For Quick Alerts
  ALLOW NOTIFICATIONS  
  For Daily Alerts

  ದೀಪಿಕಾ To ಕತ್ರಿನಾ ಕೈಫ್: ಪಾರ್ಟಿಗಳಲ್ಲಿ ಡಾನ್ಸ್ ಮಾಡಲು ಕೋಟಿ ಕೋಟಿ ಚಾರ್ಜ್!

  By Bhagya.s
  |

  ಸಿನಿಮಾ ತಾರೆಯರು ಗ್ಲಾಮರಸ್ ಆಗಿ, ನಾನಾ ವೇಷಗಳಲ್ಲಿ, ತೆರೆಯ ಮೇಲೆ ಕಾಣಿಸಿಕೊಳ್ಳುತ್ತಾರೆ. ಈ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಾರೆ. ಸಿನಿಮಾ ತಾರೆಯರು ಕೇವಲ ಸಿನಿಮಾ ಪರದೆ ಮೇಲೆ ಮಿಂಚುವುದು ಮಾತ್ರವಲ್ಲ ಸಿನಿಮಾದ ಹೊರತಾಗಿಯೂ ಕೂಡ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ ನಾನಾ ಕಾರ್ಯಕ್ರಮಗಳಲ್ಲಿ ಡಾನ್ಸ್ ಕೂಡ ಮಾಡ್ತಾರೆ.

  ನಿಮಗೂ ಕೂಡ ನಿಮ್ಮ ನೆಚ್ಚಿನ ತಾರೆಯರ ಜೊತೆಗೆ ಡಾನ್ಸ್ ಮಾಡಬೇಕು ಅಥವಾ ನಿಮ್ಮ ವೈಯಕ್ತಿಕ ಹುಟ್ಟುಹಬ್ಬ ಅಥವಾ ಬೇರೆ ಕಾರ್ಯಕ್ರಮಗಳಲ್ಲಿ ತಾರೆಯರು ಭಾಗಿಯಾಗಬೇಕು ಅಂದ್ರೆ ಖಂಡಿತವಾಗಿಯೂ ಅದು ಸಾಧ್ಯ. ಈ ಟ್ರೆಂಡ್ ಹೆಚ್ಚಾಗಿ ಬಾಲಿವುಡ್‌ನಲ್ಲಿ ಜಾರಿ ಇದೆ.

  ಬಾಲಿವುಡ್ ಸಿನಿಮಾ ತಾರೆಯರು ಸಿನಿಮಾದಲ್ಲಿ ಅಭಿನಯಿಸುವುದು ಮಾತ್ರವಲ್ಲ, ಸಿನಿಮಾಗಳ ಹೊರತುಪಡಿಸಿ ವೈಯಕ್ತಿಕ ಕಾರ್ಯಕ್ರಮಗಳಲ್ಲಿ ಕೂಡ ಭಾಗಿಯಾಗುತ್ತಾರೆ. ಆದರೆ ಈ ರೀತಿ ವೈಯಕ್ತಿಕ ಪಾರ್ಟಿಗಳಲ್ಲಿ ಭಾಗಿಯಾಗಲು ಇಂತಿಷ್ಟು ಅಂತ ಸಂಭಾವನೆ ಪಡೆಯುತ್ತಾರೆ. ಅದು ಕೋಟಿ ಲೆಕ್ಕದಲ್ಲಿ ಮಾತ್ರ.

  ಕತ್ರಿನಾ ಕೈಫ್ 3.5 ಕೋಟಿ ರೂ. ಚಾರ್ಜ್!

  ಕತ್ರಿನಾ ಕೈಫ್ 3.5 ಕೋಟಿ ರೂ. ಚಾರ್ಜ್!

  ಬಾಲಿವುಡ್ ನಟಿ ಕತ್ರಿನಾ ಕೈಫ್ ಡಾನ್ಸ್ ಮಾಡೋದ್ರಲ್ಲಿ ಸೈ ಎನಿಸಿಕೊಂಡಿರುವಾಕೆ. ಕತ್ರಿನಾ ಅಭಿನಯದ ಯಾವುದೇ ಸಿನಿಮಾ ಬಂದರೂ ಆ ಚಿತ್ರದಲ್ಲಿ ನಟಿ ಕತ್ರಿನಾ ಕೈಫ್ ಅವರ ವಿಶೇಷವಾದ ಹಾಡು, ನೃತ್ಯ ಇದ್ದೇ ಇರುತ್ತೆ. ಇನ್ನು ಪ್ರೈವೇಟ್ ಪಾರ್ಟಿಗಳಲ್ಲೂ ಕೂಡ ಕತ್ರಿನಾ ಕೈಫ್ ಡಾನ್ಸ್ ಮಾಡ್ತಾರೆ. ಇದಕ್ಕಾಗಿ ಅವರು ಪಡೆದುಕೊಳ್ಳುವ ಹಣ 3.5 ಕೋಟಿ ರೂ. ಅಂತೆ. ಈ ಮೂಲಕ ಕತ್ರಿನಾ ಕೈಫ್ ಬಾಲಿವುಡ್ ನಟ ನಟಿಯರ ಪೈಕಿ ಅತಿ ಹೆಚ್ಚು ಸಂಭಾವನೆ ಪಡೆದುಕೊಳ್ಳುವ ಮೊದಲ ನಟಿಯಾಗಿದ್ದಾರೆ.

  ಶಾರುಖ್ 3 ಕೋಟಿ, ಸಲ್ಮಾನ್ 2 ಕೋಟಿ ರೂ.!

  ಶಾರುಖ್ 3 ಕೋಟಿ, ಸಲ್ಮಾನ್ 2 ಕೋಟಿ ರೂ.!

  ಇನ್ನು ಬಾಲಿವುನ್‌ನಲ್ಲಿ ನಟಿಮಣಿಯರು ಮಾತ್ರವಲ್ಲ, ಸಿನಿಮಾ ನಟರು ಕೂಡ ಪ್ರೈವೇಟ್ ಪಾರ್ಟಿಗಳಲ್ಲಿ ಡಾನ್ಸ್ ಮಾಡಲು ಹೋಗ್ತಾರೆ. ಇದಕ್ಕಾಗಿ ಅವರು ಕೂಡ ಕೋಟಿ, ಕೋಟಿ ಹಣವನ್ನು ಪಡೆದುಕೊಳ್ಳುತ್ತಾರೆ. ಬಾಲಿವುಡ್‌ನ ಸೂಪರ್‌ ಸ್ಟಾರ್‌ಗಳಾದ ನಟ ಶಾರುಖ್ ಖಾನ್ ಒಂದು ಡಾನ್ಸ್‌ಗೆ 3 ಕೋಟಿ ರೂ. ಹಣ ಪಡೆಯುತ್ತಾರೆ. ಮತ್ತು ನಟ ಸಲ್ಮಾನ್ ಖಾನ್ ಕೂಡ ಒಂದು ಪಾರ್ಟಿಯಲ್ಲಿ ಒಮ್ಮೆ ಡಾನ್ಸ್ ಮಾಡಲು ಬರೋಬ್ಬರಿ 2 ಕೋಟಿ ರೂ. ಹಣವನ್ನು ಪಡೆದು ಕೊಳ್ಳುತ್ತಾರಂತೆ.

  ದೀಪಿಕಾ, ರಣ್ವೀರ್ ಡ್ಯಾನ್ಸ್‌ಗೆ 1 ಕೋಟಿ ರೂ.

  ದೀಪಿಕಾ, ರಣ್ವೀರ್ ಡ್ಯಾನ್ಸ್‌ಗೆ 1 ಕೋಟಿ ರೂ.

  ಇನ್ನೂ ಬಾಲಿವುಡ್‌ನಲ್ಲಿ ಹೆಸರಾಂತ ಜೋಡಿಗಳಾದ ದೀಪಿಕಾ ಪಡುಕೋಣೆ ಮತ್ತು ರಣ್ವೀರ್ ಸಿಂಗ್ ಕೋಡ ಡಾನ್ಸ್ ಮಾಡ್ತಾರೆ. ಒಂದು ಕೋಟಿ ಕೊಟ್ಟರೆ ದೀಪಿಕಾ ಪಡುಕೋಣೆ ನಿಮ್ಮ ವೈಯಕ್ತಿಕ ಪಾರ್ಟಿಗಳಲ್ಲಿ ಬಂದು ಡಾನ್ಸ್ ಮಾಡಿ ಹೋಗುತ್ತಾರೆ. ಅಂತೆಯೇ ನಟ ರಣಬೀರ್ ಸಿಂಗ್ ಕೂಡ ಪ್ರೈವೇಟ್ ಪಾರ್ಟಿಯಲ್ಲಿ ಡಾನ್ಸ್ ಮಾಡಲು ಒಂದು ಕೋಟಿ ರೂ. ಹಣವನ್ನು ಪಡೆದುಕೊಳ್ಳುತ್ತಾರೆ ಎನ್ನಲಾಗಿದೆ.

  ಹೃತಿಕ್, ರಣಬೀರ್, ಅಕ್ಷಯ್ ಚಾರ್ಜ್ ಎಷ್ಟು?

  ಹೃತಿಕ್, ರಣಬೀರ್, ಅಕ್ಷಯ್ ಚಾರ್ಜ್ ಎಷ್ಟು?

  ಇನ್ನು ಬಾಲಿವುಡ್‌ ಹ್ಯಾಂಡ್ಸಮ್ ಹಂಕ್ ಹೃತಿಕ್ ರೋಷನ್ ಕೂಡ ದುಬಾರಿ ಮೊತ್ತವನ್ನು ಪಡೆದುಕೊಳ್ಳುತ್ತಾರೆ. ಹೃತಿಕ್ ರೋಷನ್ ಪ್ರೈವೇಟ್ ಕಾರ್ಯಕ್ರಮಗಳಲ್ಲಿ ಡಾನ್ಸ್ ಮಾಡಬೇಕು ಎಂದರೆ ಅವರಿಗೆ 2. 5 ಕೋಟಿ ರೂ. ಹಣವನ್ನು ಕೊಡಬೇಕಾಗುತ್ತೆ. ಹಾಗೆ ನಟ ರಣ್ಬೀರ್ ಕಪೂರ್ ಕೂಡ ಇದೇ ಸಾಲಿನಲ್ಲಿ ಇದ್ದಾರೆ. ರಣ್ಬೀರ್ 2 ಕೋಟಿ ರೂ. ಪಡೆಯುತ್ತಾರಂತೆ. ನಟ ಅಕ್ಷಯ್ ಕುಮಾರ್ ಒಂದು ನೃತ್ಯಕ್ಕೆ 2.5 ಕೋಟಿ ರೂ. ಚಾರ್ಜ್ ಮಾಡುತ್ತಾರೆ.

  English summary
  Deepika Padukone to Katrina Kaif Bollywood Stars Charge Crore To dance at Birthday Parties, Know More,
  Saturday, July 16, 2022, 19:44
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X