»   » ಅಧ್ಯಕ್ಷ ಶರಣ್ ಗಾಯನಕ್ಕೆ ಈಗ ಸಖತ್ ಡಿಮ್ಯಾಂಡ್

ಅಧ್ಯಕ್ಷ ಶರಣ್ ಗಾಯನಕ್ಕೆ ಈಗ ಸಖತ್ ಡಿಮ್ಯಾಂಡ್

Posted By:
Subscribe to Filmibeat Kannada

ನಟ ಶರಣ್ ನಟನೆಯ ಜೊತೆಗೆ ಈಗ ಹಾಡು ಹೇಳುವುದು ಸಹ ಹೆಚ್ಚಾಗಿದೆ. ಹಾಸ್ಯ ನಟನಾಗಿದ್ದ ಶರಣ್ ನಂತರ ನಾಯಕರಾದರು. ನಾಯಕನಾಗಿ ಯಶಸ್ಸು ಗಳಿಸಿದ ಶರಣ್ ಈಗ ಗಾಯಕನಾಗಿ ಹೆಚ್ಚು ಜನಪ್ರಿಯರಾಗುತ್ತಿದ್ದಾರೆ. ಇತ್ತೀಚೆಗಷ್ಟೇ ವಿನೋದ್ ಪ್ರಭಾಕರ್ ಅಭಿನಯದ 'ಕ್ರ್ಯಾಕ್' ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ.

ಶರಣ್ ಹಾಡಿರುವ ಈ ಹಾಡಿಗೆ ಶಮಿತಾ ಮಲ್ನಾಡ್ ಸಂಗೀತ ಒದಗಿಸಿದ್ದಾರೆ. ನಿರ್ದೇಶಕ ರಾಮ್ ನಾರಾಯಣ್ ಈ ಹಾಡಿಗೆ ಸಾಹಿತ್ಯ ಬರೆದಿದ್ದು, 'ನಂಗೆ ನಾನೇ ಕಟ್ಟಿಕೊಂಡೆ ಗೋರಿ..' ಎಂಬ ಸಾಲುಗಳು ಕೇಳಲು ಹಿತವಾಗಿದೆ. ಸದ್ಯ, ಟ್ರೈಲರ್ ಮೂಲಕ ಸೌಂಡ್ ಮಾಡುತ್ತಿರುವ ಕ್ರ್ಯಾಕ್ ಸಿನಿಮಾ ಸದ್ಯದಲ್ಲೇ ತೆರೆಗೆ ಬರಲಿದೆ.

Demand for Actor Sharan's singing

ಶರಣ್ ಈಗಾಗಲೇ 'ವಜ್ರಕಾಯ', 'ರಾಜರಾಜೇಂದ್ರ', 'ಬುಲೆಟ್ ಬಸ್ಯಾ' ಸೇರಿದಂತೆ ಹಲವು ಚಿತ್ರಗಳಲ್ಲಿ ಹಾಡಿದ್ದಾರೆ. ಲೇಟೆಸ್ಟ್ ಆಗಿ ಗಣೇಶ್ ನಟನೆಯ 'ಮುಗುಳುನಗೆ' ಚಿತ್ರದಲ್ಲಿಯೂ ಶರಣ್ ಹಾಡೊಂದಕ್ಕೆ ಕೂಡ ದ್ವನಿಯಾಗಿದ್ದರು. 'ಮುಗುಳುನಗೆ' ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ನೀಡಿದ್ದು, ಇದೇ ಮೊದಲ ಬಾರಿಗೆ ಹರಿಕೃಷ್ಣ ಸಂಗೀತಕ್ಕೆ ಶರಣ್ ಹಾಡಿದ್ದಾರೆ.

English summary
Kannada Actor Sharan sing a song for two New Movies. Mugulunage and Crack Movies.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada