For Quick Alerts
  ALLOW NOTIFICATIONS  
  For Daily Alerts

  ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಪರಭಾಷೆ ಸಿನಿಮಾ ಪ್ರಚಾರ ಸರಿಯೇ?

  By Naveen
  |

  ಇತ್ತೀಚಿಗಷ್ಟೆ ತೆಲುಗು ನಟ ಮಹೇಶ್ ಬಾಬು ತಮ್ಮ 'ಭರತ್ ಅನೇ ನೇನು' ಸಿನಿಮಾಗೆ ಸಿಕ್ಕ ದೊಡ್ಡ ಪ್ರತಿಕ್ರಿಯೆಗೆ ಫೇಸ್ ಬುಕ್ ಮತ್ತು ಟ್ವಿಟ್ಟರ್ ಖಾತೆಯಲ್ಲಿ ಧನ್ಯವಾದ ಹೇಳಿದ್ದರು. ತಮಿಳು, ತೆಲುಗು, ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಧನ್ಯವಾದ ಎಂದು ಬರೆದುಕೊಂಡಿದ್ದ ಮಹೇಶ್ ಬಾಬು ಕನ್ನಡವನ್ನೇ ಮರೆತು ಬಿಟ್ಟಿದ್ದರು. ಸಾಮಾಜಿಕ ಜಾಲತಾಣದಲ್ಲಿ ಅನೇಕರ ಕಮೆಂಟ್ ನೋಡಿದ ನಂತರ ಕೊನೆಗೆ ಇರಲಿ ಅಂತ ಕನ್ನಡದಲ್ಲಿ 'ಕೃತಜ್ಞತೆ' ಸಲ್ಲಿಸಿದರು.

  ಹಾಗೆ ನೋಡಿದರೆ ಕರ್ನಾಟಕದಲ್ಲಿ ತೆಲುಗು ಸಿನಿಮಾಗಳಿಗೆ ಮಾತ್ರವಲ್ಲ ತಮಿಳು, ಹಿಂದಿ ಸಿನಿಮಾಗಳಿಗೂ ದೊಡ್ಡ ಮಾರ್ಕೆಟ್ ಇದೆ. ಕನ್ನಡ ಸಿನಿಮಾಗಳಿಗೆ ಪೈಪೋಟಿ ನೀಡುವ ಮಟ್ಟಿಗೆ ಈ ನೆಲದಲ್ಲಿ ಪರಭಾಷೆ ಸಿನಿಮಾಗಳು ಬೆಳೆದು ನಿಂತಿವೆ. ಒಂದು ಕಡೆ ಪರಭಾಷ ಸಿನಿಮಾಗಳಿಗೆ ಟಿವಿಯಲ್ಲಿ ಬೇಕಾದಷ್ಟು ಪ್ರಚಾರ ಕೊಡಲಾಗುತ್ತಿದೆ. ಜೊತೆಗೆ ಆ ಸಿನಿಮಾಗಳಿಗೆ ಬೇಕಾದ ಚಿತ್ರಮಂದಿರಗಳನ್ನು ನೀಡಲಾಗುತ್ತಿದೆ. ಆದರೆ ಇಲ್ಲಿಂದ ಎಷ್ಟೊಂದು ಅನುಕೂಲ ಪಡೆಯುತ್ತಿರುವ ಆ ನಟರು ಮಾತ್ರ ಅದನ್ನು ಲೆಕ್ಕಕ್ಕೆ ಇಟ್ಟಿಲ್ಲ.

  ಇದೆಲ್ಲ ನೋಡಿದ ಮೇಲೆ 'ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಪರಭಾಷೆ ಸಿನಿಮಾ ಪ್ರಚಾರ ಸರಿಯೇ?' ಎಂಬ ಪ್ರಶ್ನೆ ಮೂಡುವುದು ಸಾಮಾನ್ಯ. ಆ ಕುರಿತ ಒಂದು ವಿಶ್ಲೇಷಣೆ ಇಲ್ಲಿದೆ ಓದಿ...

  ಸುದ್ದಿ ಓಕೆ, ಪ್ರಚಾರ ಯಾಕೆ ?

  ಸುದ್ದಿ ಓಕೆ, ಪ್ರಚಾರ ಯಾಕೆ ?

  ಕನ್ನಡ ಸುದ್ದಿ ಮಾಧ್ಯಮಗಳಲ್ಲಿ ಪರಭಾಷ ಚಿತ್ರರಂಗಕ್ಕೆ ಸಂಬಂಧ ಪಟ್ಟ ದೊಡ್ಡ ಘಟನೆ, ವಿವಾದ, ಸಾವು, ನೋವು ಇದ್ದಾಗ ಸುದ್ದಿ ಮಾಡುವುದು ಓಕೆ. ಆದರೆ ಒಂದು ಸಿನಿಮಾಗೆ ಪ್ರಚಾರ ನೀಡುವುದು ಎಷ್ಟರ ಮಟ್ಟಿಗೆ ಸರಿ? ಅದರಲ್ಲಿಯೂ 'ಬಾಹುಬಲಿ', '2.0' ರೀತಿಯ ದೊಡ್ಡ ಸ್ಟಾರ್, ದೊಡ್ಡ ಬಜೆಟ್ ಸಿನಿಮಾಗಳು ಬಂದರೆ ಕನ್ನಡ ಸುದ್ದಿ ವಾಹಿನಿಗಳಲ್ಲಿ ಅದರ ಬಗ್ಗೆಯೇ ಅರ್ಧ ಗಂಟೆ/ಒಂದು ಗಂಟೆ ಕಾರ್ಯಕ್ರಮ.!

  ಅಲ್ಲಿ ಹಿಂಗಿಲ್ಲ

  ಅಲ್ಲಿ ಹಿಂಗಿಲ್ಲ

  ಕನ್ನಡ ಸುದ್ದಿ ಮಾಧ್ಯಮದಲ್ಲಿ ಬೇರೆ ಭಾಷೆಯ ಸಿನಿಮಾ ಪ್ರಚಾರ ಮಾಡುವುದು ಸರಿಯೋ.. ತಪ್ಪೋ..? ಎನ್ನುವುದು ಬೇರೆ ಮಾತು. ಆದರೆ ಪರಭಾಷೆಯ ವಾಹಿನಿಗಳು ಕನ್ನಡ ಸಿನಿಮಾವನ್ನು ತಿರುಗಿ ಸಹ ನೋಡುವುದಿಲ್ಲ. ಪ್ರಚಾರ ಇರಲಿ, ಸಿನಿಮಾದ ಚಿಕ್ಕ ತುಣುಕನ್ನು ಕೂಡ ಹಾಕುವುದಿಲ್ಲ. ಹೀಗಿರುವಾಗ ಇಲ್ಲಿ ಮಾತ್ರ ಯಾಕೆ ಬೇರೆ ಭಾಷೆಗೆ ಅಷ್ಟೊಂದು ಪ್ರಾಮುಖ್ಯತೆ ನೀಡಬೇಕು.? ಎಂಬ ಪ್ರಶ್ನೆ ಮೂಡದೇ ಇರಲ್ಲ.

  ಸುದ್ದಿಯ ಕೊರತೆ

  ಸುದ್ದಿಯ ಕೊರತೆ

  ಇನ್ನು ಸುದ್ದಿ ಮಾಧ್ಯಮಗಳ ವರದಿಗಾರರ ದೃಷ್ಟಿಯಿಂದ ಯೋಚನೆ ಮಾಡಿದರೆ ಕೆಲವು ಬಾರಿ ಸುದ್ದಿಯ ಕೊರತೆಯಿಂದ ಪರಭಾಷೆಯ ಸಿನಿಮಾಗಳಿಗೆ ಕೈ ಹಾಕಬೇಕಾಗುತ್ತದೆ. ಪ್ರತಿ ದಿನ ಅರ್ಧ ಗಂಟೆ ಕಾರ್ಯಕ್ರಮವನ್ನು ತುಂಬಿಸಬೇಕು ಎಂದಾಗ ಕನ್ನಡ ಚಿತ್ರರಂಗದಲ್ಲಿ ಸುದ್ದಿ ಸಿಗದ ವೇಳೆ ಬೇರೆ ಭಾಷೆಯ ಸಿನಿಮಾ ಕಡೆ ನೋಡ ಬೇಕಾಗುತ್ತದೆ. ಆದರೂ, ಕನ್ನಡ ಸಿನಿಮಾವನ್ನು ಮಾತ್ರ ಪ್ರಚಾರ ಮಾಡುತ್ತೇವೆ ಎಂಬ ಪಣ ತೊಟ್ಟರೆ ಇದು ಸಾಧ್ಯವಾಗದ ಕೆಲಸ ಅಲ್ಲ.

  ಪ್ರೇಕ್ಷಕರ ಕಿಡಿ

  ಪ್ರೇಕ್ಷಕರ ಕಿಡಿ

  ಈಗಾಗಲೇ ಅನೇಕ ಬಾರಿ ಪ್ರೇಕ್ಷಕರು ಕನ್ನಡ ಸುದ್ದಿ ವಾಹಿನಿಯ ಬಗ್ಗೆ ಇರುವ ಅಸಮಾಧಾನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹೊರ ಹಾಕಿದ್ದಾರೆ. ಬೇರೆ ಭಾಷೆಯ ಸಿನಿಮಾಗಳಿಗೆ ಸಿಕ್ಕಾಪಟ್ಟೆ ಹೈಪ್ ಸೃಷ್ಟಿಸುವುದು ಸುದ್ದಿ ಮಾಧ್ಯಮಗಳೆ ಎಂದು ಕಿಡಿ ಕಾರುತ್ತಿರುತ್ತಾರೆ. ಜೊತೆಗೆ ಪದೇ ಪದೇ ಬೇರೆ ಭಾಷೆಯ ಸಿನಿಮಾ ಬಗ್ಗೆ ಹೇಳುವುದಕ್ಕಿಂತ ಕನ್ನಡದ ಹೊಸ ಪ್ರಯತ್ನಕ್ಕೆ ಬೆಲೆ ನೀಡಿ ಎನ್ನುವುದು ವೀಕ್ಷಕರ ಕೋರಿಕೆ ಆಗಿದೆ.

  ಚಿತ್ರತಂಡಗಳ ಬೇಸರ

  ಚಿತ್ರತಂಡಗಳ ಬೇಸರ

  ಪರಭಾಷೆಯ ಸಿನಿಮಾಗಳಿಗೆ ವಿಶೇಷ ಕಾರ್ಯಕ್ರಮಗಳನ್ನು ಮಾಡಿ ಸಿಕ್ಕಾಪಟ್ಟೆ ಹೊಗಳುವುದು ಕನ್ನಡದ ಅನೇಕ ನಿರ್ದೇಶಕ, ನಿರ್ಮಾಪಕ, ನಟ, ನಟಿಯರಿಗೆ ಕೂಡ ಸರಿ ಎನಿಸುವುದಿಲ್ಲ. ಇದೇ ವಿಚಾರವಾಗಿ ಸುದ್ದಿ ಮಾಧ್ಯಮಗಳ ಮೇಲೆ ಅವರಿಗೆ ಬೇಸರ ಇದೆ. ಆದರೆ ಅದನ್ನು ಅವರು ನೇರವಾಗಿ ಹೇಳಲು ಆಗುವುದಿಲ್ಲ.

  ಕನ್ನಡಿಗರು ವಿಶಾಲ ಹೃದಯದವರು

  ಕನ್ನಡಿಗರು ವಿಶಾಲ ಹೃದಯದವರು

  ಮಾಧ್ಯಮಗಳಲ್ಲಿ ಪರಭಾಷ ಸಿನಿಮಾದ ಪ್ರಚಾರದ ಅಬ್ಬರ ನಡೆಯುತ್ತಿದೆ. ಆದರೆ ಮಾಧ್ಯಮ ಮಾತ್ರವಲ್ಲದೆ ದಿನನಿತ್ಯದ ಬದುಕಿನಲ್ಲಿಯೂ ನಾವು ಕನ್ನಡಿಗರು ವಿಶಾಲ ಹೃದಯದವರು ಎಂದು ಸಾಬೀತು ಮಾಡುತ್ತಿದ್ದೇವೆ. ತೆಲುಗಿನ ಸಿನಿಮಾ ಬಿಡುಗಡೆಗೆ ಚಿತ್ರಮಂದಿರ, ಉತ್ತರ ಭಾರತದವರಿಗೆ ಕೆಲಸ, ತಮಿಳಿನವರಿಗೆ ಇರಲು ಜಾಗ ಹೀಗೆ ಕನ್ನಡಿಗರದ್ದು ಕಸ್ತೂರಿ ನಿವಾಸದ ವಂಶ.

  ನೀವೇ ಹೇಳಿ

  ನೀವೇ ಹೇಳಿ

  ಕನ್ನಡ ಸುದ್ದಿ ಮಾಧ್ಯಮದಲ್ಲಿ ಬೇರೆ ಭಾಷೆಯ ಸಿನಿಮಾಗಳಿಗೆ ಪ್ರಚಾರ ನೀಡುವುದು ಸರಿಯೋ..ತಪ್ಪೋ ಎನ್ನುವುದನ್ನು ನೀವೇ ಕೆಳಗಿನ ಕಮೆಂಟ್ ಬಾಕ್ಸ್ ಮೂಲಕ ತಿಳಿಸಿ.

  English summary
  Is it right to promote other language movies in Kannada media?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X