»   » 'ದೇವ್ರಂಥ ಮನುಷ್ಯ' ಪ್ರಥಮ್ ಕ್ವಾಟ್ಲೆ ಅಷ್ಟಿಷ್ಟಲ್ಲ.!

'ದೇವ್ರಂಥ ಮನುಷ್ಯ' ಪ್ರಥಮ್ ಕ್ವಾಟ್ಲೆ ಅಷ್ಟಿಷ್ಟಲ್ಲ.!

Posted By:
Subscribe to Filmibeat Kannada

'ಬಿಗ್ ಬಾಸ್' ಪ್ರಥಮ್ ಈಗ ಸಿಕ್ಕಾಪಟ್ಟೆ ಬದಲಾಗಿದ್ದಾರೆ. ತಾವು ಆಯ್ತು, ತಮ್ಮ ಸಿನಿಮಾ ಆಯ್ತು ಅಂತ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ಸದ್ಯ, 'ಎಂಎಲ್ಎ' ಚಿತ್ರದಲ್ಲಿ ಪಾಲ್ಗೊಂಡಿರುವ ಪ್ರಥಮ್, 'ದೇವ್ರಂಥ ಮನುಷ್ಯ' ಸಿನಿಮಾ ಮಾಡ್ತಿರುವುದು ಗೊತ್ತೆ ಇದೆ. ಈ ಚಿತ್ರದ ಎರಡನೇ ಟೀಸರ್ ರಿಲೀಸ್ ಆಗಿದ್ದು, ಪ್ರಥಮ್ ಕ್ವಾಟ್ಲೆ ಇಲ್ಲಿಯೂ ಮುಂದುವರೆದಿದೆ.

'ದೇವ್ರಂಥ ಮನುಷ್ಯ'ನ ಟೀಸರ್ ರಿಲೀಸ್! ಪ್ರಥಮ್ ಡೈಲಾಗ್ ಗೆ ತಲೆ ಗಿರಗಿಟ್ಲೆ

ಹೌದು, ಮೊದಲನೇ ಟೀಸರ್ ನಲ್ಲಿ ದರ್ಶನ್, ಸುದೀಪ್, ಯಶ್, ಪುನೀತ್ ಅವರಂತೆ ಡೈಲಾಗ್ ಹೊಡೆದು ಗಮನ ಸೆಳೆದಿದ್ದ ಪ್ರಥಮ್ ಈಗ, ಡಾ.ರಾಜ್ ಕುಮಾರ್, ಉದಯ್ ಕುಮಾರ್ ಮತ್ತು ಕಲ್ಯಾಣ್ ಕುಮಾರ್ ಅವರ ನಂತರ 'ನಾನು' ಎಂದು ತಮ್ಮ ವರಸೆ ತೋರಿಸುತ್ತಿದ್ದಾರೆ. ಅದು ಹೇಗೆ ಎಂದು, ಮುಂದೆ ನೀಡಲಾಗಿರುವ ಟೀಸರ್ ನಲ್ಲಿ ನೋಡಬಹುದು.

Devrantha Manushya Movie 2nd Teaser Released

ಅಂದ್ಹಾಗೆ, ಪ್ರಥಮ್ ಗೆ ಈ ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು, ಪೂರ್ಣಿಮಾ ಮತ್ತು ಬೆತ್ತನಗೆರೆ ಖ್ಯಾತಿಯ 'ನಯನ' ಹೀರೋಯಿನ್ ಆಗಿ ಬಣ್ಣ ಹಚ್ಚಿದ್ದಾರೆ. ಇನ್ನು ವಿಶೇಷ ಪಾತ್ರದಲ್ಲಿ 'ಕಿರಿಕ್ ಕೀರ್ತಿ' ಅವರು ಕೂಡ ಕಾಣಿಸಿಕೊಳ್ಳುತ್ತಿದ್ದಾರೆ.

ಕಿರಿಣ್ ಶೆಟ್ಟಿ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಮಂಜುನಾಥ್, ಸುರೇಶ್ ಮತ್ತು ವೆಂಕಟ್ ಗೌಡ ನಿರ್ಮಾಣ ಮಾಡುತ್ತಿದ್ದಾರೆ. ಅರುಣ್ ಸುರೇಶ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದ್ದು, ರಾಜೇಶ್ ರಾಮನಾಥ್ ಅವರ ಸಂಗೀತವಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ 'ದೇವ್ರಂಥ ಮನುಷ್ಯ' ಆದಷ್ಟೂ ಬೇಗ ತೆರೆಮೇಲೆ ಬರಲಿದೆ.

'ದೇವ್ರಂಥ ಮನುಷ್ಯ' ಚಿತ್ರದ 2ನೇ ಟೀಸರ್ ಇಲ್ಲಿದೆ ನೋಡಿ

English summary
Biggboss Pratham Starring 'Devrantha Manushya' Movie 2nd Teaser Released. The Movie Directed by Kiran Shetty.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada