»   » ವಿವಾದಗಳನ್ನ ಹೊರತು ಪಡಿಸಿ ಬುಲೆಟ್ ಪ್ರಕಾಶ್ ಏನ್ಮಾಡ್ತಿದ್ದಾರೆ.?

ವಿವಾದಗಳನ್ನ ಹೊರತು ಪಡಿಸಿ ಬುಲೆಟ್ ಪ್ರಕಾಶ್ ಏನ್ಮಾಡ್ತಿದ್ದಾರೆ.?

Posted By:
Subscribe to Filmibeat Kannada

ನಿನ್ನೆ-ಮೊನ್ನೆಯಂತೂ ಕನ್ನಡದ ಹಾಸ್ಯ ನಟ ಬುಲೆಟ್ ಪ್ರಕಾಶ್ ಬೇಡದ ವಿಚಾರಕ್ಕೆ ಬ್ರೇಕಿಂಗ್ ನ್ಯೂಸ್ ಮಾಡಿದರು. ಕನ್ನಡ ಚಿತ್ರರಂಗದ ಸ್ಫೋಟಕ ವಿಚಾರ ಬಯಲು ಮಾಡುತ್ತೇನೆ ಎಂದು ಕಡೆಗೆ 'ಡಮ್ಮಿ' ಬುಲೆಟ್ ಹಾರಿಸಿ ಬಿಟ್ಟರು ಬುಲೆಟ್ ಪ್ರಕಾಶ್.

ಅಷ್ಟಕ್ಕೂ ಬುಲೆಟ್ ಪ್ರಕಾಶ್ ಹೀಗೆ ಮಾಡಿದ್ದು 'ಪಬ್ಲಿಸಿಟಿ ಗಿಮಿಕ್' ಎಂಬುದು ಕೆಲವರ ಅಭಿಪ್ರಾಯ. ಹಾಗಾದ್ರೆ, ಪ್ರಚಾರದ ಗೀಳು ಬುಲೆಟ್ ಪ್ರಕಾಶ್ ರವರಿಗೆ ಅಂಟಿಕೊಂಡಿದ್ಯಾ.?

ಹಾಸ್ಯ ನಟನಾಗಿ ಬಹುಬೇಡಿಕೆ ಹೊಂದಿದ್ದ ನಟ ಬುಲೆಟ್ ಪ್ರಕಾಶ್ ಗೆ ಈಗ ಪ್ರಚಾರದ ಅವಶ್ಯಕತೆ ಆದರೂ ಏನಿದೆ.? ವಿವಾದಗಳನ್ನ ಹೊರತು ಪಡಿಸಿ ನಟ ಬುಲೆಟ್ ಪ್ರಕಾಶ್ ಏನ್ ಮಾಡ್ತಿದ್ದಾರೆ ಎಂಬುದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ಓದಿರಿ....

ಪ್ರಚಾರದ ಗಿಮಿಕ್

ಬುಲೆಟ್ ಪ್ರಕಾಶ್ ಸದ್ಯ ನಡೆದುಕೊಳ್ಳುತ್ತಿರುವ ರೀತಿ ನೋಡಿ ಅನೇಕರು ಸಾಮಾಜಿಕ ಜಾಲತಾಣಗಳಲ್ಲಿ ಇದು ಪ್ರಚಾರದ ಗಿಮಿಕ್ ಎಂದೇ ವ್ಯಾಖ್ಯಾನಿಸುತ್ತಿದ್ದಾರೆ.[ಬುಲೆಟ್ ಪ್ರಕಾಶ್ ಗೆ ಬೆಂಡೆತ್ತಿ ಬ್ರೇಕ್ ಹಾಕುತ್ತಿರುವ ಕಿಚ್ಚ ಸುದೀಪ್ 'ಭಕ್ತ'ರು]

ಡಿಮ್ಯಾಂಡ್ ಇಲ್ವಾ.?

ವರ್ಷಗಳ ಹಿಂದೆ ನಟ ಬುಲೆಟ್ ಪ್ರಕಾಶ್ ರವರಿಗೆ ಒಬ್ಬ ಹಾಸ್ಯ ನಟನಾಗಿ ಇದ್ದ ಡಿಮ್ಯಾಂಡ್ ಸದ್ಯ ಕಮ್ಮಿ ಆಗಿದೆ ಅನ್ನೋದು ಕೆಲವರ ಅಭಿಪ್ರಾಯ. ಹಿಂದೆ ವರ್ಷಪೂರ್ತಿ ಸಿನಿಮಾಗಳಲ್ಲಿ ಬಿಜಿಯಾಗಿರುತ್ತಿದ್ದ ಬುಲೆಟ್ ಪ್ರಕಾಶ್ ಕೈಯಲ್ಲಿ ಈಗ ಚಿತ್ರಗಳ ಸಂಖ್ಯೆ ಬೆರಳೆಣಿಕೆಯಷ್ಟಕ್ಕೆ ಇಳಿದಿದ್ಯಂತೆ.[ಬುಲೆಟ್ ಪ್ರಕಾಶ್ ಬೆಟ್ಟು ಮಾಡಿ ತೋರಿಸಿದ 'ಆ' ಪ್ರಖ್ಯಾತ ನಟ ಯಾರು.?]

ಸ್ಟಾರ್ ನಟರ ಚಿತ್ರಗಳು ಏನಾದವು.?

ಸ್ಟಾರ್ ನಟರ ಸಿನಿಮಾಗಳಲ್ಲಿ ಬುಲೆಟ್ ಪ್ರಕಾಶ್ ಕಂಪಲ್ಸರಿ ಎನ್ನುವ ಕಾಲವೊಂದಿತ್ತು. ಆದ್ರೀಗ, ಅದು ಬದಲಾದಂತೆ ಕಾಣುತ್ತಿದೆ.

ಒಳ್ಳೆ ಪಾತ್ರಗಳು ಸಿಗುತ್ತಿಲ್ವಾ.?

ಸದ್ಯ ಬುಲೆಟ್ ಪ್ರಕಾಶ್ ನಟಿಸುತ್ತಿರುವ ಸಿನಿಮಾಗಳಲ್ಲೂ, ಅವರ ಪಾತ್ರಕ್ಕೆ ಪ್ರಾಮುಖ್ಯತೆ ಸಿಗುತ್ತಿಲ್ಲ. ಹೀಗೆ ಬಂದು ಹಾಗೆ ಹೋಗುವ ಪಾತ್ರಗಳೇ ಬುಲೆಟ್ ಪ್ರಕಾಶ್ ಪಾಲಿಗೆ ಹೆಚ್ಚಾಗುತ್ತಿವೆ.[ಬಾಂಬ್ ಹಾಕಿದ್ದು ಬುಲೆಟ್ ಪ್ರಕಾಶ್, ಖಡಕ್ ಉತ್ತರ ಕೊಟ್ಟಿದ್ದು ಜಗ್ಗೇಶ್.!]

ನೋವು

ಇದೇ ಕಾರಣದಿಂದ ಬುಲೆಟ್ ಪ್ರಕಾಶ್ ಭಾವುಕರಾದ್ರಾ.? ಅನೇಕ ವಿಷಯಗಳಲ್ಲಿ ನಾನು ನೊಂದಿದ್ದೇನೆ ಎಂದು ಮಾಧ್ಯಮಗಳ ಮುಂದೆ ಬುಲೆಟ್ ಪ್ರಕಾಶ್ ಹೇಳಿಕೊಂಡಿದ್ದಾರೆ.[ರಾತ್ರಿ 'ಬಾಂಬ್' ಸಿಡಿಸಿ ಬೆಳಗ್ಗೆ 'ಉಲ್ಟಾ' ಹೊಡೆದ ಬುಲೆಟ್ ಪ್ರಕಾಶ್]

ಗ್ರೂಪಿಸಂ ನಿಂದಾಗಿ ಹೀಗೆ ಆಯ್ತಾ.?

ಬುಲೆಟ್ ಪ್ರಕಾಶ್ ರವರೇ ಹೇಳುವ ಹಾಗೆ, ಸ್ಯಾಂಡಲ್ ವುಡ್ ನಲ್ಲಿ ನಡೆಯುತ್ತಿರುವ 'ಗ್ರೂಪಿಸಂ' ನಿಂದಲೇ ಅವರಿಗೆ ಅವಕಾಶಗಳು ಕಡಿಮೆ ಆಗುತ್ತಿವೆಯಾ.? ಬುಲೆಟ್ ಪ್ರಕಾಶ್ ಅಷ್ಟಕ್ಕೂ ಹೇಳಲು ಹೊರಟ ವಿಷಯ ಏನಿರಬಹುದು.? ಎಂಬ ಪ್ರಶ್ನೆಗಳಿಗೆ ಅವರೇ ಉತ್ತರ ಕೊಡಬೇಕು.[ದೊಡ್ಡ ನಟನ ಸಣ್ಣತನ ಇಂದು ಬಯಲು: ಬುಲೆಟ್ ಪ್ರಕಾಶ್ ರಿಂದ ಮಹಾ ಸ್ಫೋಟ.! ]

English summary
Demand decreasing for Kannada Actor Bullet Prakash in Sandalwood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada