»   » ಗವಿಸಿದ್ದೇಶ್ವರ ಜಾತ್ರೆಯಲ್ಲಿ ಪಿ.ಶೇಷಾದ್ರಿ ಸಿನಿಮಾ ಪ್ರದರ್ಶನ

ಗವಿಸಿದ್ದೇಶ್ವರ ಜಾತ್ರೆಯಲ್ಲಿ ಪಿ.ಶೇಷಾದ್ರಿ ಸಿನಿಮಾ ಪ್ರದರ್ಶನ

Posted By:
Subscribe to Filmibeat Kannada

ಕೊಪ್ಪಳ ನಗರದ ಗವಿಸಿದ್ದೇಶ್ವರ ರಥೋತ್ಸವ ಅದ್ದೂರಿಯಾಗಿ ಶುರುವಾಗಿದೆ. ನಿನ್ನೆ ಪ್ರಾರಂಭವಾಗಿರುವ ಈ ಜಾತ್ರೋತ್ಸವದಲ್ಲಿ ನಿರ್ದೇಶಕ ಪಿ.ಶೇಷಾದ್ರಿ ಅವರ ಸಿನಿಮಾ ಪ್ರದರ್ಶನ ಆಗಿದೆ.

ಗವಿಸಿದ್ಧೇಶ್ವರನಿಗೆ ನಮೋನ್ನಮಃ : ಇದು ಯಾತ್ರೆ ಅಲ್ಲ ಜಾತ್ರೆ

ಪಿ.ಶೇಷಾದ್ರಿ ನಿರ್ದೇಶನ ಮಾಡಿದ್ದ 'ಡಿಸೆಂಬರ್ 1' ಸಿನಿಮಾ ಗವಿಸಿದ್ದೇಶ್ವರ ಜಾತ್ರೋತ್ಸವದಲ್ಲಿ ಪ್ರದರ್ಶನ ಆಗಿದೆ. ಈ ವಿಷಯವನ್ನು ಸ್ವತಃ ಪಿ.ಶೇಷಾದ್ರಿ ಅವರು ತಮ್ಮ ಫೇಸ್ ಬುಕ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ. ಅಂದಹಾಗೆ, 'ಡಿಸೆಂಬರ್ 1' ಸಿನಿಮಾ ಎರಡು ರಾಷ್ಟ್ರ ಪ್ರಶಸ್ತಿ ವಿಜೇತ ಸಿನಿಮಾ ಎಂಬ ಹೆಗ್ಗಳಿಕೆ ಪಡೆದಿದೆ. ಜೊತೆಗೆ ಚಿತ್ರದ ನಾಯಕಿಯಾದ ನಿವೇದಿತಾ ಈ ಸಿನಿಮಾಗೆ ರಾಜ್ಯ ಪ್ರಶಸ್ತಿಯನ್ನು ಪಡೆದಿದ್ದರು. ಈ ಹಿಂದೆ ಅನೇಕ ಚಲಚಿತ್ರೋತ್ಸವದಲ್ಲಿ ಪ್ರದರ್ಶನ ಆಗಿದ್ದ ಈ ಸಿನಿಮಾ ಈಗ ಜಾತ್ರೋತ್ಸವದಲ್ಲಿ ಪ್ರದರ್ಶನ ಆಗುತ್ತಿರುವುದು ವಿಶೇಷವಾಗಿದೆ.

December 1 movie screened in Gavisiddeshwara jatra

ಇನ್ನು ಜನವರಿ 03 ರಿಂದ ಶುರುವಾಗಿರುವ ಗವಿಸಿದ್ದೇಶ್ವರ ಜಾತ್ರಾ ರಥೋತ್ಸವ ಜನವರಿ 05 ರವರೆಗೆ ನಡೆಯಲಿವೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಕೊಪ್ಪಳ ನಗರ ಹಾಗೂ ಸುತ್ತಮುತ್ತಲಿನ 5 ಕಿ.ಮೀ ವರೆಗೆ ಮದ್ಯಪಾನ ನಿಷೇಧಿಸಿ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಆದೇಶ ಹೊರಡಿಸಿದ್ದಾರೆ.

English summary
Director P.Sheshadri's national award won kannada movie 'December 1' screened in Gavisiddeshwara jatra Koppal.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X