»   » ದಿಢೀರನೆ ಮದುವೆ ಆದ ರಮ್ಯಾ ಬಾರ್ನಾ ಬಗ್ಗೆ ಹೊಸ ಆರೋಪ.!

ದಿಢೀರನೆ ಮದುವೆ ಆದ ರಮ್ಯಾ ಬಾರ್ನಾ ಬಗ್ಗೆ ಹೊಸ ಆರೋಪ.!

Posted By:
Subscribe to Filmibeat Kannada

'ಪಂಚರಂಗಿ', 'ಪರಮಾತ್ಮ', 'ಲೈಫು ಇಷ್ಟೇನೆ' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದ ನಟಿ ರಮ್ಯಾ ಬಾರ್ನಾ ರವರ ಮದುವೆ ಸುದ್ದಿ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಸಿಕ್ಕಾಪಟ್ಟೆ ಸದ್ದು ಮಾಡಿತ್ತು.

ಮೇ 29 ರಂದು ಶಿವಾಜಿನಗರದ ರಿಜಿಸ್ಟರ್ ಆಫೀಸ್ ನಲ್ಲಿ ಫಹಾದ್ ಅಲಿ ಖಾನ್ ಎಂಬುವರ ಜೊತೆಗೆ ದಿಢೀರನೆ ಮದುವೆ ಆದ ರಮ್ಯಾ ಬಾರ್ನಾ ಮೇಲೆ ಇದೀಗ ಹೊಸ ಆರೋಪ ಕೇಳಿಬಂದಿದೆ.

ನಟಿ ರಮ್ಯಾ ಬಾರ್ನಾ ರಹಸ್ಯ ಮದುವೆಯ ಅಸಲಿ ಕಥೆ

ವರ್ಷಗಳ ಹಿಂದೆ ನಟಿ ರಮ್ಯಾ ಬಾರ್ನಾ ಅಭಿನಯಿಸಿದ್ದ 'ಟಾಸ್' ಸಿನಿಮಾ ಇದೇ ಶುಕ್ರವಾರ ತೆರೆಗೆ ಬರಲಿದೆ. ಹೀಗಿದ್ದರೂ, ಚಿತ್ರದ ಪ್ರಚಾರ ಕಾರ್ಯಕ್ರಮಗಳಿಗೆ ನಟಿ ರಮ್ಯಾ ಬಾರ್ನಾ ಹಾಜರ್ ಆಗುತ್ತಿಲ್ಲ ಎಂದು ನಿರ್ದೇಶಕ ದಯಾಳ್ ಪದ್ಮನಾಭನ್ ಆರೋಪ ಮಾಡುತ್ತಿದ್ದಾರೆ. ಮುಂದೆ ಓದಿರಿ...

ಸುದ್ದಿಗೋಷ್ಠಿಗೆ ಬರಲಿಲ್ಲ

ಇತ್ತೀಚೆಗಷ್ಟೇ 'ಟಾಸ್' ಚಿತ್ರದ ಪತ್ರಿಕಾಗೋಷ್ಠಿ ನಡೆಯಿತು. ಅದಕ್ಕೆ ರಮ್ಯಾ ಬಾರ್ನಾ ಹಾಜರ್ ಆಗಿರಲಿಲ್ಲ. ಕಾರಣ ಕೇಳಿದರೆ, ''ತಾಯಿಗೆ ಹುಷಾರಿಲ್ಲ. ಸರ್ಜರಿ ಆಗುತ್ತಿದೆ. ಹೀಗಾಗಿ ಬರಲು ಆಗುವುದಿಲ್ಲ'' ಎಂದು ರಮ್ಯಾ ಬರ್ನಾ ಹೇಳ್ತಾರಂತೆ. ಹಾಗಂತ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ ದಯಾಳ್ ಪದ್ಮನಾಭನ್.

ಫೋನೂ ಇಲ್ಲ, ಮೆಸೇಜೂ ಇಲ್ಲ

ಎಷ್ಟೇ ಬಾರಿ ಫೋನ್ ಮಾಡಿದರೂ, ರಮ್ಯಾ ಬಾರ್ನಾ ಕೈಗೆ ಸಿಗುತ್ತಿಲ್ಲವಂತೆ. ಮೆಸೇಜ್ ಮಾಡಿದರೂ, ಪ್ರತಿಕ್ರಿಯೆ ನೀಡುವುದಿಲ್ಲ. ಸಿನಿಮಾ ಬಿಡುಗಡೆ ಸಮಯದಲ್ಲಿ ಆರ್ಟಿಸ್ಟ್ ಕೈ ಕೊಟ್ಟರೆ ಹೇಗೆ ಎಂದು ಬೇಸರದಿಂದ ನುಡಿಯುತ್ತಾರೆ ದಯಾಳ್ ಪದ್ಮನಾಭನ್.

ಫೋನ್ ನಂಬರ್ ಬದಲಾಗಿದೆ

'ರಹಸ್ಯ' ಮದುವೆ ವಿಚಾರ ಬಯಲಾದ ಮೇಲೆ ನಟಿ ರಮ್ಯಾ ಬಾರ್ನಾ ರವರ ಮೊಬೈಲ್ ನಂಬರ್ ಬದಲಾಯಿಸಿದ್ದಾರೆ. ''ಹೊಸ ನಂಬರ್ ಗೆ ಫೋನ್ ಮಾಡಿದರೆ, ನಾಟ್ ರೀಚಬಲ್ ಬರುತ್ತದೆ. ಹಳೇ ನಂಬರ್ ಗೆ ಕರೆ ಮಾಡಿದರೆ ಸ್ವಿಚ್ ಆಫ್ ಬರುತ್ತದೆ. ನಮ್ಮ ಕಷ್ಟ ಯಾರಿಗ್ ಹೇಳೋಣ'' ಎಂದು ಅಳಲು ತೋಡಿಕೊಳ್ಳುತ್ತಾರೆ ನಿರ್ದೇಶಕ ದಯಾಳ್ ಪದ್ಮನಾಭನ್.

ಇದೇ ಶುಕ್ರವಾರ 'ಟಾಸ್' ತೆರೆಗೆ

ವರ್ಷಗಳ ಹಿಂದೆಯೇ ತೆರೆಗೆ ಬರಬೇಕಿದ್ದ 'ಟಾಸ್' ಸಿನಿಮಾ ಇದೇ ಶುಕ್ರವಾರ (ಜುಲೈ 21) ತೆರೆಗೆ ಬರಲಿದೆ. ಚಿತ್ರದ ಪ್ರಚಾರ ಕಾರ್ಯಕ್ರಮಗಳಿಗೆ ನಟ ವಿಜಯ್ ರಾಘವೇಂದ್ರ ಕೂಡ ಬರುತ್ತಿಲ್ಲ ಎಂದು ನಿರ್ದೇಶಕ ದಯಾಳ್ ಈ ಹಿಂದೆ ಆರೋಪ ಮಾಡಿದ್ದರು.

English summary
Director Dayal Padmanabhan is unhappy because Kannada Actress Ramya Barna is not taking part in 'Toss' promotions.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada