For Quick Alerts
  ALLOW NOTIFICATIONS  
  For Daily Alerts

  ಮಗಳ ವಿಡಿಯೋಗೆ ಕನ್ನಡ ಹಾಡು; ಡೇವಿಡ್ ವಾರ್ನರ್ ಕನ್ನಡ ಪ್ರೀತಿಗೆ ಅಭಿಮಾನಿಗಳು ಫಿದಾ

  By ಫಿಲ್ಮಿಬೀಟ್ ಡೆಸ್ಕ್
  |

  ಆಸ್ಟ್ರೇಲಿಯಾದ ಖ್ಯಾತ ಕ್ರಿಕೆಟಿಗ ಡೇವಿಡ್ ವಾರ್ನರ್ ಭಾರತದಲ್ಲಿಯೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ಡೇವಿಡ್ ವಾರ್ನರ್ ಅವರಿಗೂ ಭಾರತ ಎಂದರೆ ತುಂಬಾ ಇಷ್ಟ. ಆಗಾಗ ಭಾರತದ ಮೇಲಿನ ಪ್ರೀತಿಯನ್ನು ಹೊರಹಾಕುತ್ತಿರುತ್ತಾರೆ. ಇಲ್ಲಿಯ ಹಾಡುಗಳನ್ನು ತುಂಬಾ ಇಷ್ಟ ಪಡುವ ಡೇವಿಡ್ ಆಗಾಗ ಹಾಡುಗಳಿಗೆ ಟಿಕ್ ಟಾಕ್ ಮಾಡಿ ಭಾರತೀಯ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ.

  ಇತ್ತೀಚಿಗಷ್ಟೆ ದಕ್ಷಿಣ ಭಾರತೀಯ ಸಿನಿಮಾರಂಗದ ಖ್ಯಾತ ನಟಿ ಸಾಯಿ ಪಲ್ಲವಿ ಜೊತೆ ಹೆಜ್ಜೆ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಸಾಯಿ ಪಲ್ಲವಿ ಮತ್ತು ತಮಿಳು ನಟ ಧನುಷ್ ನಟನೆಯ ಮಾರಿ-2 ಸಿನಿಮಾದ ಸೂಪರ್ ಹಿಟ್ ರೌಡಿ ಬೇಬಿ ಹಾಡಿಗೆ ಡೇವಿಡ್ ವಾರ್ನರ್ ಹೆಜ್ಜೆ ಹಾಕಿದ್ದರು. ಫೇಸ್ ಆಪ್ ಮೂಲಕ ಧನುಷ್ ಮುಖಕ್ಕೆ ಡೇವಿಡ್ ವಾರ್ನರ್ ಮುಖ ಬರುವ ಹಾಗೆ ಜೋಡಿಸಿ ರೌಡಿ ಬೇಬಿ ಹಾಡಿಗೆ ಹೆಜ್ಜೆ ಹಾಕಿದ್ದರು. ವಿಡಿಯೋವನ್ನು ಡೇವಿಡ್ ವಾರ್ನರ್ ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿದ್ದರು. ಇದೀಗ ಕನ್ನಡದ ಹಾಡನ್ನು ಶೇರ್ ಮಾಡುವ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಮುಂದೆ ಓದಿ...

  ಮಗಳ ವಿಡಿಯೋಗೆ ಕನ್ನಡ ಹಾಡು

  ಮಗಳ ವಿಡಿಯೋಗೆ ಕನ್ನಡ ಹಾಡು

  ಡೇವಿಡ್ ವಾರ್ನರ್ ಮಗಳು ಸ್ಟೇಡಿಯಮ್‌ನಲ್ಲಿ ತಂದೆಗೆ ಸಪೋರ್ಟ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ಕನ್ನಡದ ಸೂಪರ್ ಹಿಟ್ ಹಾಡು 'ಲವ್ ಯೂ ಅಪ್ಪಾ...' ಗೀತೆಯನ್ನು ಬಳಸಿದ್ದಾರೆ. ಡೇವಿಡ್ ವಾರ್ನರ್ ಈ ವಿಡಿಯೋಗೆ ಕನ್ನಡಿಗರಿಂದ ಸಿಕ್ಕಾಪಟ್ಟೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಭಿಮಾನಿಗಳಿಂದ ಲೈಕ್‌ಗಳ ಸುರಿಮಳೆ ಬರುತ್ತಿದೆ.

