕಿಶೋರ್ ಜೊತೆ 'ಜಟ್ಟ' ಚಿತ್ರದಲ್ಲಿ ಸಖತ್ ಬೋಲ್ಡ್ ಆಗಿ ನಟಿಸಿದ್ದ ನಟಿ ಸುಕೃತಾ ವಾಗ್ಲೇ ಅವರು 'ಕಿರಗೂರಿನ ಗಯ್ಯಾಳಿಗಳು' ಚಿತ್ರದಲ್ಲಿ ದೇಸಿ ಲುಕ್ ನಲ್ಲಿ ಮಿಂಚಿದ್ದಾರೆ.

ನಟಿ ಮಾನಸ ಜೋಶಿ

ಸಖತ್ ಬೋಲ್ಡ್ ಅಂಡ್ ಬ್ಯೂಟಿಫುಲ್ ನಟಿ ಮಾನಸ ಜೋಶಿ ಅವರು ಕೂಡ 'ಕಿರಗೂರಿನ ಗಯ್ಯಾಳಿಗಳು' ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ನಟಿ ಸೋನು ಗೌಡ

'ಇಂತಿ ನಿನ್ನ ಪ್ರೀತಿಯ' ಚಿತ್ರದ ಸಿಂಪಲ್ ಚೆಲುವೆ, ನಟಿ ಸೋನು ಗೌಡ ಅವರು ಸುಮನಾ ಕಿತ್ತೂರ್ ಅವರ 'ಕಿರಗೂರಿನ ಗಯ್ಯಾಳಿಗಳು' ಚಿತ್ರದಲ್ಲಿ ಗಯ್ಯಾಳಿಯಾಗಿ ಮಿಂಚಿದ್ದಾರೆ.

ಹಿರಿಯ ನಟಿ ಬಿ.ಜಯಶ್ರೀ

'ಕೇರ್ ಆಫ್ ಪುಟ್ ಪಾತ್' ಚಿತ್ರದಲ್ಲಿ ಮಾಸ್ಟರ್ ಕಿಶನ್ ಜೊತೆ ಎಲ್ಲರ ಮನ ಮೆಚ್ಚುವಂತೆ ನಟನೆ ಮಾಡಿದ ಹಿರಿಯ ನಟಿ ಬಿ.ಜಯಶ್ರೀ ಅವರು ನಿರ್ದೇಶಕಿ ಸುಮನಾ ಕಿತ್ತೂರ್ ಅವರ 'ಕಿರಗೂರಿನ ಗಯ್ಯಾಳಿಗಳು' ಚಿತ್ರದ ಮೂಲಕ ಮತ್ತೆ ಗಾಂಧಿನಗರಕ್ಕೆ ವಾಪಸಾಗಿದ್ದಾರೆ.

ಲೂಸ್ ಮಾದ ಯೋಗೇಶ್

ಸ್ಯಾಂಡಲ್ ವುಡ್ ನಲ್ಲಿ ಅಷ್ಟೇನು ಯಶಸ್ಸು ಗಳಿಸಿದ ನಟ ಲೂಸ್ ಮಾದ ಯೋಗೇಶ್ ಅವರು ಲಾಂಗ್ ಬ್ರೇಕ್ ನ ನಂತರ ಈ ಗಯ್ಯಾಳಿಗಳ ನಡುವೆ ಇಲ್ಲಿಯವರೆಗೂ ಕಾಣಿಸಿಕೊಳ್ಳದ ಒಂದು ವಿಶೇಷ ಪಾತ್ರದಲ್ಲಿ ಮಿಂಚಿದ್ದಾರೆ.

ನಟ ಕಿಶೋರ್

'ವಾಸ್ಕೋಡಿಗಾಮ' ನಾಯಕ ಕಿಶೋರ್ ಅವರು 'ಕಿರಗೂರಿನ ಗಯ್ಯಾಳಿಗಳ' ನಡುವೆ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಪೋಷಕ ನಟ ಅಚ್ಯುತ್ ಕುಮಾರ್

ಸ್ಯಾಂಡಲ್ ವುಡ್‌ ನ ಪೋಷಕ ನಟ ಅಚ್ಯುತ್ ಕುಮಾರ್ ಅವರು ಸುಮನಾ ಕಿತ್ತೂರ್ ಅವರ 'ಕಿರಗೂರಿನ ಗಯ್ಯಾಳಿಗಳು' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

ನಟ ಶರತ್ ಲೋಹಿತಾಶ್ವ

ಸ್ಯಾಂಡಲ್ ವುಡ್ ನ ರೀಲ್ ವಿಲನ್ ಶರತ್ ಲೋಹಿತಾಶ್ವ ಅವರು ಈ ಗಯ್ಯಾಳಿಗಳಿಗೆ ವಿಲನ್ ರೂಪದಲ್ಲಿ ಕಾಡಲಿದ್ದಾರೆ.

ನಟ ನಿಖಿಲ್ ಮಂಜು

ಸ್ಯಾಂಡಲ್ ವುಡ್ ನಟ ನಿಖಿಲ್ ಮಂಜು ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.

ಕಾಮಿಡಿ ನಟ ರವಿಶಂಕರ್ ಗೌಡ

'ಸಿಲ್ಲಿ-ಲಲ್ಲಿ' ಖ್ಯಾತಿಯ ಕಾಮಿಡಿ ನಟ ರವಿಶಂಕರ್ ಗೌಡ ಅವರು 'ಕಿರಗೂರಿನ ಗಯ್ಯಾಳಿಗಳು' ಚಿತ್ರದಲ್ಲಿ ಲೀಡ್ ರೋಲ್ ನಲ್ಲಿ ಮಿಂಚಿದ್ದಾರೆ.

ನಿರ್ದೇಶಕಿ ಸುಮನಾ ಕಿತ್ತೂರ್

'ಎದೆಗಾರಿಕೆ' ಚಿತ್ರದ ನಂತರ ಮತ್ತೆ ಗಾಂಧಿನಗರದತ್ತ ಮುಖ ಮಾಡಿರುವ ನಿರ್ದೇಶಕಿ ಸುಮನಾ ಕಿತ್ತೂರ್ ಅವರು 'ಕಿರಗೂರಿನ ಗಯ್ಯಾಳಿಗಳು' ಅನ್ನೋ ಒಂದು ವಿಶಿಷ್ಟ ಕಥೆಯೊಂದಿಗೆ ವಾಪಸಾಗಿದ್ದು, ಪ್ರೇಕ್ಷಕರ ಮನಗೆಲ್ಲಲಿದ್ದಾರೆ.

English summary
After the success of 'Edegarike', Suman Kittur has said action-cut to yet another movie titled, 'Kiragoorina Gayyaligalu'. The movie is based on the novel writing by versatile poet Poornachandra Tejaswi. Now the team 'Kiragoorina Gayyaligalu' have released the first look pictures of the artiste from the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada