»   » ದರ್ಶನ್ ಗೆ ಜೋಡಿಯಾದ ಮಿರ್ಚಿ 'ಮೆಣಸಿನಕಾಯಿ' ದೀಕ್ಷಾ

ದರ್ಶನ್ ಗೆ ಜೋಡಿಯಾದ ಮಿರ್ಚಿ 'ಮೆಣಸಿನಕಾಯಿ' ದೀಕ್ಷಾ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಬಾಕ್ಸಾಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹೊಸ 'ಜಗ್ಗುದಾದ' ಚಿತ್ರಕ್ಕೆ ನಾಯಕಿಯರ ಹುಡುಕಾಟದಲ್ಲಿ ನಿರತರಾಗಿದ್ದ ಚಿತ್ರತಂಡ ಅಂತೂ ಇಂತೂ ಕೊನೆಗೂ ಹಿರೋಯಿನ್ ಪಾತ್ರಕ್ಕೆ ಸೂಕ್ತ ನಟಿಯನ್ನು ಆಯ್ಕೆ ಮಾಡಿದ್ದಾರೆ.

ಅವರು ಯಾರು ಅಂತೀರಾ. ಅವರೇ ನಮ್ಮ ತೆಲುಗು, ತಮಿಳು ಚಿತ್ರರಂಗದಲ್ಲಿ ಕೊಂಚ ಮಟ್ಟಿಗೆ ಯಶಸ್ಸು ಗಳಿಸುತ್ತಿರುವ ತೆಲುಗು ತಾರೆ ದೀಕ್ಷಾ ಸೇಠ್, ಇದೀಗ ನಮ್ಮ 'ಜಗ್ಗುದಾದ'ನೊಂದಿಗೆ ಡ್ಯುಯೆಟ್ ಹಾಡಲಿದ್ದಾರೆ.

ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಗೆ ಕಾಲಿಡುತ್ತಿರುವ ದೆಹಲಿ ಮೂಲದ ನಟಿ ಕಮ್ ಮಾಡೆಲ್ ದೀಕ್ಷಾ ಸೇಠ್ ತೆಲುಗು 'ವೇದಂ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟವರು.

Deeksha Seth to play lead opposite Darshan in Kannada movie 'Jaggu Dada'.

ತದನಂತರ ರವಿತೇಜಾ ಅಭಿನಯದ 'ಮಿರಪಕಾಯ', ಹಾಗೂ ನಟ 'ವಿಕ್ರಂ' ಜೊತೆ 'ರಾಜಪಟ್ಟೈ' ಚಿತ್ರದಲ್ಲಿ ಕಾಣಿಸಿಕೊಂಡಿದ್ದು, ಈ ಎರಡು ಚಿತ್ರಗಳು ದೀಕ್ಷಾ ಅವರಿಗೆ ಯಶಸ್ಸು ತಂದುಕೊಟ್ಟಿವೆ ಅಂದ್ರೂ ತಪ್ಪಾಗ್ಲಿಕ್ಕಿಲ್ಲ. ಮಾತ್ರವಲ್ಲದೇ ಪ್ರಬಾಸ್ ಜೊತೆ 'ರೆಬೆಲ್', ರವಿತೇಜ ಅವರ 'ನಿಪ್ಪು' ಸೇರಿದಂತೆ 'ಲೇಕರ್ ಹಮ್ ದಿವಾನಾ ದಿಲ್' ಎನ್ನುವ ಹಿಂದಿ ಚಿತ್ರದಲ್ಲೂ ಮಿಂಚಿದ್ದಾರೆ. [ದರ್ಶನ್ ಚಿತ್ರವನ್ನೇ 'ಒಲ್ಲೆ' ಎಂದ ಹೀರೋಯಿನ್ ಯಾರು?]

ಈ ಮೊದಲು ಮಂಗಳೂರು ಮೂಲದ ಬೆಡಗಿ 'ಮಿಸ್ ಮಂಗಳೂರು' ನೇಹಾ ಶೆಟ್ಟಿಯನ್ನು ದರ್ಶನ್ ಗೆ ನಾಯಕಿಯಾಗಿ ಅಭಿನಯಿಸಲು 'ಜಗ್ಗುದಾದ' ಚಿತ್ರದ ನಿರ್ದೇಶಕ ರಾಘವೇಂದ್ರ ಹೆಗಡೆ ಕೇಳಿದ್ದು, ಆದರೆ ನೇಹಾ ಶೆಟ್ಟಿ ಈ ಆಫರ್ ನ್ನು ನಿರಾಕರಿಸಿದ್ದರೆನ್ನಲಾಗಿದೆ.

ಅಂತೂ ಇಂತೂ ಕೊನೆಗೂ ಚಿತ್ರತಂಡ ನಾಯಕಿಯನ್ನು ಆಯ್ಕೆಗೊಳಿಸಿದ್ದು, ಸದ್ಯಕ್ಕೆ ಚಿತ್ರ ಸೆಟ್ಟೇರಲಿದೆ. ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಇಬ್ಬರು ಪರಭಾಷಾ ನಾಯಕಿಯರು ನಟಿಸಿದ್ದು, ಇದೀಗ ದೀಕ್ಷಾ ಸರದಿ.

ಒಟ್ನಲ್ಲಿ ದಕ್ಷಿಣ ಭಾರತದಲ್ಲಿ ಅಭಿಮಾನಿಗಳನ್ನು ರಂಜಿಸಿದ ದುಂಡು ಮುಖದ ಚೆಲುವೆ ಇದೀಗ ಸ್ಯಾಂಡಲ್ ವುಡ್ ನಲ್ಲಿ ಅದ್ಯಾವ ರೀತಿ ಕಮಾಲ್ ಮಾಡುತ್ತಾರೆ ಅಂತ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

English summary
Director Raghavendra has finally selected telugu actor Deeksha Seth to play lead opposite Darshan in Kannada movie 'Jaggu Dada'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada