»   » ಲಂಡನ್‌ ಚಲನಚಿತ್ರೋತ್ಸವಕ್ಕೆ ‘ದೇವೀರಿ’

ಲಂಡನ್‌ ಚಲನಚಿತ್ರೋತ್ಸವಕ್ಕೆ ‘ದೇವೀರಿ’

Posted By: Staff
Subscribe to Filmibeat Kannada

ಬೆಂಗಳೂರು: ಯುವ ನಿರ್ದೇಶಕಿ ಕವಿತಾಲಂಕೇಶ್‌ ಅವರ ಚೊಚ್ಚಲ ನಿರ್ದೇಶನದ 'ದೇವಿರಿ" ಚಲನಚಿತ್ರ ಲಂಡನ್‌ನಲ್ಲಿ ನಡೆಯಲಿರುವ 44ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ.

ಖ್ಯಾತ ಪತ್ರಕರ್ತ ದಿ. ಪಿ. ಲಂಕೇಶ್‌ ಅವರ 'ಅಕ್ಕ" ಕಾದಂಬರಿ ಆಧಾರಿತ ಈ ಚಿತ್ರ, ನವೆಂಬರ್‌ 4 ರಂದು ಕೈರೋದಲ್ಲಿ ಆರಂಭವಾಗುವ ಚಲನಚಿತ್ರೋತ್ಸವ ಸ್ಪರ್ಧೆಯಲ್ಲಿ ನವೆಂಬರ್‌ 18ರಂದು ಪ್ರದರ್ಶನ ಕಾಣಲಿದೆ.

ಲಂಕೇಶ್‌ ಅವರ ಪುತ್ರಿಯಾಗಿರುವ ಕವಿತ ಅವರ ದೇವೀರಿ ಚಿತ್ರ, ಕೇರಳದ ಹೆಸರಾಂತ ಚಲನಚಿತ್ರ ನಿರ್ದೇಶಕ ಅರವಿಂದನ್‌ ಅವರ ಸ್ಮರಣಾರ್ಥ, ಚೊಚ್ಚಲ ನಿರ್ದೇಶನದ ಚಿತ್ರಕ್ಕೆ ನೀಡುವ 'ಅರವಿಂದನ್‌" ಪುರಸ್ಕಾರ, 47ನೇ ಅಖಿಲ ಭಾರತ ಚಲನಚಿತ್ರೋತ್ಸವದಲ್ಲಿ ವಿಶೇಷ ಪ್ರಶಸ್ತಿ ಹಾಗೂ ಕೇರಳದ 5ನೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಸ್ಪರ್ಧಿಸಿ ವಿಶೇಷ ಜ್ಯೂರಿ ಪುರಸ್ಕಾರಗಳಿಗೆ ಪಾತ್ರವಾಗಿದೆ.

ಚಿತ್ರದಲ್ಲಿ ಹಿಂದಿಯ 'ಫೈರ್‌" ಮತ್ತು '1947 ಅರ್ಥ್‌" ಚಿತ್ರಗಳ ಖ್ಯಾತಿಯ ನಂದಿತಾದಾಸ್‌ ಮತ್ತು ಬೆಂಗಳೂರಿನ ಬಾಸ್ಕೋ ಸಂಸ್ಥೆಯ ಆಶ್ರಯದಲ್ಲಿರುವ ಅನಾಥ ಬಾಲಕ ಮಂಜು ನಟಿಸಿದ್ದಾರೆ.

English summary
deveeri selected for London international film festival

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada