»   » ರಿಯಲ್ ಸ್ಟಾರ್ ಉಪೇಂದ್ರ ಜೊತೆ ದೀಪಾ ಸನ್ನಿಧಿ 'ಕಿಕ್'

ರಿಯಲ್ ಸ್ಟಾರ್ ಉಪೇಂದ್ರ ಜೊತೆ ದೀಪಾ ಸನ್ನಿಧಿ 'ಕಿಕ್'

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರು ಮತ್ತೊಂದು ಚಿತ್ರಕ್ಕೆ ಅಣಿಯಾಗುತ್ತಿದ್ದಾರೆ. ಇದೇ ಮೊದಲ ಬಾರಿ ಉಪ್ಪಿ ಜೊತೆ ದೀಪಾ ಸನ್ನಿಧಿ ಅಭಿನಯಿಸುತ್ತಿದ್ದು, ಆಗಸ್ಟ್ 16ರ ವರಮಹಾಲಕ್ಷ್ಮಿ ಹಬ್ಬದ ದಿನ ಚಿತ್ರ ಸೆಟ್ಟೇರಲಿದೆ. ಉಪೇಂದ್ರ ಕ್ಯಾಂಪ್ ನಲ್ಲಿ ಬಹಳ ದಿನಗಳಿಂದ ಇರುವ ಲೋಕಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ.

ಅಂದಹಾಗೆ ಈ ಚಿತ್ರ ತೆಲುಗಿನ ಸೂಪರ್ ಹಿಟ್ ಚಿತ್ರ 'ಕಿಕ್' (2009) ರೀಮೇಕ್. ಕೆ.ಮಂಜು ನಿರ್ಮಾಣದಲ್ಲಿ ಮೂಡಿಬರುತ್ತಿರುವ 35ನೇ ಚಿತ್ರವಿದು. ಉಪೇಂದ್ರ ಜೊತೆಗಿನ 'ಗಾಡ್ ಫಾದರ್' ಚಿತ್ರ ಸೋತ ಬಳಿಕ ಈ ಬಾರಿ ಇನ್ನೊಂದು ರೀಮೇಕ್ ಚಿತ್ರದ ಮೂಲಕ ಇಬ್ಬರೂ ಗೆಲುವಿಗಾಗಿ ಹಾತೊರೆಯುತ್ತಿದ್ದಾರೆ.


ಇನ್ನು ದೀಪಾ ಸನ್ನಿಧಿ ಅವರ ವಿಚಾರಕ್ಕೆ ಬರುವುದಾದರೆ ಅವರು ಈ ಹಿಂದೆ ದರ್ಶನ್ (ಸಾರಥಿ), ಪುನೀತ್ (ಪರಮಾತ್ಮ), ಯಶ್ (ಜಾನೂ) ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ (ಸಕ್ಕರೆ) ಜೊತೆಗೆ ಅಭಿನಯಿಸುವ ಮೂಲಕ ಲಕ್ಕಿ ತಾರೆ ಎಂದೇ ಗುರುತಿಸಿಕೊಂಡಿದ್ದಾರೆ. ಈಗ ಉಪೇಂದ್ರ ಜೊತೆ ಚಾನ್ಸ್ ಗಿಟ್ಟಿಸಿದ್ದಾರೆ.

'ಕಿಕ್' ರಿಮೇಕ್ ಚಿತ್ರಕ್ಕೆ ಕನ್ನಡದಲ್ಲಿ 'ಸೂಪರೋ ರಂಗಾ' ಎಂದು ಹೆಸರಿಡಲಾಗಿದೆ. ತೆಲುಗಿನ 'ಕಿಕ್' ಚಿತ್ರದಲ್ಲಿ ರವಿತೇಜ, ಇಲಿಯಾನಾ ಹಾಗೂ ಶಾಮ್ ಮುಖ್ಯಭೂಮಿಕೆಯಲ್ಲಿದ್ದರು. ಹಿಂದಿ ಮತ್ತು ತಮಿಳಿಗೂ 'ಕಿಕ್' ಚಿತ್ರ ರೀಮೇಕ್ ಆಗಿದೆ. ಇನ್ನು 'ಸೂಪರೋ ರಂಗ' ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಅಶೋಕ್ ಕಶ್ಯಪ್ ಅವರ ಛಾಯಾಗ್ರಹಣವಿದೆ. (ಏಜೆನ್ಸೀಸ್)

English summary
Actress Deepa Sannidhi first time teamed up with Real Star Upendra's forthcoming film 'Suparo Ranga' , its remake fo Telugu hit film 'Kick' and produced by K Manju, launching on Varamahalakshmi day 16th August.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada