»   » ಸ್ಯಾಂಡಲ್ ವುಡ್ ಗೆ ದೇವಿಶ್ರೀ ಗುರೂಜಿ ಎಂಟ್ರಿ

ಸ್ಯಾಂಡಲ್ ವುಡ್ ಗೆ ದೇವಿಶ್ರೀ ಗುರೂಜಿ ಎಂಟ್ರಿ

By: ಉದಯರವಿ
Subscribe to Filmibeat Kannada

ರಾಸಲೀಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ವಿವಾದಕ್ಕೆ ಸಿಲುಕಿದ್ದ ದಿವ್ಯ ಜ್ಯೋತಿಷ್ಯಾಲಾಯದ ದೇವಿಶ್ರೀ ಗುರೂಜಿ ಇದೀಗ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಆದರೆ ಅವರು ಕಾಳಿಮಠದ ಋಷಿಕುಮಾರ್ ಅವರ ತರಹ ಬಣ್ಣಹಚ್ಚುತ್ತಿಲ್ಲ. ಬದಲಾಗಿ ಸಿನಿಮಾ ನಿರ್ಮಾಣಕ್ಕೆ ಕೈಹಾಕಿದ್ದಾರೆ.

ತಮ್ಮ ನಿರ್ಮಾಣ ಸಂಸ್ಥೆಗೆ ದೇವಿಶ್ರೀ ಪ್ರೊಡಕ್ಷನ್ಸ್ ಎಂದು ಹೆಸರಿಟ್ಟಿದ್ದು ಈಗಾಗಲೆ ಅದನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳಲು ಅರ್ಜಿ ಸಲ್ಲಿಸಿದ್ದಾರೆ. ರು.50 ಸಾವಿರ ನಗದು ಶುಲ್ಕ ಹಾಗೂ ಕೆಲವು ದಾಖಲೆಗಳನ್ನು ಫಿಲಂ ಚೇಂಬರ್ ಗೆ ಸಲ್ಲಿಸಿದ್ದಾರೆ. [ಜ್ಯೋತಿಷಿ ರಾಮಸ್ವಾಮಿ ದೇವಿಶ್ರೀ ರಾಸಲೀಲೆ ಬಹಿರಂಗ]

Devishree Guruji

ಈ ಸಂಬಂಧ ಫಿಲಂ ಚೇಂಬರ್ ಜೂ.2ರಂದು ಕಾರ್ಯಕಾರಿಣಿ ಸಭೆ ಕರೆದು ಅಂತಿಮ ತೀರ್ಮಾನ ಕೈಗೊಳ್ಳಲಿದೆ. ಇತ್ತೀಚೆಗೆ ಕನ್ನಡದಲ್ಲಿ ಭಕ್ತಿ ಪ್ರಧಾನ ಚಿತ್ರಗಳು ಕಡಿಮೆಯಾಗುತ್ತಿವೆ. ತಮ್ಮ ನಿರ್ಮಾಣ ಸಂಸ್ಥೆಯಡಿ ಭಕ್ತಿಪ್ರಧಾನ ಚಿತ್ರಗಳನ್ನು ನಿರ್ಮಿಸುತ್ತೇನೆ ಎಂದು ದೇವಿಶ್ರೀ ಹೇಳಿದ್ದಾರೆ.

ತಮ್ಮ ಚೊಚ್ಚಲ ನಿರ್ಮಾಣದ ಚಿತ್ರಕ್ಕೆ ಕೈತುತ್ತು ಎಂದು ಹೆಸರಿಟ್ಟಿದ್ದಾರೆ. ರಾಜೀವ್ ಕೃಷ್ಣ ಅವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದೆ. ಅಮ್ಮ ಮತ್ತು ಮಗುವಿನ ನಡುವಿನ ಸಂಬಂಧದ ಕಥಾಹಂದರವನ್ನು ಚಿತ್ರ ಒಳಗೊಂಡಿದೆ.

ಮಗನ ಪಾತ್ರವನ್ನು ಯಶವಂತ್ ಪೋಷಿಸಲಿದ್ದು, ತಾಯಿಯ ಪಾತ್ರಕ್ಕೆ ಸುಧಾರಾಣಿ ಅವರನ್ನು ಸಂಪರ್ಕಿಸಲಾಗಿದೆಯಂತೆ. ಆದರೆ ಸುಧಾರಾಣಿ ಇನ್ನೂ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ. ಪ್ರಮುಖ ಪಾತ್ರದಲ್ಲಿ ಕಿಲ್ಲರ್ ವೆಂಕಟೇಶ್ ಸಹ ಇದ್ದಾರೆ ಎನ್ನುತ್ತವೆ ಮೂಲಗಳು.

English summary
Controversal Godman Devishree Guruji who was popular through his astrology related talks and predictions on private TV channel is now enters into Sandalwood. But he is not acting, he is producing the movie under Devishree productions, his debut movie titled as "Kai Tuttu".
Please Wait while comments are loading...