For Quick Alerts
  ALLOW NOTIFICATIONS  
  For Daily Alerts

  ಅದೃಷ್ಟದ ಬಾಗಿಲು ತೆಗೆದು ಚಂದನವನಕ್ಕೆ ಬಂದ ಚೆಲುವೆಯರು.!

  |
  ಕನ್ನಡದಲ್ಲಿ ಅದೃಷ್ಟವಂತರು ಅಂದ್ರೆ ಇವರೆ..!..! | FILMIBEAT KANNADA

  ಪ್ರತಿವರ್ಷದಂತೆ ಈ ವರ್ಷವೂ ಹಲವು ಹೊಸ ಪ್ರತಿಭೆಗಳು ಚಂದನವನಕ್ಕೆ ಬಂದಿದ್ದಾರೆ. ಕೆಲವರು 'ವಾಹ್' ಎನ್ನುವಂತೆ ಸದ್ದು ಮಾಡಿದ್ರೆ, ಇನ್ನು ಕೆಲವರು ಯಾವಾಗ ಬಂದ್ರು ಯಾವಾಗ ಹೋದ್ರು ಎಂಬುದೇ ಗೊತ್ತಿಲ್ಲ.

  ಮೊದಲ ಸಿನಿಮಾ ಬಿಡುಗಡೆಯಾಗುವಷ್ಟರಲ್ಲೇ ಮತ್ತಷ್ಟು ಹೊಸ ಸಿನಿಮಾಗಳಲ್ಲಿ ಅಭಿನಯಿಸಿ ಕೆಲವು ನಟಿ ಆಲ್ ರೆಡಿ ಓಡೋ ಕುದರೆಗಳು ಆಗಿಬಿಟ್ಟರು. ಒಂದೇ ವರ್ಷದಲ್ಲಿ ಎರಡ್ಮೂರು ಪ್ರಾಜೆಕ್ಟ್ ಓಕೆ ಮಾಡ್ಕೊಂಡು ಸಕ್ಸಸ್ ಹಾದಿಯಲ್ಲಿ ಹೆಜ್ಜೆಯಿಟ್ಟರು.

  2018ನೇ ವರ್ಷದ 'ರೈಸಿಂಗ್ ಸ್ಟಾರ್' ಪಟ್ಟ ಯಾರಿಗೆ ಸಿಗಬೇಕು?

  ಗಮನಿಸಬೇಕಾದ ವಿಚಾರ ಅಂದ್ರೆ, ಪರಭಾಷೆಯ ಸ್ಟಾರ್ ನಟಿಯರು ಈ ವರ್ಷ ನಮ್ಮ ಇಂಡಸ್ಟ್ರಿಗೆ ಬಂದಿದ್ದು ಕಡಿಮೆ. ಹಾಗಾಗಿ, ಹೊಸದಾಗಿ ಇಂಡಸ್ಟ್ರಿ ಪ್ರವೇಶ ಮಾಡಿದ ಕೆಲವರಿಗೆ ರೆಡ್ ಕಾರ್ಪೆಟ್ ಹಾಕಿ ಸ್ವಾಗತ ಮಾಡಲಾಯಿತು. ಹಾಗಿದ್ರೆ, 2018ನೇ ವರ್ಷ ಸದ್ದು ಮಾಡಿ ಸ್ಯಾಂಡಲ್ ವುಡ್ ಗೆ ಬಂದು ನವನಟಿಯರು ಯಾರು? ಮುಂದೆ ಓದಿ.....

  ಐಶ್ವರ್ಯ ಅರ್ಜುನ್

  ಐಶ್ವರ್ಯ ಅರ್ಜುನ್

  ಬಹುಭಾಷಾ ನಟ ಅರ್ಜುನ್ ಸರ್ಜಾ ಅವರ ಪುತ್ರಿಯ ಎಂಟ್ರಿ ಈ ವರ್ಷದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಸ್ವತಃ ಸರ್ಜಾ ನಿರ್ದೇಶನ, ನಿರ್ಮಾಣ ಮಾಡಿದ್ದ 'ಪ್ರೇಮ ಬರಹ' ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿಗೆ ಐಶ್ವರ್ಯ ಅರ್ಜುನ್ ಅವರನ್ನ ಪರಿಚಯ ಮಾಡಿದ್ರು. ತುಂಬಾ ಅದ್ಧೂರಿಯಾಗಿ ಸ್ಯಾಂಡಲ್ ವುಡ್ ಪ್ರವೇಶ ಮಾಡಿದ ಸರ್ಜಾ ಪುತ್ರಿ, ನಟನೆ, ಡ್ಯಾನ್ಸ್ ಎಲ್ಲದರಲ್ಲಿಯೂ ಗಮನ ಸೆಳೆದರು.

  ಈ ವರ್ಷ ರೀಮೇಕ್ ಚಿತ್ರಗಳಿಗೆ ಸೋಲು, ಗೆದ್ದಿದ್ದು ಒಂದೆರೆಡು ಮಾತ್ರ.!

  ನಿಶ್ವಿಕಾ ನಾಯ್ಡು

  ನಿಶ್ವಿಕಾ ನಾಯ್ಡು

  ಚಿರು ಸರ್ಜಾ ಅಭಿನಯದ 'ಅಮ್ಮ ಐ ಲವ್ ಯೂ' ಚಿತ್ರದ ಮೂಲಕ ನಿಶ್ವಿಕಾ ನಾಯ್ಡು ಎಂಬ ಮುದ್ದಾದ ನಟಿ ಚಂದನವನಕ್ಕೆ ಕಾಲಿಟ್ಟರು. ಮೊದಲ ಸಿನಿಮಾ ಬಿಡುಗಡೆಯಾಗುವುದಕ್ಕೆ ಮುಂಚೆಯೇ ನಿಶ್ವಿಕಾ ಮತ್ತಷ್ಟು ಚಿತ್ರಗಳಿಂದ ಅವಕಾಶ ಪಡೆದುಕೊಂಡು ಇಂಡಸ್ಟ್ರಿಯಲ್ಲಿ ಶೈನ್ ಆಗ್ತಿದ್ದಾರೆ. 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರದಲ್ಲೂ ನಿಶ್ವಿಕಾ ನಾಯಕಿಯಾಗಿದ್ದರು.

  ಏನ್ ಅಚ್ಚರಿ ಗುರು: ಸೌತ್ ಸ್ಟಾರ್ ಗಳನ್ನ ಹಿಂದಿಕ್ಕಿದ ರಶ್ಮಿಕಾ ಮಂದಣ್ಣ.!

  ಕಾವ್ಯ ಗೌಡ

  ಕಾವ್ಯ ಗೌಡ

  ಕಿರುತೆರೆಯಲ್ಲಿ ಎಲ್ಲರ ಗಮನ ಸೆಳೆದಿದ್ದ ನಟಿ ಕಾವ್ಯಗೌಡ, 'ಬಕಾಸುರ' ಚಿತ್ರದ ಮೂಲಕ ಬಿಗ್ ಸ್ಕ್ರೀನ್ ಗೆ ಪ್ರವೇಶ ಪಡೆದುಕೊಂಡಿದ್ದು ಇದೇ ವರ್ಷ. 'ಬಕಾಸುರ' ಚಿತ್ರದಲ್ಲಿ ರವಿಚಂದ್ರನ್, ಆರ್.ಜೆ ರೋಹಿತ್ ನಟಿಸಿದ್ದರು. ಬಹುಶಃ ಕಾವ್ಯಗೂ ಮುಂದಿನ ದಿನಗಳಲ್ಲಿ ಒಳ್ಳೆಯ ಅವಕಾಶಗಳು ಹುಡುಕಿಕೊಂಡು ಬರಬಹುದು.

  ಈ ವರ್ಷ ಯಾವ ನಟರ ಸಿನಿಮಾ ಎಷ್ಟು, ಯಾರು ಬೆಸ್ಟು?

  ಪೂಜಾ ದೇವರಿಯಾ

  ಪೂಜಾ ದೇವರಿಯಾ

  ದಿಗಂತ್ ಅಭಿನಯಿಸಿದ್ದ 'ಕಥೆಯೊಂದು ಶುರುವಾಗಿದೆ' ಸಿನಿಮಾ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಈ ಚಿತ್ರದ ಮೂಲಕ ನಟಿ ಪೂಜಾ ದೇವರಿಯಾ ಕನ್ನಡ ಚಿತ್ರರಂಗಕ್ಕೆ ಪ್ರವೇಶ ಮಾಡಿದ್ರು. ಹಾಗಾಗಿ, ಚಂದನವನದ ಮೇಲೆ ಮತ್ತೋರ್ವ ನಟಿ ಅದೃಷ್ಟ ಪರೀಕ್ಷೆ ಎದುರಿಸಲಿದ್ದಾರೆ.

  ಈ ವರ್ಷ ಸ್ಟಾರ್ ಕಿರೀಟ ತೊಟ್ಟ ನಟಿ ಯಾರು?

  ಮಿಷ್ಠಿ ಚಕ್ರವರ್ತಿ

  ಮಿಷ್ಠಿ ಚಕ್ರವರ್ತಿ

  ಕ್ರೇಜಿಸ್ಟಾರ್ ಪುತ್ರ ಮನೋರಂಜನ್ ಅಭಿನಯಿಸಿದ್ದ 'ಬೃಹಸ್ಪತಿ' ಚಿತ್ರದ ಮೂಲಕ ಮಿಷ್ಠಿ ಚಕ್ರವರ್ತಿ, ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟರು. ವರ್ಷದ ಮೊದಲ ಸಿನಿಮಾದಲ್ಲಿ ಕಾಣಿಸಿಕೊಂಡ ಮಿಷ್ಠಿ, ಮತ್ತೆ ಎಲ್ಲೂ ಕಾಣಿಸಿಲ್ಲ. ಬಟ್, ಬ್ಯುಸಿಯಾಗುವ ಲಕ್ಷಣಗಳಿವೆ.

  2018ರ ಅತ್ಯುತ್ತಮ ಕನ್ನಡ ಸಿನಿಮಾ ಯಾವುದು?

  ಶ್ರೀನಿಧಿ ಶೆಟ್ಟಿ

  ಶ್ರೀನಿಧಿ ಶೆಟ್ಟಿ

  ಇನ್ನು ಬಿಡುಗಡೆಯಾಗದ ಕೆಜಿಎಫ್ ಚಿತ್ರದಲ್ಲಿ ಅಭಿನಯಿಸಿರುವ ಶ್ರೀನಿಧಿ ಶೆಟ್ಟಿ ಈಗಾಗಲೇ ಟಾಕ್ ಆಫ್ ದಿ ಇಂಡಸ್ಟ್ರಿ ಆಗಿದ್ದಾರೆ. ಚೊಚ್ಚಲ ಚಿತ್ರದಲ್ಲೇ ಕೆಜಿಎಫ್ ಸಿನಿಮಾ ಮೆಗಾ ಸಿನಿಮಾಗೆ ಅವಕಾಶ ಪಡೆದುಕೊಂಡು, ಕನ್ನಡ ಮಾತ್ರವಲ್ಲದೇ ಬಹುಭಾಷೆಯಲ್ಲೂ ಮಿಂಚುವ ಸುಳಿವು ನೀಡಿದ್ದಾರೆ. ಇವರ ಜೊತೆ ಇನ್ನು ಹಲವು ನಟಿಯರು ಇಂಡಸ್ಟ್ರಿಗೆ ಎಂಟ್ರಿಕೊಟ್ಟಿದ್ದಾರೆ. ನಿಮಗೆ ಯಾರು ಇಷ್ಟವಾದರು ಎಂದು ಕಾಮೆಂಟ್ ಮಾಡಿ ತಿಳಿಸಿ.

  English summary
  2018 witnessed many newcomers entering Sandalwood. Among those here is the list of Talented New Actress who made promising entry into Sandalwood in 2018.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X