  ಚೌಕ ಸಿನಿಮಾದ ಹಾಡು ಇದಾಗಿದೆ

  ಕನ್ನಡಿಗರು ಕಾಮೆಂಟ್ ಮಾಡಿ ಹಾರ್ಟ್ ಇಮೋಜಿ ಹಾಕುತ್ತಿದ್ದಾರೆ. ಅಂದಹಾಗೆ ಲವ್ ಯೂ ಅಪ್ಪಾ...ಚೌಕ ಸಿನಿಮಾದ ಹಾಡಾಗಿದೆ. ತರುಣ್ ಸಾರಥ್ಯದಲ್ಲಿ ಮೂಡಿಬಂದಿರುವ ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು. ಈ ಹಾಡಿನಲ್ಲಿ ಮಾನ್ವಿತಾ ಕಾಮತ್ ಮತ್ತು ಕಾಶಿನಾಥ್ ಕಾಣಿಸಿಕೊಂಡಿದ್ದಾರೆ. ಈ ಹಾಡು ದೊಡ್ಡ ಮಟ್ಟದಲ್ಲಿ ಹಿಟ್ ಆಗಿದ್ದು, ಗಾನಪ್ರಿಯರ ಹೃದಯ ಗೆದ್ದಿತ್ತು. ಇದೀಗ ಡೇವಿಡ್ ವಾರ್ನರ್ ಅವರ ಮನಗೆದ್ದಿದ್ದು, ಹಾಡನ್ನು ಶೇರ್ ಮಾಡಿ ಪ್ರೀತಿ ವ್ಯಕ್ತಪಡಿಸಿದ್ದಾರೆ. ಈ ಪೋಸ್ಟ್ ನೋಡಿ ಈ ಹಾಡಿನ ಗಾಯಕಿ ಅನುರಾಧ ಭಟ್ ಕೂಡಾ ಕಾಮೆಂಟ್ ಮಾಡಿದ್ದಾರೆ.

  ಟಿಕ್ ಟಾಕ್ ಮೂಲಕ ಗಮನ ಸೆಳೆಯುತ್ತಿರುವ ವಾರ್ನರ್

  ಟಿಕ್ ಟಾಕ್ ಮೂಲಕ ಗಮನ ಸೆಳೆಯುತ್ತಿರುವ ವಾರ್ನರ್

  ಭಾರತದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗ ಹೊಂದಿರುವ ಡೇವಿಡ್ ವಾರ್ನರ್ ಐಪಿಎಲ್ ಮೂಲಕ ಭಾರತೀಯರಿಗೆ ಮತ್ತಷ್ಟು ಹತ್ತಿರವಾಗಿದ್ದರು. ಆಗಾಗ ತಮಿಳು ಮತ್ತು ತೆಲುಗು ಹಾಡುಗಳಿಗೆ ಟಿಕ್ ಟಾಕ್ ಮಾಡುತ್ತಿದ್ದ ವಾರ್ನರ್‌ಗೆ ಟಾಲಿವುಡ್ ಅಭಿಮಾನಿಗಳು ಸಿನಿಮಾಗೆ ಯಾಕೆ ನೀವು ಪ್ರಯತ್ನ ಪಡಬಾರದು?, ತೆಲುಗು ರಾಜ್ಯದಲ್ಲಿ ನೀವು ಸೆನ್ಸೇಶನ್. ಚಿತ್ರಮಂದಿರಗಳು ನಿಮಗಾಗಿ ಕಾಯುತ್ತಿವೆ. ಎಂದು ಕಾಮೆಂಟ್ ಮಾಡುವ ಮೂಲಕ ಸಿನಿಮಾರಂಗಕ್ಕೆ ಸ್ವಾಗತ ಕೋರಿದ್ದರು.

  ಯಶ್ ಫೋಟೋಗೆ ಫೇಸ್ ಆಪ್ ಮಾಡಿದ್ದ ವಾರ್ನರ್

  ಯಶ್ ಫೋಟೋಗೆ ಫೇಸ್ ಆಪ್ ಮಾಡಿದ್ದ ವಾರ್ನರ್

  ವಾರ್ನರ್ ಆಗಾಗ ಇಂಥ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಭಾರತದ ಗೀತೆಗಳು ಮಾತ್ರವಲ್ಲದೇ ಪ್ರಪಂಚದ ಪ್ರಸಿದ್ಧ ಹಾಡುಗಳಿಗೂ ಟಿಕ್ ಟಾಕ್ ಮತ್ತು ಡಾನ್ಸ್ ಮಾಡಿ ಗಮನ ಸೆಳೆದಿದ್ದರು. ಇತ್ತೀಚಿಗೆ 'ಕೆಜಿಎಫ್: ಚಾಪ್ಟರ್ 2' ಸಿನಿಮಾದ ಟೀಸರ್ ರಿಲೀಸ್ ಆದಾಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಡೇವಿಡ್ ವಾರ್ನರ್ ಕೂಡ ಫಿದಾ ಆಗಿದ್ದರು. ಟೀಸರ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಗನ್ ನಿಂದ ಸಿಗರೇಟ್ ಹಚ್ಚಿಕೊಳ್ಳುವ ದೃಶ್ಯಕ್ಕೆ ಫೇಸ್ ಆಪ್ ಮಾಡಿದ್ದರು. ಎಡಿಟ್ ಮಾಡಿದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

  English summary
  Cricketer David Warner shares Kannada shares Kannada Love You Appa song video on Instagram.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X