For Quick Alerts
  ALLOW NOTIFICATIONS  
  For Daily Alerts

  ದೀಪಿಕಾ ದಾಸ್ ಹುಟ್ಟುಹಬ್ಬದ ಸಂಭ್ರಮದಲ್ಲಿ ಬಿಗ್ ಬಾಸ್ ಮಂದಿ

  |

  ಕಿರುತೆರೆಯ ಖ್ಯಾತ ನಟಿ ದೀಪಿಕಾ ದಾಸ್ ಬಿಗ್ ಬಾಸ್ ರಿಯಾಲಿಟಿ ಶೋ ನಂತರ ಈಗ ಏನು ಮಾಡುತ್ತಿದ್ದಾರೆ ಗೊತ್ತಾ? ಬಿಗ್ ಮನೆಯಲ್ಲಿ ಅದ್ಭುತ ಆಟದ ಮೂಲಕ ಎಲ್ಲರ ಮನಗೆದ್ದಿದ್ದ ದೀಪಿಕಾ ಈಗ ಬಿಗ್ ಬಾಸ್ ಸ್ನೇಹಿತರನ್ನೆಲ್ಲ ಭೇಟಿಯಾಗಿ ನೆನಪನ್ನು ಮೆಲುಕು ಹಾಕುತ್ತಿದ್ದಾರೆ.

  ಇತ್ತೀಚಿಗೆಷ್ಟೆ ಶೈನ್ ಶೆಟ್ಟಿ ಮತ್ತು ಚಂದನಾ ಜೊತೆ ಬೀಚ್ ನಲ್ಲಿ ಜಾಲಿ ಮಾಡುತ್ತಿದ್ದ ದೀಪಿಕಾ, ಮೊನ್ನೆಮೊನ್ನೆಯಷ್ಟೆ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚಸಿಕೊಂಡಿದ್ದಾರೆ. ಅಂದ್ಹಾಗೆ ಈ ಬಾರಿ ದೀಪಿಕಾ ಹುಟ್ಟುಹಬ್ಬ ತುಂಬಾ ವಿಶೇಷವಾಗಿತ್ತು.

  ದೀಪಿಕಾ ದಾಸ್ ಮತ್ತು ಶೈನ್ ಶೆಟ್ಟಿ ನಡುವೆ ಏನುಂಟು, ಏನಿಲ್ಲ.?ದೀಪಿಕಾ ದಾಸ್ ಮತ್ತು ಶೈನ್ ಶೆಟ್ಟಿ ನಡುವೆ ಏನುಂಟು, ಏನಿಲ್ಲ.?

  ಯಾಕಂದ್ರೆ ಬಿಗ್ ಬಾಸ್-7ನ ಸ್ಪರ್ಧಿಗಳೆಲ್ಲ ದೀಪಿಕಾ ಹುಟ್ಟುಹಬ್ಬದಲ್ಲಿ ಭಾಗಿಯಾಗಿ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದರು. ಶೈನ್ ಶೆಟ್ಟಿ, ಚಂದನ್ ಆಚಾರ್, ಕಿಶನ್, ವಾಸುಕಿ, ಜೈ ಜಗದೀಶ್ ಮತ್ತು ಪತ್ನಿ ವಿಜಯಲಕ್ಷ್ಮಿ ಸೇರಿದಂತೆ ಎಲ್ಲರು ದೀಪಿಕಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ಭಾಗಿಯಾಗಿದ್ದರು.

  ಬಿಗ್ ಬಾಸ್ ನಂತರ ಎಲ್ಲರು ಮತ್ತೆ ಒಟ್ಟಾಗಿ ದೀಪಿಕಾ ಹುಟ್ಟುಹಬ್ಬದ ಪಾರ್ಟಿಯನ್ನು ಸಖತ್ ಎಂಜಾಯ್ ಮಾಡಿದ್ದಾರೆ. ಹುಟ್ಟುಹಬ್ಬದ ಒಂದಿಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಬಿಗ್ ಬಾಸ್ ಸ್ಪರ್ಧಿಗಳು ದೀಪಿಕಾಗೆ ವಿಶ್ ಮಾಡಿ ಫೋಟೋ ಶೇರ್ ಮಾಡಿದ್ದಾರೆ.

   Deepika Dass Celebrated Her Birthday With Bigg Boss-7 Friends

  ಕಿರುತೆರೆಯ ಮೂಲಕ ಖ್ಯಾತಿಗಳಿಸಿದ್ದ ದೀಪಿಕಾ ದಾಸ್ ಬಿಗ್ ಬಾಸ್ ನಂತರ ಜನಪ್ರಿಯತೆ ಮತ್ತಷ್ಟು ಹೆಚ್ಚಾಗಿದೆ. ನಾಗಿಣಿ ಧಾರಾವಾಹಿ ಮೂಲಕ ಕನ್ನಡಿಗರ ಮನೆಮಾತಾಗಿದ್ದ ದೀಪಿಕಾ ನಂತರ ಬಾಗಿ ಬಾಸ್ ರಿಯಾಲಿಟಿ ಶೋಗೆ ಎಂಟ್ರಿ ಕೊಟ್ಟಿದ್ದರು. ಸದ್ಯ ಬಿಗ್ ಬಾಸ್ ಮುಗಿಸಿರುವ ದೀಪಿಕಾ ಮುಂದಿನ ನಿರ್ಧಾರವೇನು? ಸಿನಿಮಾ ಮಾಡುತ್ತಾರಾ ಅಥವ ಧಾರಾವಾಹಿಯಲ್ಲಿ ಮುಂದುವರೆಯುತ್ತಾರಾ ಎನ್ನುವುದನ್ನು ಬಹಿರಂಗವಾಗಿಲ್ಲ. ಆದರೆ ಸದ್ಯ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

  English summary
  Kannada Actress And Bigg Boss-7 contestant Deepika Dass celebrating her birthday with Bigg Boss-7 friends.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X