twitter
    For Quick Alerts
    ALLOW NOTIFICATIONS  
    For Daily Alerts

    2018ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಹೊಸ ನಿರ್ದೇಶಕರಿವರು

    |

    'ಆಕ್ಷನ್... ಕಟ್...' ಈ ಎರಡು ಪದಗಳ ನಡುವೆ ನಡೆಯುವ ಜಾದು ಸಿನಿಮಾ. ಈ ರೀತಿ ಸಣ್ಣ ಸಣ್ಣ ಜಾದುವನ್ನು ಅದ್ಭುತವಾಗಿ ಪರದೆ ಮೇಲೆ ತಂದು ತೋರಿಸುವವನೇ ನಿರ್ದೇಶಕ.

    ಇನ್ನು ಪ್ರತಿ ವರ್ಷ ಕೂಡ ಹೊಸ ಹೊಸ ನಿರ್ದೇಶಕರು ಚಿತ್ರರಂಗಕ್ಕೆ ಬರುತ್ತಿದ್ದಾರೆ. ತಮ್ಮ ಹೊಸ ಪ್ರಯೋಗಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಕನ್ನಡದಲ್ಲಿ ಈ ವರ್ಷವೂ ಅನೇಕ ನಿರ್ದೇಶಕರು ಪಾದಾರ್ಪಣೆ ಮಾಡಿದರು. ಇವರಲ್ಲಿ ಕೆಲವರು ಗೆದ್ದರು, ಕೆಲವರು ಸೋತರು, ಇನ್ನು ಕೆಲವರು ಪ್ರಯತ್ನಗಳನ್ನು ಮುಂದುವರೆಸಿದರು.

    ಚೊಚ್ಚಲ ನಿರ್ದೇಶನದಲ್ಲಿ ಜೈಕಾರ ಹಾಕಿಸಿಕೊಂಡ ಡೈರೆಕ್ಟರ್ಸ್ ಚೊಚ್ಚಲ ನಿರ್ದೇಶನದಲ್ಲಿ ಜೈಕಾರ ಹಾಕಿಸಿಕೊಂಡ ಡೈರೆಕ್ಟರ್ಸ್

    ಅಂದಹಾಗೆ, ಈ ವರ್ಷ ಕನ್ನಡ ಚಿತ್ರರಂಗಕ್ಕೆ ಬಂದ ಹೊಸ ನಿರ್ದೇಶಕರ ವಿವರ ಮುಂದಿದೆ ಓದಿ...

    ಮಹೇಶ್ ಗೌಡ (ಅಯೋಗ್ಯ)

    ಮಹೇಶ್ ಗೌಡ (ಅಯೋಗ್ಯ)

    ಈ ವರ್ಷದ ಸೂಪರ್ ಹಿಟ್ ಸಿನಿಮಾಗಳಲ್ಲಿ ಪ್ರಮುಖ ಸಾಲಿಗೆ ಸೇರುವುದು 'ಅಯೋಗ್ಯ'. ಯೋಗರಾಜ್ ಭಟ್ ಜೊತೆಗೆ ಕೆಲಸ ಕಲಿತ ಮಹೇಶ್ ಈ ಸಿನಿಮಾದ ಮೂಲಕ ನಿರ್ದೇಶಕನ ಪಟ್ಟ ಪಡೆದರು. ಮಾತ್ರವಲ್ಲದೆ, ಅದನ್ನು ಯಶಸ್ವಿಯಾಗಿ ನಿಭಾಯಿಸಿದರು. ಈ ಸಿನಿಮಾ ನೂರು ದಿನ ಪ್ರದರ್ಶನ ಕಂಡಿತು. ಜನರು ಮಂಡ್ಯದ ಬೆಲ್ಲದಂತೆ ಚಿತ್ರವನ್ನು ಸವಿದರು.

    ಈ ವರ್ಷ ಸ್ಟಾರ್ ಕಿರೀಟ ತೊಟ್ಟ ನಟಿ ಯಾರು? ಈ ವರ್ಷ ಸ್ಟಾರ್ ಕಿರೀಟ ತೊಟ್ಟ ನಟಿ ಯಾರು?

    ಗುರುದತ್ ಗಾಣಿಗ (ಅಂಬಿ ನಿಂಗೆ ವಯಸ್ಸಾಯ್ತೋ)

    ಗುರುದತ್ ಗಾಣಿಗ (ಅಂಬಿ ನಿಂಗೆ ವಯಸ್ಸಾಯ್ತೋ)

    ನಟ ಸುದೀಪ್ ಅವರ ಬಳಗದಲ್ಲಿ ಇದ್ದ ಗುರುದತ್ ಗಾಣಿಗ 'ಅಂಬಿ ನಿಂಗೆ ವಯಸ್ಸಾಯ್ತೋ' ಸಿನಿಮಾದ ಮೂಲಕ ಡೈರೆಕ್ಟರ್ ಆದರು. ಈ ಸಿನಿಮಾ ಚೆನ್ನಾಗಿ ಇದ್ದರೂ ತಕ್ಕ ಫಲ ಸಿಗಲಿಲ್ಲ. ಅದೆನೇ ಇದ್ದರೂ, ಈ ವಯಸ್ಸಿನಲ್ಲಿ ಅಂಬರೀಶ್ ಮತ್ತು ಸುದೀಪ್ ರೀತಿಯ ದಿಗ್ಗಜರಿಗೆ ಆಕ್ಷನ್ ಕಟ್ ಹೇಳಿದ ಗುರು ಸಾಹಸ ಮೆಚ್ಚಬೇಕು.

    ಈ ವರ್ಷ ಯಾವ ನಟರ ಸಿನಿಮಾ ಎಷ್ಟು, ಯಾರು ಬೆಸ್ಟು? ಈ ವರ್ಷ ಯಾವ ನಟರ ಸಿನಿಮಾ ಎಷ್ಟು, ಯಾರು ಬೆಸ್ಟು?

    ಸೆನ್ನಾ ಹೆಗ್ಡೆ (ಕಥೆಯೊಂದು ಶುರುವಾಗಿದೆ)

    ಸೆನ್ನಾ ಹೆಗ್ಡೆ (ಕಥೆಯೊಂದು ಶುರುವಾಗಿದೆ)

    'ಕಥೆಯೊಂದು ಶುರುವಾಗಿದೆ' ಸಿನಿಮಾದ ಮೂಲಕ ಸೆನ್ನಾ ಹೆಗ್ಡೆ ನಿರ್ದೇಶಕನಾದರು. ಈ ಸಿನಿಮಾ ಒಂದು ಬ್ಯೂಟಿಫುಲ್ ಫೀಲ್ ನೀಡಿತ್ತು. ಮೇಕಿಂಗ್ ಹಾಗೂ ನಿರೂಪಣೆಯಲ್ಲಿ ಸೆನ್ನಾ ಹೆಗ್ಡೆ ಹೊಸತನವನ್ನು ತೋರಿಸಿದ್ದರು. ದಿಗಂತ್ ಗೆ ಈ ಚಿತ್ರ ಒಂದು ಬ್ರೇಕ್ ನೀಡಿತು.

    ಜರ್ನಾಧನ್ ಚಿಕ್ಕಣ್ಣ (ಗುಳ್ಟು)

    ಜರ್ನಾಧನ್ ಚಿಕ್ಕಣ್ಣ (ಗುಳ್ಟು)

    'ಗುಳ್ಟು' ರೀತಿಯ ಒಂದು ಸಿನಿಮಾವನ್ನು ಕನ್ನಡದಲ್ಲಿ ಮಾಡಿ ಗೆಲ್ಲಬಹುದು ಎಂದು ತೋರಿಸಿಕೊಟ್ಟವರು ಜರ್ನಾಧನ್ ಚಿಕ್ಕಣ್ಣ. ಕನ್ನಡದಲ್ಲಿ ಬರುತ್ತಿರುವ ವಿಭಿನ್ನ ಸಿನಿಮಾಗಳ ಸಾಲಿಗೆ ಈ ಸಿನಿಮಾ ಕೂಡ ಸೇರಿಕೊಂಡಿತು. ತಂತ್ರಜ್ಙಾನದ ಕಥೆಯನ್ನು ಸಾಮಾನ್ಯ ಪ್ರೇಕ್ಷಕನಿಗೆ ತಲುಪಿಸಿ ಜರ್ನಾಧನ್ ಚಿಕ್ಕಣ್ಣ ಗೆಲುವು ಸಾಧಿಸಿದರು. ಸಿನಿಮಾ ನೂರು ದಿನ ಓಡಿತು.

    ವಿಜಯ ರಾಘವೇಂದ್ರ (ಕಿಸ್ಮತ್)

    ವಿಜಯ ರಾಘವೇಂದ್ರ (ಕಿಸ್ಮತ್)

    ವಿಜಯ್ ರಾಘವೇಂದ್ರ ಅವರಿಗೆ ಈ ವರ್ಷ ಒಂದು ವಿಶೇಷಕ್ಕೆ ಸಾಕ್ಷಿಯಾಗಿದೆ. ಕಾರಣ, ಹೀರೋ ಆಗಿದ್ದ ವಿಜಯ ರಾಘವೇಂದ್ರ ಈ ವರ್ಷ ನಿರ್ದೇಶಕ ಸಹ ಆದರು. ಅವರ ಬಹುದಿನದ ಕನಸು 'ಕಿಸ್ಮತ್' ಚಿತ್ರವನ್ನು ಪ್ರೇಕ್ಷಕರ ಮುಂದೆ ಇಟ್ಟರು. ಆದರೆ, ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದ್ದ ಈ ಸಿನಿಮಾ ಸೋಲು ಅನುಭವಿಸಿತು.

    ರಿಶಿಕಾ ಶರ್ಮಾ (ಟ್ರಂಕ್)

    ರಿಶಿಕಾ ಶರ್ಮಾ (ಟ್ರಂಕ್)

    ರಿಷಿಕಾ ಶರ್ಮಾ ಕನ್ನಡದ ಖ್ಯಾತ ನಿರ್ದೇಶಕ ಜಿವಿ ಅಯ್ಯರ್ ಅವರ ಮೊಮ್ಮಗಳು. ಇವರ ಮೊದಲ ನಿರ್ದೇಶಕನದ ಸಿನಿಮಾ 'ಟ್ರಂಕ್'. ಈ ಸಿನಿಮಾಗೆ ಒಳ್ಳೆಯ ಪ್ರತಿಕ್ರಿಯೆ ಇದ್ದರೂ ಹೆಚ್ಚು ದಿನ ಚಿತ್ರಮಂದಿರದಲ್ಲಿ ಉಳಿಯಲಿಲ್ಲ. 'ಟ್ರಂಕ್' ಒಂದು ಕಂಪ್ಲಿಟ್ ಹಾರರ್ ಶೋ, ಥ್ರಿಲ್ ಜಾಸ್ತಿ ನೀಡಿತ್ತು.

    English summary
    Year end special, Debutant directors of kannada 2018,
    Saturday, December 15, 2018, 16:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X