»   » ಜೆಕೆ ಮತ್ತು ಅನುಪಮಾ ಅವರ 'ಕರಾಳ ರಾತ್ರಿ'ಗೆ ದಯಾಳ್ ಸಾಕ್ಷಿ!

ಜೆಕೆ ಮತ್ತು ಅನುಪಮಾ ಅವರ 'ಕರಾಳ ರಾತ್ರಿ'ಗೆ ದಯಾಳ್ ಸಾಕ್ಷಿ!

Posted By:
Subscribe to Filmibeat Kannada
ಜೆಕೆ ಮತ್ತು ಅನುಪಮಾ ಅವರ 'ಕರಾಳ ರಾತ್ರಿ'ಗೆ ದಯಾಳ್ ಸಾಕ್ಷಿ! | Filmibeat Kannada

'ಬಿಗ್ ಬಾಸ್' ಗಲಾಟೆ, ವಿವಾದಗಳ ಕೇಂದ್ರ ಬಿಂದು ಆಗಿದ್ದ ನಿರ್ದೇಶಕ ದಯಾಳ್ ಪದ್ಮನಾಭನ್ ಮೂರು ವಾರಕ್ಕೆ ಔಟ್ ಆಗಿದ್ದರು. ಆದರೆ ಬಿಗ್ ಮನೆಯಿಂದ ಹೊರ ಬಂದಿರುವ ಮೇಲೆ ನಿರ್ದೇಶಕ ದಯಾಳ್ ಈಗ ಒಂದು ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ. ಅಲ್ಲದೇ ಈ ಚಿತ್ರಕ್ಕೆ ತಮ್ಮ ಜೊತೆ 'ಬಿಗ್ ಬಾಸ್' ಮನೆಯಲ್ಲಿ ಇದ್ದ ಜೆಕೆ ಮತ್ತು ಅನುಪಮಾ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ದಯಾಳ್ 'ಬಿಗ್ ಬಾಸ್' ಮನೆಗೆ ಹೋದ ಸಮಯಕ್ಕೆ ಸರಿಯಾಗಿ ಅವರೇ ನಿರ್ದೇಶನದ 'ಸತ್ಯ ಹರಿಶ್ಚಂದ್ರ' ಸಿನಿಮಾ ರಿಲೀಸ್ ಆಗಿತ್ತು. ಶರಣ್ ಇರುವ ಕಾರಣ ಕಾಮಿಡಿ ಇರಬಹುದು ಎಂದು ನಿರೀಕ್ಷೆ ಇದ್ದ ಈ ಸಿನಿಮಾ ಚಿತ್ರಮಂದಿರದಲ್ಲಿ ಹೆಚ್ಚು ದಿನ ಇರಲಿಲ್ಲ. ಈಗ ಆ ಸಿನಿಮಾದ ನಂತರ ಮತ್ತೆ ದಯಾಳ್ ಹೊಸ ಸಿನಿಮಾ ಮಾಡುವ ಪ್ಲಾನ್ ಮಾಡಿದ್ದಾರೆ. ಅಲ್ಲದೇ 'ಬಿಗ್ ಬಾಸ್'ನಲ್ಲಿ ತಮಗೆ ಆಪ್ತರಾಗಿದ್ದ ಜೆಕೆ ಮತ್ತು ಅನುಪಮ ಅವರೇ ಸೂಕ್ತ ಎಂದು ನಿರ್ಧಾರ ಮಾಡಿದ್ದಾರೆ. ಮುಂದೆ ಓದಿ....

ಡಾರ್ಕ್ ನೈಟ್

ದಯಾಳ್ ಇದೀಗ 'ಡಾರ್ಕ್ ನೈಟ್' ಎಂಬ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರದ ಬಗ್ಗೆ 'ಬಿಗ್ ಬಾಸ್' ಮನೆಯಲ್ಲಿ ಇದ್ದ ವೇಳೆಯೇ ಅನುಪಮ ಮತ್ತು ಜೆಕೆ ಬಳಿ ದಯಾಳ್ ಮಾತನಾಡಿದ್ದಾರಂತೆ.

'ಕರಾಳ ರಾತ್ರಿ' ನಾಟಕ

ಸಾಹಿತಿ ಮೋಹನ್ ಹಬ್ಬು ಅವರ 'ಕರಾಳ ರಾತ್ರಿ' ನಾಟಕವನ್ನು ದಯಾಳ್ ಸಿನಿಮಾ ಮಾಡುವ ತಯಾರಿ ನಡೆಸಿದ್ದಾರೆ. ಅದಕ್ಕಾಗಿ ಈಗಾಗಲೇ ಆ ನಾಟಕದ ಹಕ್ಕು ಕೂಡ ಅವರು ಪಡೆದುಕೊಂಡಿದ್ದಾರಂತೆ.

ಬಿಗ್ ಬಾಸ್ ಮುಗಿದ ಮೇಲೆ ಶುರು

'ಬಿಗ್ ಬಾಸ್' ಮುಗಿದ ಮೇಲೆ ಅಂದರೆ ಜನವರಿ ತಿಂಗಳ ವೇಳೆಗೆ ಈ ಸಿನಿಮಾ ಶುರುವಾಗಲಿದೆಯಂತೆ. 'ಬಿಗ್ ಬಾಸ್' ಮನೆಯಿಂದ ಜೆಕೆ ಮತ್ತು ಅನುಪಮ ಹೊರ ಬಂದ ನಂತರ ಇನ್ನೊಮ್ಮೆ ಮಾತುಕತೆ ನಡೆಸಿ ಈ ಚಿತ್ರವನ್ನು ದಯಾಳ್ ಪ್ರಾರಂಭ ಮಾಡಲಿದ್ದಾರಂತೆ.

ಸಮೀರಾಚಾರ್ಯ ಮೇಲೆ ಅನುಪಮಾ ಗಂಭೀರ ಆರೋಪ ಮಾಡಿದ್ದು ಸರಿಯೇ.?

ಜೆಕೆ ಮತ್ತು ಅನುಪಮ ಚಿತ್ರಗಳು

ಈ ಹಿಂದೆ ಅನುಪಮ 'ನಗಾರಿ' ಹಾಗೂ ಜೆಕೆ 'ಚಂದ್ರಿಕಾ', 'ಬೆಂಗಳೂರು 560023' ಸೇರಿದಂತೆ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ್ದರು.

'ಬಿಗ್' ಬ್ರೇಕಿಂಗ್: 'ಬಿಗ್ ಬಾಸ್' ಮನೆಯೊಳಗೆ ಹೊಸ ನಟಿ ಎಂಟ್ರಿ.?

ಹಿಂದಿನ ಸಂಚಿಕೆಯಲ್ಲಿ

ಈ ಹಿಂದಿನ 'ಬಿಗ್ ಬಾಸ್' ಸೀಸನ್ ನಲ್ಲಿಯೂ ಕಾರ್ಯಕ್ರಮ ಮುಗಿಯುತ್ತಿದ್ದ ಹಾಗೆ, ಪ್ರಥಮ್, ಕಿರಿಕ್ ಕೀರ್ತಿ ಮತ್ತು ಸಂಜನಾ ಅವರ ಸಿನಮಾಗಳು ಶುರು ಆಗಿದ್ದವು.

English summary
'Bigg Boss Kannada 5' Eliminated Contestant director Dayal Padmanabhan will directing a movie to Karthik Jayaram and Anupama Gowda.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada