ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬಕ್ಕೆ ಕುಟುಂಬದ ಕಡೆಯಿಂದ ಸಿಕ್ತು ಭರ್ಜರಿ ಗಿಫ್ಟ್
Recommended Video
ಸ್ಯಾಂಡಲ್ ವುಡ್ ನ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ ಹುಟ್ಟುಹಬ್ಬದ ಸಂಭ್ರಮಕ್ಕೆ ಇನ್ನು ಒಂದು ದಿನ ಬಾಕಿ ಇದೆ. ಒಂದು ದಿನಕ್ಕೆ ಮುಂಚೆಯೇ ಪ್ರಜ್ವಲ್ ಗೆ ಭರ್ಜರಿ ಗಿಫ್ಟ್ ಸಿಕ್ಕಿದೆ. ಪ್ರಜ್ವಲ್ ಕುಟುಂಬದವರು ದೊಡ್ಡ ಗಿಫ್ಟನ್ನು ನೀಡಿ ಹುಟ್ಟಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ್ದಾರೆ.
ಹೌದು, ಪ್ರಜ್ವಲ್ ದೇವರಾಜ್ ಅವರಿಗೆ ದೇವರಾಜ್ ಕುಟುಂಬದವರು ದುಬಾರಿ ಕಾರೊಂದನ್ನು ಉಡುಗೊರೆಯಾಗಿ ನೀಡಿದೆ. ವೋಲ್ವೋ ಎಕ್ಸ್ ಸಿ-90 ಕಾರನ್ನು ಪ್ರಜ್ವಲ್ ದಂಪತಿಗೆ ಗಿಫ್ಟ್ ನೀಡಿದೆ ಕುಟುಂಬ. ಈ ಕಾರಿನ ಬೆಲೆ ಸುಮಾರು 90 ಲಕ್ಷ. ಕೆಂಪು ಬಣ್ಣದ ಹೊಸ ಕಾರಿನ ಮುಂದೆ ನಿಂತು ಇಡೀ ಕುಟುಂಬ ಸಂತಸದಿಂದ ಫೋಟೋಗೆ ಫೋಸ್ ನೀಡಿದ್ದಾರೆ.
ಪ್ರಜ್ವಲ್ ಪತ್ನಿ ರಾಗಿಣಿ, ಸಹೋದರ ಮತ್ತು ದೇವರಾಜ್ ದಂಪತಿ ವೋಲ್ವೋ ಎಕ್ಸ್ ಸಿ-90 ಕಾರಿನ ಮುಂದೆ ನಿಂತು ಕ್ಲಿಕ್ಕಿಸಿಕೊಂಡಿರುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿಮಾನಿಗಳು ಸಹ ಪ್ರಜ್ವಲ್ ಗೆ ಶುಭ ಕೋರುತ್ತಿದ್ದಾರೆ.

ಪ್ರಜ್ವಲ್ ಹುಟ್ಟುಹಬ್ಬದ ಪ್ರಯುಕ್ತ ಮನೆಯವರಿಂದ ದೊಡ್ಡ ಉಡುಗೊರೆ ಸಿಕ್ಕಾಗಿದೆ. ಅಭಿಮಾನಿಗಳಿಗೂ ಸಹ ಪ್ರಜ್ವಲ್ ಕಡೆಯಿಂದ ಸಾಕಷ್ಟು ಗಿಫ್ಟ್ ಗಳು ಕಾದಿವೆ. ಪ್ರಜ್ವಲ್ ಅಭಿನಯದ 'ಜಂಟಲ್ ಮೆನ್' ಮತ್ತು 'ಇನ್ಸ್ ಪೆಕ್ಟರ್ ವಿಕ್ರಮ್' ಚಿತ್ರದ ಟೀಸರ್ ರಿಲೀಸ್ ಆಗುತ್ತಿದೆ.
ಪ್ರಜ್ವಲ್ ಬಳಿ ಕೈ ತುಂಬ ಸಿನಿಮಾಗಳಿವೆ. 'ಜೆಂಟಲ್ ಮೆನ್', 'ಇನ್ಸ್ ಪೆಕ್ಟರ್ ವಿಕ್ರಮ್', 'ರುದಿರಾ', 'ಅರ್ಜುನ್ ಗೌಡ', ಇನ್ನು ಹೆಸರಿಡದ ಪಿಸಿ ಶೇಖರ್ ನಿರ್ದೇಶನದ ಸಿನಿಮಾ ಜೊತೆಗೆ ಖದರ್ ಕುಮಾರ್ ನಿರ್ದೇಶನದ ಚಿತ್ರ ಕೂಡ ಪ್ರಜ್ವಲ್ ಬಳಿ ಇವೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಡೈನಾಮಿಕ್ ಪ್ರಿನ್ಸ್ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಲಿದ್ದಾರೆ.


Click it and Unblock the Notifications











