»   » 'ದಯವಿಟ್ಟು ಗಮನಿಸಿ' ಚಿತ್ರದ ಮೊದಲ ಟ್ರೇಲರ್ ನೋಡಿ

'ದಯವಿಟ್ಟು ಗಮನಿಸಿ' ಚಿತ್ರದ ಮೊದಲ ಟ್ರೇಲರ್ ನೋಡಿ

Posted By:
Subscribe to Filmibeat Kannada
Dayavittu Gamanisi, Kannada Movie Trailer released | Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಸದ್ಯ ವಿಭಿನ್ನತೆಯ ಮೂಲಕ ಸದ್ದು ಮಾಡುತ್ತಿರುವ ಸಿನಿಮಾ 'ದಯವಿಟ್ಟು ಗಮನಿಸಿ'. ಈಗಾಗಲೇ ಈ ಚಿತ್ರದ ಹಾಡುಗಳು ರಿಲೀಸ್ ಆಗಿ ಎಲ್ಲರ ಗಮನ ಸೆಳೆದಿತ್ತು. ಈಗ ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಿದ್ದು, ಚಿತ್ರದಲ್ಲಿ ಹೊಸ ಭರವಸೆ ಮೂಡಿಸಿದೆ.

'ದಯವಿಟ್ಟು ಗಮನಿಸಿ'.. ಇದು ಸಂಗೀತ ಭಟ್ ಸಿಹಿ ಮುತ್ತಿನ ಕಥೆ

'ದಯವಿಟ್ಟು ಗಮನಿಸಿ' ಚಿತ್ರದ ಟ್ರೇಲರ್ ನೋಡುಗರಿಗೆ ತುಂಬ ಇಷ್ಟ ಆಗುವಂತಿದೆ. ವಿಭಿನ್ನತೆಯನ್ನು ಟ್ರೇಲರ್ ನಲ್ಲಿ ಕೂಡ ಕಾಯ್ದುಕೊಂಡಿದೆ. ನಟ ಪ್ರಕಾಶ್ ಬೆಳವಾಡಿ ಮತ್ತು ರಾಜೇಶ್ ನಟರಂಗ ಅವರ ಕಾಂಬಿನೇಷನ್ ನ ಟ್ರೈಲರ್ ಈಗ ಬಿಡುಗಡೆಯಾಗಿದೆ. ಈ ಇಬ್ಬರ ನಟನೆ ಮತ್ತು ಪಂಚಿಂಗ್ ಡೈಲಾಗ್ ಮೊದಲ ಟ್ರೇಲರ್ ನ ಹೈಲೈಟ್ ಆಗಿದೆ.

'Dayavittu gamanisi' movie trailer released

'ದಯವಿಟ್ಟು ಗಮನಿಸಿ' ಚಿತ್ರದಲ್ಲಿ ನಟ ವಸಿಷ್ಠ ಮತ್ತು ಸಂಗೀತ ಭಟ್ ಅಭಿನಯಿಸಿದ್ದಾರೆ. ಸುಕೃತಾ ವಾಗ್ಲೆ, ಭಾವನಾ ರಾವ್, ಸಂಯುಕ್ತ ಹೊರನಾಡು ಕೂಡ ಕಾಣಿಸಿಕೊಂಡಿದ್ದಾರೆ. ಚಿತ್ರದ ಒಂದು ಹಾಡಿನಲ್ಲಿ ನಟಿ ಮೇಘನಾ ರಾಜ್ ಹೆಜ್ಜೆ ಹಾಕಿದ್ದಾರೆ. ರೋಹಿತ್ ಪದಕಿ ನಿರ್ದೇಶನ ಚಿತ್ರಕ್ಕಿದೆ. ಅನೂಪ್ ಸೀಳಿನ್ ಸಂಗೀತ ನೀಡಿದ್ದು, ಒಂದು ಹಾಡನ್ನು ಜಯಂತ್ ಕಾಯ್ಕಿಣಿ ಬರೆದಿದ್ದಾರೆ.

English summary
'Dayavittu Gamanisi' Kannada movie trailer released. The movie is directed by rohit padaki features vasishta simha, sangeetha bhat, meghana raj and others.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada