For Quick Alerts
  ALLOW NOTIFICATIONS  
  For Daily Alerts

  ಅವಹೇಳನಕಾರಿ ಪೋಸ್ಟ್: ಬೇಸರ ವ್ಯಕ್ತಪಡಿಸಿದ ವಿನೋದ್‌ ರಾಜ್‌

  By ಫಿಲ್ಮಿಬೀಟ್ ಡೆಸ್ಕ್
  |

  ನಟ ವಿನೋದ್ ರಾಜ್‌ ತಾಯಿ ಲೀಲಾವತಿ ಅವರೊಟ್ಟಿಗೆ ಚಿತ್ರರಂಗದಿಂದ, ಗಾಂಧಿ ನಗರದಿಂದ ದೂರ ಹೋಗಿ ನೆಲಮಂಗಲದ ಬಳಿಕ ಹಳ್ಳಿಯೊಂದರಲ್ಲಿ ತಮ್ಮ ಪಾಡಿಗೆ ತಾವು ವ್ಯವಸಾಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.

  ಹೀಗಿದ್ದರೂ ಸಹ ಕೆಲವು ಕಿಡಿಗೇಡಿಗಳು ಉದ್ದೇಶಪೂರ್ವಕವಾಗಿ ಈ ಅಮ್ಮ ಮಗನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಇಲ್ಲ ಸಲ್ಲದ ಕಂತೆಗಳನ್ನು ಹೆಣೆದು ಮಾನಹಾನಿಗೆ ಯತ್ನಿಸಿದ್ದರು. ವಿನೋದ್ ರಾಜ್‌ ಹಾಗೂ ಲೀಲಾವತಿ ಅವರ ಮನಸ್ಸಿಗೆ ಇದರಿಂದ ಬಹಳ ನೋವು ಮಾಡಿಕೊಂಡಿದ್ದರು.

  ವಿನೋದ್ ರಾಜ್‌ ಹಾಗೂ ಲೀಲಾವತಿ ವಿರುದ್ಧ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಬಹಳ ಕೆಟ್ಟದಾಗಿ ಪೋಸ್ಟ್‌ಗಳನ್ನು ಹಾಕಿದ್ದಾರೆ. ತಮ್ಮ ಪಾಡಿಗೆ ತಾವು ವ್ಯವಸಾಯ ಮಾಡುತ್ತಾ ಸಾಮಾಜಿಕ ಜಾಲತಾಣದಿಂದ ದೂರ ಇರುವ ವಿನೋದ್‌ ರಾಜ್‌ಗೆ ಇದರ ಬಗ್ಗೆ ಮಾಹಿತಿಯೇ ಇರಲಿಲ್ಲ.

  ವಿನೋದ್ ರಾಜ್‌ ಗೆಳೆಯರು ಕೆಲವರು ಈ ಬಗ್ಗೆ ಎಚ್ಚಿರಿಸಿದಾಗ ಠಾಣೆಯಲ್ಲಿ ದೂರು ನೀಡಿದ್ದರು ವಿನೋದ್ ರಾಜ್‌. ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದು, ಪೊಲೀಸರು ಕರೆದಿದ್ದಕ್ಕಾಗಿ ಠಾಣೆಗೆ ವಿನೋದ್ ರಾಜ್‌ ಭೇಟಿ ನೀಡಿದ್ದರು.

  ಠಾಣೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿದ ವಿನೋದ್ ರಾಜ್‌, ''ನಾನು ಫೇಸ್‌ಬುಕ್ ಬಳಸುವುದಿಲ್ಲ ಹಾಗಾಗಿ ನನಗೆ ವಿಷಯ ಗೊತ್ತಿರಲಿಲ್ಲ. ಆದರೆ ಸ್ನೇಹಿತರು ಹೇಳಿದ ಮೇಲೆ ವಿಷಯ ಗೊತ್ತಾಯ್ತು. ಅಶ್ಲೀಲ ಚಿತ್ರಗಳನ್ನು ಆ ವ್ಯಕ್ತಿ ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾನೆ. ಅದಕ್ಕೆ ನನ್ನ ಮುಖವನ್ನು ಎಡಿಟ್ ಮಾಡಿ ಹಾಕಿದ್ದಾನೆ'' ಎಂದರು ವಿನೋದ್ ರಾಜ್‌.

  ಮನಸ್ಸಿಗೆ ಬಹಳ ಬೇಸರವಾಗಿದೆ: ವಿನೋದ್ ರಾಜ್

  ಮನಸ್ಸಿಗೆ ಬಹಳ ಬೇಸರವಾಗಿದೆ: ವಿನೋದ್ ರಾಜ್

  ''ನಾವು ವ್ಯವಸಾಯ ಮಾಡಿಕೊಂಡು ನಮ್ಮ ಪಾಡಿಗೆ ನಾವಿದ್ದೇವೆ. ಆದರೆ ನಮ್ಮ ಮರ್ಯಾದೆ ಕಳೆಯಲೆಂದೇ ಕೆಲವರು ಹೀಗೆ ಮಾಡುತ್ತಿದ್ದಾರೆ. ಇದರಿಂದ ಮನಸ್ಸಿಗೆ ಬಹಳ ನೋವಾಗಿದೆ. ನನ್ನ ತಾಯಿಯವರಿಗೆ ಆರೋಗ್ಯ ಸರಿ ಇಲ್ಲ, ಅವರಿಗೆ ನಡೆಯೋಕೆ ಸಹ ಕಷ್ಟವಾಗುತ್ತಿದೆ. ಇಂಥಹಾ ಸಮಯದಲ್ಲಿ ಇಂಥಹಾ ಸುದ್ದಿಗಳೆಲ್ಲ ಕೇಳಿ ಮನಸ್ಸಿನ ಇನ್ನಷ್ಟು ನೋವು ಮಾಡಿಕೊಳ್ಳುತ್ತಾರೆ. ದೂರು ನೀಡಿದ್ದೇವೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ'' ಎಂದಿದ್ದಾರೆ ವಿನೋದ್ ರಾಜ್‌.

  ವಿಷಯ ತಿಳಿಸಿದ್ದ ನಟ ಸಾಯಿಪ್ರಕಾಶ್

  ವಿಷಯ ತಿಳಿಸಿದ್ದ ನಟ ಸಾಯಿಪ್ರಕಾಶ್

  ಕಳೆದ ವರ್ಷ ನವೆಂಬರ್‌ ತಿಂಗಳಲ್ಲಿ ವಿನೋದ್ ರಾಜ್ ಹೆಸರಲ್ಲಿ ಯಾರೊ ಕಿಡಿಗೇಡಿಗಳು ನಕಲಿ ಖಾತೆ ತೆರೆದು ಸಿನಿಮಾ ನಟ-ನಟಿಯರಿಗೆ ಸಂದೇಶಗಳನ್ನು ಕಳಿಸಿ, ಹಣ ಕೇಳಿದ್ದರು. ನಟ ಸಾಯಿಪ್ರಕಾಶ್ ಈ ವಿಷಯವನ್ನು ವಿನೋದ್‌ ರಾಜ್‌ಗೆ ತಿಳಿಸಿದ್ದರು. ವಿಷಯ ಗೊತ್ತಾಗುತ್ತಿದ್ದಂತೆ ವಿನೋದ್ ರಾಜ್ ಅವರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಆ ನಂತರ ವಿನೋದ್ ರಾಜ್‌ ಅವರ ಚಿತ್ರವನ್ನು ಎಡಿಟ್ ಮಾಡಿ ಅಶ್ಲೀಲ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕೆಲವು ಕಿಡಿಗೇಡಿಗಳು ಪ್ರಕಟಿಸಿದ್ದರು.

  'ಮುಖವಾಡ' ಸಿನಿಮಾ ಮೂಲಕ ಕಮ್‌ಬ್ಯಾಕ್?

  'ಮುಖವಾಡ' ಸಿನಿಮಾ ಮೂಲಕ ಕಮ್‌ಬ್ಯಾಕ್?

  ನೆಲಮಂಗಲದ ಮೈಲನಹಳ್ಳಿ ಗ್ರಾಮದಲ್ಲಿ ಕೃಷಿಯಲ್ಲಿ ತೊಡಗಿರುವ ವಿನೋದ್ ರಾಜ್, ಸಮಾಜ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಈಗ ಸಿನಿಮಾಕ್ಕೆ ಮರುಪ್ರವೇಶ ಮಾಡುವ ಉತ್ಸಾಹದಲ್ಲಿದ್ದಾರೆ. 'ಮುಖವಾಡ' ಎಂಬ ಸಿನಿಮಾ ಮೂಲಕ ವಿನೋದ್ ರಾಜ್ ಚಿತ್ರರಂಗಕ್ಕೆ ಮರಳುವ ಸಾಧ್ಯತೆ ಇದೆ. 'ಮುಖವಾಡ' ಸಿನಿಮಾದ ಘೋಷಣೆ ಆಗಿತ್ತಾದರೂ ಆ ಸಿನಿಮಾ ಮುಂದೇನಾಯ್ತು ಎಂಬುದು ತಿಳಿದು ಬಂದಿಲ್ಲ.

  ವಿನೋದ್ ರಾಜ್ ತೋಟಕ್ಕೆ ಬೆಂಕಿ

  ವಿನೋದ್ ರಾಜ್ ತೋಟಕ್ಕೆ ಬೆಂಕಿ

  ಕಳೆದ ವರ್ಷಾರಂಭದಲ್ಲಿ ವಿನೋದ್ ರಾಜ್‌ ಅವರ ತೋಟಕ್ಕೆ ಬೆಂಕಿ ಬಿದ್ದಿತ್ತು. ಯಾರೊ ಕಿಡಿಗೇಡಿಗಳು ಬೆಂಕಿ ಇಟ್ಟಿದ್ದರೊ ಅಥವಾ ತಾನಾಗಿಯೇ ಬೆಂಕಿ ಬಿತ್ತೊ ಎಂಬುದು ಗೊತ್ತಾಗಿರಲಿಲ್ಲ. ಆದರೆ ಇಡೀ ತೋಟದಲ್ಲಿ ವ್ಯಾಪಕವಾಗಿ ಬೆಂಕಿ ಆವರಿಸಿಕೊಂಡ ಪರಿಣಾಮ, 20ಕ್ಕೂ ಹೆಚ್ಚು ತೆಂಗಿನ ಮರ, ಮಾವು, ಸಪೋಟ ಮುಂತಾದ ಮರ-ಗಿಡಗಳು ಸುಟ್ಟು ಭಸ್ಮವಾಗಿವೆ. ಅಪಾರ ಪ್ರಮಾಣದ ನಷ್ಟ ಉಂಟಾಗಿದೆ. ಪ್ರೀತಿಯಿಂದ ಬೆಳೆಸಿದ ತೋಟ ಬೆಂಕಿಗೆ ಆಹುತಿಯಾಗಿದ್ದರಿಂದ ಲೀಲಾವತಿ ಕಣ್ಣೀರಿಟ್ಟಿದ್ದರು. ಅದಕ್ಕೂ ಮುನ್ನ ವಿನೋದ್ ರಾಜ್ ಅವರಿಂದ ಗುಂಪೊಂದು 1 ಲಕ್ಷ ರು ಹಣ ದೋಚಿಕೊಂಡು ಪರಾರಿಯಾಗಿದ್ದರು. ''ಬ್ಯಾಂಕಿನಲ್ಲಿ ಹಣ ಡ್ರಾ ಮಾಡಿಕೊಂಡು ಬಂದೆ. ರಸ್ತೆಯ ಮಧ್ಯೆದಲ್ಲಿ ಕಾರು ಪಂಚರ್ ಆಯ್ತು. ಆ ವೇಳೆ ಇಬ್ಬರು ಹುಡುಗರು ಬಂದರು. ಮೊದಲು 16 ವರ್ಷದ ಹುಡುಗ ಬಂದ. ನಾನು ನಿಮ್ಮ ಅಭಿಮಾನಿ ಅಂತ ಮಾತಾಡಿಕೊಂಡು ಇದ್ದ. ಕಾರಿನ ಟೈರ್ ಬದಲಾವಣೆ ಮಾಡುವ ಅಂತರದಲ್ಲಿ ಹಣ ತಗೊಂಡು ಹೋಗಿದ್ದಾನೆ'' ಎಂದು ಆಗ ಮಾಹಿತಿ ನೀಡಿದ್ದರು ವಿನೋದ್ ರಾಜ್.

  English summary
  Some people post derogatory post on Facebook about actor Vinod Raj. He gave complaint to cyber police.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X