twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾ ನಿರ್ದೇಶಕರ ಗುಂಪುಗಾರಿಕೆ: ದಯಾಳ್ ಪದ್ಮನಾಭನ್ ಅಸಮಾಧಾನ

    |

    ನಿರ್ದೇಶಕ ದಯಾಳ್ ಪದ್ಮನಾಭನ್ ಫೇಸ್‌ಬುಕ್ ಪೋಸ್ಟ್ ಹಾಕಿದ್ದು, ಲೂಸಿಯಾ ಪವನ್ ಕುಮಾರ್ ವಿರುದ್ಧ ಹಾಗೂ ಇನ್ನೂ ಕೆಲವು ನಿರ್ದೇಶಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    Recommended Video

    Saroj Khan once slapped Shahrukh Khan on set ಸೆಟ್‌ನಲ್ಲಿ ಶಾರುಖ್ ಖಾನ್ ಕೆನ್ನೆಗೆ ಬಾರಿಸಿದ್ದರು ಈ ಮಹಿಳೆ

    ದಯಾಳ್ ಪದ್ಮನಾಭನ್ ಅವರು ಪವನ್ ಕುಮಾರ್ ಪ್ರಾರಂಭಿಸಿರುವ ಸಿನಿಮಾ ತಂತ್ರಜ್ಞರ ಒಕ್ಕೂಟ, ಎಫ್‌ಯುಸಿ ಸದಸ್ಯರಾಗಲು ಅರ್ಜಿ ಹಾಕಿದ್ದರಂತೆ ಆದರೆ ಅವರ ಅರ್ಜಿ ತಿರಸ್ಕರಿಸಲಾಗಿದೆ ಇದು ದಯಾಳ್ ಸಿಟ್ಟಿಗೆ ಕಾರಣ.

    ಪವನ್ ಕುಮಾರ್ ಕಳಿಸಿರುವ ಇ-ಮೇಲ್ ಸ್ಕ್ರೀನ್ ಶಾಟ್ ಹಂಚಿಕೊಂಡಿರುವ ದಯಾಳ್ ಪದ್ಮನಾಭನ್, ಎಫ್‌ಯುಸಿಯ ಮೆಂಬರ್‌ಶಿಪ್ ಕೊಡದೇ ಇರುವುದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

    ಜೂನ್ ಮೊದಲ ವಾರದಲ್ಲಿ ಅರ್ಜಿ ಹಾಕಿದ್ದರು

    ಜೂನ್ ಮೊದಲ ವಾರದಲ್ಲಿ ಅರ್ಜಿ ಹಾಕಿದ್ದರು

    'ನಾನು ಜೂನ್ ಮೊದಲ ವಾರದಲ್ಲಿ ಎಫ್‌ಯುಸಿ ಮೆಂಬರ್‌ಶಿಪ್‌ ಗಾಗಿ ಅರ್ಜಿ ಸಲ್ಲಿಸಿದ್ದೆ, ಆದರೆ ನಾನು ಈ ವರೆಗೆ ಮಾಡಿರುವ ಕಾರ್ಯ ಎಫ್‌ಯುಸಿ ಅಲ್ಲಿನ ಕೆಲವರಿಗೆ ಇಷ್ಟವಾಗಿಲ್ಲವೆಂದು ಕಾಣುತ್ತದೆ, ನನಗೆ ಮೆಂಬರ್ ಆಗಲು ಅವಕಾಶ ನೀಡಿಲ್ಲ' ಎಂದಿದ್ದಾರೆ.

    ಜೂನ್ 16 ರಂದು ಪವನ್ ಕುಮಾರ್ ಇ-ಮೇಲ್

    ಜೂನ್ 16 ರಂದು ಪವನ್ ಕುಮಾರ್ ಇ-ಮೇಲ್

    ಜೂನ್ 16 ರಂದು ಪವನ್ ಕುಮಾರ್ ಒಂದು ಇ-ಮೇಲ್ ಕಳಿಸಿರುವುದು ಬಿಟ್ಟರೆ ನನಗೆ ಇನ್ನಾವುದೇ ಪ್ರತಿಕ್ರಿಯೆ ಈವರೆಗೆ ಬಂದಿಲ್ಲ. ನಾನು ಸಿನಿಮಾ ಮಾಡಿ ಇವರನ್ನು ಮೆಚ್ಚಿಸುವುದಕ್ಕಿಂತ ಇನ್ನೂ ಸಾಕಷ್ಟು ಬೇರೆ ಕಾರ್ಯಗಳನ್ನು ನನಗೆ ಮಾಡಲಿಕ್ಕಿದೆ' ಎಂದು ಸಹ ದಯಾಳ್ ಹೇಳಿದ್ದಾರೆ.

    'ನಿರ್ದೇಶಕರ ಗುಂಪುಗಾರಿಕೆ ಬಹಿರಂಗಪಡಿಸಿದ್ದೇನೆ'

    'ನಿರ್ದೇಶಕರ ಗುಂಪುಗಾರಿಕೆ ಬಹಿರಂಗಪಡಿಸಿದ್ದೇನೆ'

    ಕಮೆಂಟ್ ಒಂದಕ್ಕೆ ಉತ್ತರಿಸುತ್ತಾ, 'ಅಲ್ಲಿನವರ (ಎಫ್‌ಯುಸಿ) ಗ್ರೂಪಿಸಂ (ಗುಂಪುಗಾರಿಕೆ)ಯನ್ನು ಬಹಿರಂಗಪಡಿಸಲೆಂದು ನಾನು ಈ ಪೋಸ್ಟ್ ಅನ್ನು ಹಾಕಿದ್ದೇನೆ ಎಂದು ಸಹ ದಯಾಳ್ ಪದ್ಮನಾಭನ್ ಹೇಳಿದ್ದಾರೆ.

    ಪವನ್ ಕುಮಾರ್ ಹೇಳಿರುವುದೇನು?

    ಪವನ್ ಕುಮಾರ್ ಹೇಳಿರುವುದೇನು?

    ಯಾವ ನಿರ್ದೇಶಕರು ಎಫ್‌ಯುಸಿ ಯ ಭಾಗವಾಗಬೇಕು ಎಂಬುದನ್ನು ಎಫ್‌ಯುಸಿ ಸದಸ್ಯರು ನಿರ್ಣಯಿಸುತ್ತಾರೆ. 70% ಗೂ ಹೆಚ್ಚು ಮಂದಿ ನಿರ್ದೇಶಕರೊಬ್ಬರು ಗುಂಪಿನ ಸದಸ್ಯರಾಗಬಹುದು ಎಂದು ಮತಚಲಾಯಿಸಿದರೆ ಮಾತ್ರವೇ ಅವರು ಗುಂಪಿನ ಸದಸ್ಯರಾಗುವುದು ಸಾಧ್ಯ ಪವನ್ ಕುಮಾರ್ ಕಳಿಸಿರುವ ಮೇಲ್‌ನಲ್ಲಿ ಹೇಳಲಾಗಿದೆ. ಅದರ ಸ್ಕ್ರೀನ್ ಶಾಟ್ ಅನ್ನು ದಯಾಳ್ ಹಂಚಿಕೊಂಡಿದ್ದಾರೆ.

    English summary
    Director Dayal Padmanab upset about FUC. He did not get membership of the club.
    Saturday, July 4, 2020, 9:41
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X